ಗಜೇಂದ್ರಗಡ : ಹಳ್ಳಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಎಸ್ಎಫ್ಐ ಆಗ್ರಹ
ಪ್ರತಿವರ್ಷ ಶೈಕ್ಷಣಿಕ ವರ್ಷ ಆರಂಭ ಸಂದರ್ಭದಲ್ಲಿ ಹೋರಾಟ ಮಾಡಿಯೇ ಪರಿಹರಿಸುವ ಸ್ಥಿತಿ ನಿರ್ಮಾಣ.

ಗಜೇಂದ್ರಗಡ : ಹಳ್ಳಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಎಸ್ಎಫ್ಐ ಆಗ್ರಹ
ಗಜೇಂದ್ರಗಡ :ಸತ್ಯಮಿಥ್ಯ (ಜು -01)
ಸಮರ್ಪಕ ಬಸ್ ಒದಗಿಸಬೇಕೆಂದು ಒತ್ತಾಯಿಸಿ ನಗರದ ಬಸ್ ಡಿಪೋ ಎದುರು ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)ವತಿಯಿಂದ ಡಿಪೋ ಮ್ಯಾನೇಜರಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ರಾಜ್ಯ ಪಧಾದಿಕಾರಿ ಗಣೇಶ ರಾಠೋಡ್ ಮಾತನಾಡಿ. ಗಜೇಂದ್ರಗಡ ತಾಲ್ಲೂಕು ಶೈಕ್ಷಣಿಕವಾಗಿ ದಿನೇ ದಿನೇ ಬೆಳೆಯುತ್ತಿರುವ ನಗರವಾಗಿದ್ದು ಸುತ್ತಲೂ ಹಳ್ಳಿಗಳಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ ಆದರೆ ಅವರಿಗೆ ಸರಿಯಾಗಿ ಬಸ್ ಸೌಕರ್ಯ ಇಲ್ಲದೇ ಶಿಕ್ಷಣ ವಂಚಿತರಾಗುತ್ತಿದ್ದಾರೆ.
ಈ ಕುರಿತು ಸಂಘಟನೆವತಿಯಿಂದ ಪ್ರತಿವರ್ಷ ಶೈಕ್ಷಣಿಕ ವರ್ಷ ಆರಂಭ ಸಂದರ್ಭದಲ್ಲಿ ಹೋರಾಟ ಮಾಡಿಯೇ ಪರಿಹರಿಸುವ ಸ್ಥಿತಿ ನಿರ್ಮಾಣ ಆಗಿದೆ ಇದನ್ನು ಗಂಭೀರ ಎಂದು ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಮಾನ್ಯ ಡಿಪೋ ಮ್ಯಾನೇಜರ್ ಅವರು ಪರಿಹಾರ ಸೂಚಿಸಬೇಕು ಎಂದರು .
ನಂತರ ಎಸ್ ಎಫ್ ಐ ನ ಜಿಲ್ಲಾ ಮುಖಂಡರಾದ ಚಂದ್ರು ರಾಠೋಡ್ ಮಾತನಾಡಿ ನಮಗೆ ನಾಗರಸಕೊಪ್ಪ, ನಾಗರಸಕೊಪ್ಪ ತಾಂಡಾ, ಮಾಟರಂಗಿ, ಬೆಣಚಮಟ್ಟಿ ಈ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ತೀವ್ರ ಇದ್ದು ನಾಗರಸಕೊಪ್ಪ ಕ್ರಾಸ್ ಗೆ ಎಲ್ಲಾ ಬಸ್ ಗಳನ್ನು ನಿಲ್ಲಿಸಬೇಕು ಮತ್ತು ಮಾಟರಂಗಿಯಿಂದ ಬೆಳ್ಳಿಗ್ಗೆ ಬರುವ ಬಸ್ ನ್ನು ಮತ್ತೆ ಮಧ್ಯಾಹ್ನ ಮರಳಿ ಬಿಡಬೇಕೆಂದು ಮತ್ತು ಮಾಟರಂಗಿ, ನಾಗರಸಕೊಪ್ಪ, ನಾಗರಸಕೊಪ್ಪ ತಾಂಡಾ, ಬೆಣಚಮಟ್ಟಿ ಮಾರ್ಗವಾಗಿ ಒಂದು ಬಸ್ ನ್ನು ಬೆಳ್ಳಿಗ್ಗೆ ಮತ್ತು ಮಧ್ಯಾಹ್ನ ಎರಡು ಸಮಯ ಬಿಡಬೇಕೆಂದು ಒತ್ತಾಯಿಸಿದರು.
ಹೋರಾಟದ ಸ್ಥಳಕ್ಕೆ ಪ್ರಭಾರಿ ಡಿಪೋ ಮ್ಯಾನೇಜರ್ ಅವರು ಬಂದು ಮನವಿ ಸ್ವೀಕರಿಸಿ ಈ ಸಮಸ್ಯೆ ಬಗೆಹರಿಸಲು ಕಾಲಾವಕಾಶ ಬೇಕು ಹೊಸ ಡಿಪೋ ಮ್ಯಾನೇಜರ್ ಅವರು ಬಂದ ಕೂಡಲೇ ಈ ಸಮಸ್ಯೆ ಅವರ ಮುಂದೆ ತಿಳಿಸಿ ಬಗೆಹರಿಸಲು ಪ್ರಯತ್ನಿಸುತ್ತೆವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ತಾಲ್ಲೂಕು ಕಾರ್ಯದರ್ಶಿ ಶರಣು ಎಂ, ಮುಖಂಡರಾದ ಬಸವರಾಜ, ದ್ಯಾಮಾಣ್ಣ ಪೂಜಾರ್, ಪರಶುರಾಮ ಕೊನಸಾಗರ, ಬಸು ಪಾಟೀಲ್, ಸುಭಾಷ್ ಬಡಿಗೇರ, ವಿಜಯ ಮಡಿವಾಳ, ಬಸು ಹಗೇದಾಳ, ನೀಲಕಂಠ ಕರಡಿ, ಬಸವರಾಜ ನಾಗರಾಳ, ಮಾಹಾಂತೇಶ ಜೋಗಿ, ಅರುಣಕುಮಾರ ಕೊಟ್ಟುರು, ಅನಿಲ್ ಜಡದೇರ್,ಪ್ರತೀಕ ಪಲ್ಲೇದ ಮತ್ತು ಇತರರು ಉಪಸ್ಥಿತಿ ಇದ್ದರು.
ವರದಿ : ಸುರೇಶ ಬಂಡಾರಿ.