
ಭಾ.ದ. ಸಾಹಿತ್ಯ ಅಕಾಡೆಮಿಯಿಂದ ಯುಗದಕವಿ ಬೇಂದ್ರೆ ಸ್ಮರಣೆ.

ಗಜೇಂದ್ರಗಡ : ಸತ್ಯಮಿಥ್ಯ (ಫೆ -01)
ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ನೀಡಿದವರಲ್ಲಿ ಕವಿ ದ.ರಾ.ಬೇಂದ್ರೆ ಒಬ್ಬರು. ಅವರಿಗಿರುವ ಭಾಷಾಜ್ಞಾನ ಅದ್ಭುತವಾದದ್ದು. ಅವರ ಸಾವಿರಾರು ಕವನಗಳು ಇಂದಿಗೂ ಜನರ ಮನಸಲ್ಲಿ, ನಾಲಿಗೆಯ ತುದಿಯಲ್ಲಿ ಹಾಸುಹೋಕ್ಕಾಗಿವೆ ಎಂದು ಉಪನ್ಯಾಸಕ ಸುರೇಶ ಪತ್ತಾರ ನುಡಿದರು.
ಶುಕ್ರವಾರ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ ತಾಲೂಕ ಘಟಕ ಗಜೇಂದ್ರಗಡ ವತಿಯಿಂದ ಜರುಗಿದ ವರಕವಿ ದ.ರಾ.ಬೇಂದ್ರೆಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಶರಣಪ್ಪ ಬೇವಿನಕಟ್ಟಿಯವರ ನಿವಾಸದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದ. ರಾ. ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ರಮೇಶ ರಾಯ್ಕರ್ ಮಾತನಾಡಿದರು.
ಹನಮಂತ ಭಜಂತ್ರಿಯವರು ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ.ಸುರೇಶ ಮಹೇಂದ್ರಕರ ಬೇಂದ್ರೆಯವರ ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಬಿ.ವಿ.ಮುನವಳ್ಳಿ,ಶಂಕರ ಕಲ್ಲಿಗನೂರ,ಕೆ.ಜಿ.ಸಂಗಟಿ,ಎ.ಜಿ.ಬೂದಿಹಾಳ,ಸೋಮಶೇಖರ್.ಸಿ, ಎಸ್. ಎಸ್. ನರೇಗಲ್, ಶರಣಪ್ಪ ಬೇವಿನಕಟ್ಟಿ,ಡಾ.ಮಹಾಂತೇಶ ಅಂಗಡಿ ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.