
ಕುಕನೂರು ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ರಾಷ್ಟ್ರಮಟ್ಟದ ಪುಟ್ಟ ಕಲಾವಿದ ಪ್ರಶಸ್ತಿ.

ಕುಕನೂರ : ಸತ್ಯಮಿಥ್ಯ (ಆಗಸ್ಟ್ -20).
ರಾಷ್ಟ್ರಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಚಿತ್ರ ಕಲೋಕೋತ್ಸವದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ರಾಷ್ಟ್ರಮಟ್ಟದ ಪುಟ್ಟ ಕಲಾವಿದ ಚಿಣ್ಣರ ಚಿತ್ರ ಚಿತ್ತಾರ ಚಿತ್ರ ಪ್ರಶಸ್ತಿ ಲಭಿಸಿದೆ .
ಬಣ್ಣದ ಮನೆ ವೇದಿಕೆ (ರಿ) ಗದಗ, ಕರ್ನಾಟಕ ಬಾಲ ವಿಕಾಸ ಅಕಾಡಮಿ ಧಾರವಾಡ ಮತ್ತು ಬಾಲ ಭವನ ಸೊಸೈಟಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಚಿತ್ರಕಲೋತ್ಸವದಲ್ಲಿ ರಾಷ್ಟ್ರಮಟ್ಟದ ಪುಟ್ಟ ಕಲಾವಿದ ಪ್ರಶಸ್ತಿಯನ್ನು ಕುಕನೂರು ಪಟ್ಟಣದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ರಾಜಾಭಕ್ಷಿ ಎಚ್.ಪಿ. ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ.
ಕಾರ್ಯಕ್ರಮದಲ್ಲಿ ಬಸವರಾಜ್ ಹೊರಟ್ಟಿ ಮಾನ್ಯ ಸಭಾಪತಿಗಳು ವಿಧಾನಸಭಾ ಪರಿಷತ್ ಬೆಂಗಳೂರು ಪ್ರಶಸ್ತಿ ಪ್ರಧಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವಿ. ಸಂಕನೂರ ವಿಧಾನ ಪರಿಷತ್ ಸದಸ್ಯರು ಗೌರವ ಅಧ್ಯಕ್ಷರು ವಹಿಸಿದ್ದರು. ಕಾರ್ಯಕ್ರಮ ಸಮಾರಂಭದಲ್ಲಿ ನಾಡಿನ ಪ್ರಮುಖ ಗಣ್ಯಮಾನ್ಯರು ಉಪಸ್ಥಿತರಿದ್ದರು.
ಕುಕುನೂರು ಪಟ್ಟಣದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಯಾದ ರಾಜಾಭಕ್ಷಿ ಎಚ್. ಪಿ. ಗೆ ಚಿತ್ರಕಲಾ ಶಿಕ್ಷಕರಾದ ಪರಮೇಶ್ವರ್ ಪತ್ತಾರ ಮತ್ತು ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗೆ ಅಭಿನಂದಿಸಿದ್ದಾರೆ.
ವರದಿ :ಚೆನ್ನಯ್ಯ ಹಿರೇಮಠ.