ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ – ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ.
ರಾಜ್ಯಸರ್ಕಾರದಿಂದ ರೈತರಿಗೆ ಅನ್ಯಾಯ - ಬೋಸ್ಲೆ.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ – ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ.
ರಾಜ್ಯಸರ್ಕಾರದಿಂದ ರೈತರಿಗೆ ಅನ್ಯಾಯ – ಬೋಸ್ಲೆ.
ಗಜೇಂದ್ರಗಡ – ಸತ್ಯ ಮಿಥ್ಯ ( ಜೂ -22).
ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ಇಂದು ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಗರದ ಮಾಜಿ ಸಚಿವ ಕಳಕಪ್ಪ ಬಂಡಿ ಗೃಹ ಕಛೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಕಾಲಕಾಲೇಶ್ವರ ವೃತ್ತದಲ್ಲಿ ಸಭೆ ಸೇರಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಶಿವಾನಂದ ಮಠದ. ರಾಜ್ಯಸರ್ಕಾರ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿರುವದರಿಂದ ದಿನಬಳಕೆ ವಸ್ತುಗಳ ದರ ಹೆಚ್ಚಳವಾಗಿದೆ. ಗ್ಯಾರಂಟಿಗಳಿಗಾಗಿ ತೆರಿಗೆ ಹೆಚ್ಚಳ ಅನಿವಾರ್ಯ ಎನ್ನುವ ಸಿದ್ದರಾಮಯ್ಯ. ಎಸ್ಸಿ ಎಸ್ಟಿ ಜನರ ಅಭಿವೃದ್ಧಿಗೆ ಮೀಸಲಿರಿಸಿದ್ದ ಹಣವನ್ನು ಭ್ರಷ್ಟಾಚಾರ ಮಾಡಿ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿರುವುದು ತನಿಖೆಯಿಂದ ಹೊರಬರುತ್ತಿದೆ. ರಾಜ್ಯಸರ್ಕಾರದ ಬೆಲೆ ಏರಿಕೆ ನೀತಿಗೆ ಜನತೆ ರೋಸಿಹೋಗಿದ್ದಾರೆ ಎಂದರು.
ತಾಲೂಕ ಬಿಜೆಪಿ ರೈತ ಮೋರ್ಚಾ ಮುಖಂಡ ಬಾಲಾಜಿರಾವ್ ಬೋಸ್ಲೆ ಮಾತನಾಡಿ. ರಾಜ್ಯದಲ್ಲಿ ಬಿಜೆಪಿ ಆಡಳಿತ ಮಾಡುವ ಸಂದರ್ಭದಲ್ಲಿ. ರೈತರಿಗೆ ಕೇಂದ್ರದ ಕಿಸಾನ್ ಸಮ್ಮಾನ್ ಹಣದ ಜೊತೆಗೆ ರಾಜ್ಯದಿಂದ ಹೆಚ್ಚುವರಿಗಾಗಿ 4,000 ರೂ ಗಳನ್ನು ನೀಡುವ ಯೋಜನೆ ಜಾರಿಯಲ್ಲಿತ್ತು. ಸಿದ್ದರಾಮಯ್ಯನವರು ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ನಂತರ ಆ ಯೋಜನೆಯನ್ನು ರದ್ದು ಮಾಡುವ ಮೂಲಕ ರಾಜ್ಯದ ರೈತರಿಗೆ ಮೋಸ ಮಾಡಿದ್ದಾರೆ.
ಬಿಜೆಪಿ ಮುಖಂಡ ಉಮೇಶ ಮಲ್ಲಾಪುರ ಮಾತನಾಡಿ. ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳ ನೀಡುವ ನೆಪದಲ್ಲಿ ನೋಂದಣಿ ಶುಲ್ಕ, ಅಬಕಾರಿ ಶುಲ್ಕ, ಇಂಧನ ದರ ಏರಿಕೆ ಅಲ್ಲದೇ ರಾಜ್ಯದ ಹಣ ಲೂಟಿ ಮಾಡಿ ಪಕ್ಕದ ರಾಜ್ಯದ ಚುನಾವಣೆಗೆ ಹಣ ಕಳಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಇಂತಹ ನೀತಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಗೆ ಬುದ್ದಿಕಲಿಸಿದ್ದಾರೆ. ದರ ಏರಿಕೆ ನಿರ್ಧಾರ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜೇಂದ್ರ ಘೋರ್ಪಡೆ,ಬಸವರಾಜ ಬಂಕದ, ಸುಭಾಷ ಮ್ಯಾಗೇರಿ, ಉಮೇಶ ಪಾಟೀಲ, ರವಿ ಸಿಂಗ್ರಿ, ಕನಕಪ್ಪ ಅರಳಿಗಿಡದ, ಯು.ಆರ್.ಚನ್ನಮ್ಮನವರ, ಮುದಿಯಪ್ಪ ಮುಧೋಳ್, ವಿಶ್ವನಾಥ ಕುಷ್ಟಗಿ ಸೇರಿದಂತೆ ಅನೇಕರು ಇದ್ದರು.
ವರದಿ : ಸುರೇಶ ಬಂಡಾರಿ.