
ರೈತ ಮುಖಂಡ ಅನಿಲ ಕರ್ಣೀ ಮೇಲೆ ಹಲ್ಲೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮನವಿ.
ಗಜೇಂದ್ರಗಡ:ಸತ್ಯಮಿಥ್ಯ (ಆ-13).
ಕಳೆದ ಎರಡು ದಿನಗಳ ಹಿಂದೆ ನಗರದ ಹೃದಯ ಭಾಗ ಕೆ.ಕೆ ವೃತ್ತದ ಕೂಗಳತೆ ದೂರದಲ್ಲಿರುವ ಅಕ್ಕಡಿಕಾಳಿನ ಅಂಗಡಿಯಲ್ಲಿ ರೈತ ಮುಖಂಡ ಅನಿಲ್ ಕರ್ಣೀ ಮೇಲೆ ಲಕ್ಷ್ಮಣ್ ರಾಠೋಡ್ ಸೇರಿದಂತೆ ಅವರ ಸಹಪಾಠಿಗಳು ಹಲ್ಲೆ ಮಾಡಿದ್ದಾರೆ ಅವರನ್ನು ಕೂಡಲೇ ಬಂದಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗದಗ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಘಟನೆ ವಿವರ :
ರಾಜ್ಯದಲ್ಲಿ ಯೂರಿಯಾ ಗೊಬ್ಬರ ಅಭಾವದಿಂದಾಗಿ ಬಹಳಷ್ಟು ಜನ ರೈತರು ತೊಂದರೆಗಿಡಾಗಿದ್ದಾರೆ. ಈ ಕುರಿತು 30-07-2025 ರಂದು ಗದಗ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆ ವತಿಯಿಂದ. ಜಿಲ್ಲೆಯಲ್ಲಿನ ರೈತರ ಗೊಬ್ಬರ ಸಮಸ್ಯೆ, ಜಿಲ್ಲೆಯಲ್ಲಿ ಹವ್ಯಾಯುತವಾಗಿ ನಡೆಯುತ್ತಿರುವ ಪಡಿತರ ಅಕ್ಕಿ ಆಕ್ರಮ ಮಾರಾಟ ದಂದೆ ಮಟ್ಟ ಹಾಕುವ ಕುರಿತು, ಕಾನೂನು ಬಾಹಿರ ಚಟುವಟಿಕೆ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಅನಿಲ ಕರ್ಣೀ ಹೇಳುತ್ತಾ ಮುಂದುವರೆದು. 09-08-2025 ರಂದು ನಾನು ರೋಣ ರಸ್ತೆಯಲ್ಲಿರುವ ಅಕ್ಕಡಿಕಾಳು ಮಾರುವ ಅಂಗಡಿಯಲ್ಲಿ ಕುಳಿತಿರುವಾಗ ಏಕಏಕಿ ಆಗಮಿಸಿದ ಲಕ್ಷ್ಮಣ ರಾಠೋಡ್ ಮತ್ತು ಸಹಪಾಠಿಗಳು ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ. ಲೇ ಮಗನೇ ರೈತ ಸಂಘ ಅಂತ ಧಿಮಾಕ ಹಡಿಸಿ, ನೀನೇನು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಿ,ಅದರ ಪ್ರತಿಫಲವಾಗಿ ನಾವು ನಿನ್ನ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದೇವೆ, ನಿಮ್ಮ ಸಂಘ ನಮ್ಮನ್ನು ಏನು ಸೆಂಟ ಹರ್ಕೊಳೋದಿಲ್ಲ ಅಂತ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗಜೇಂದ್ರಗಡ ತಾಲೂಕಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಅನಿಲ ಕರ್ಣೀ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ.
ಹಲ್ಲೆಗೋಳಗಾದ ರೈತ ಮುಖಂಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗಜೇಂದ್ರಗಡ ತಾಲೂಕಿನಾದ್ಯಂತ ಪಡಿತರ ಅಕ್ಕಿ ಅಕ್ರಮ ಸಾಗಾಟ ಅಂಗನವಾಡಿ ಮತ್ತು ಶಾಲೆಗಳಿಗೆ ನೀಡುವ ಹಾಲಿನ ಪುಡಿ ಮಾರಾಟ ದಂದೆ ಜೋರಾಗಿದ್ದು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವದು ವಿಪರ್ಯಾಸ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ಚನ್ನು. ಎಸ್.