
ದುಬಾರಿ ಸಿದ್ದು ಸರ್ಕಾರ – ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೇಸ್ ನಾಯಕರು – ಮುತ್ತಣ್ಣ ಕಡಗದ.

ಗಜೇಂದ್ರಗಡ: ಸತ್ಯಮಿಥ್ಯ (ಡಿ -17).
ರೋಣ ನಗರಕ್ಕೆ ರವಿವಾರ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ. ಸಿ ಎಮ್ ಸಿದ್ದರಾಮಯ್ಯ.ಗಜೇಂದ್ರಗಡದ ಅತ್ತೆ ಸೊಸೆಯಂದಿರು ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಬೋರ್ವೆಲ್ ಕೊರಿಸಿದ ವಿಚಾರವನ್ನು ಪ್ರಸ್ತಾಪಿಸಿದರಲ್ಲದೆ.ಕಾಂಗ್ರೆಸ್ ಪಕ್ಷದ ಮುಖಂಡರು ರಾಜ್ಯದ್ಯಂತ ಈ ವಿಷಯವನ್ನು ಮಾತನಾಡುತ್ತಿದ್ದಾರೆ.
ಇದಕ್ಕೆ ಪ್ರತಿಯಾಗಿ ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ ಸಿದ್ದರಾಮಯ್ಯ ಮತ್ತು ಕಾಂಗ್ರೇಸ್ ಮುಖಂಡರ ವಿರುದ್ಧ ಬೆಲೆ ಏರಿಕೆಯ ಆರೋಪ ಮಾಡಿದ್ದಾರೆ.ಈ ಹಿಂದೆ ಅಕ್ರಮ ಸಕ್ರಮ ಯೋಜನೆಯಲ್ಲಿ 15 ರಿಂದ 20 ಸಾವಿರ ಹಣ ಕಟ್ಟಿದರೆ ವಿದ್ಯುತ್ ಸಂಪರ್ಕವನ್ನು ಕೆಇಬಿ ಅವರೇ ಬಂದು ಮಾಡಿ ಹೋಗುತ್ತಿದ್ದರು ಆದರೆ ಇವತ್ತು ರೈತರು ವಿದ್ಯುತ್ ಗುತ್ತಿಗೆದಾರರನ್ನು ಹಿಡಿದು ತಾವೇ ಟಿಸಿಯನ್ನು ತಂದು ವಿದ್ಯುತ್ ಸಂಪರ್ಕವನ್ನು ಪಡೆಯಬೇಕೆಂದರೆ ಎರಡರಿಂದ, ಎರಡುವರೆ ಲಕ್ಷ ರೂಪಾಯಿ ಹಣವನ್ನು ವ್ಯಯ ಮಾಡಬೇಕಾಗುತ್ತದೆ.ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರ ನಿಜವಾದ ಬಣ್ಣ ಗೊತ್ತಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಮುಖಾಂತರ 35, 40 ಸಾವಿರ ರೂಪಾಯಿ ಕೊಟ್ಟು,ರೈತರಿಂದ ಎರಡು, ಎರಡುವರೆ ಲಕ್ಷ ರೂಪಾಯಿ ಕಿತ್ತುಕೊಳ್ಳುತ್ತಿರುವದು ಯಾವ ನ್ಯಾಯ? ಎಡಗೈಯಲ್ಲಿ ಎರಡು ಕೊಟ್ಟು ಕೊಟ್ಟ ಹಾಗೆ ಮಾಡಿ, ಬಲಗೈಯಲ್ಲಿ ಇಪ್ಪತ್ತು ಕಿತ್ತುಕೊಳ್ಳುವ ಸರ್ಕಾರದ ನಿಜವಾದ ಬಣ್ಣ ಕೆಲವೇ ದಿನಗಳಲ್ಲಿ ಬಯಲಾಗುತ್ತದೆ. ಇಂಥ ಗ್ಯಾರಂಟಿ ಯೋಜನೆಗಳಿಗೆ ಜನರು ಮುಂದಿನ ದಿನಮಾನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ.
ಹೆಣ್ಣು ಮಕ್ಕಳಿಗೆ ಬಸ್ ಫ್ರೀ ಎನ್ನುತ್ತಾ ಪುರುಷರಿಗೆ ದರ ಹೆಚ್ಚಿಸಿದ್ದಾರೆ.ವಿದ್ಯುತ್ ಫ್ರೀ ಅಂತ ಹೇಳಿ, ಕಮರ್ಷಿಯಲ್ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ.ದಿನ ಬಳಕೆ ಮಾಡುವ ವಸ್ತುಗಳ ದರ ಗಗನಕ್ಕೆ ತಲುಪಿತು, ಪಹಣಿ ದರ, ಬಾಂಡ ದರ ಹೆಚ್ಚಳ ಮಾಡಿ ಸಾಮಾನ್ಯ ಜನರ ಮೇಲೆ ಹೊರೆಯನ್ನು ಹಾಕಿದೆ.ದಿನಬೆಳಗಾದರೆ ಸಾಕು ಸ್ವತ ಸಿದ್ದರಾಮಯ್ಯ ಭಾಗಿಯಾಗಿರುವ ಮುಡಾ ಹಗರಣ, ಸಚಿವರ ವಾಲ್ಮೀಕಿ ಹಗರಣ, ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆಗೆ ವಿಳಂಬ, ಬಾಯಲ್ಲಿ ಸಂವಿಧಾನ ರಕ್ಷಣೆ ಮಾತನಾಡುವ ಸಿ ಎಮ್ ಸಿದ್ದರಾಮಯ್ಯನವರು ನ್ಯಾಯಯುತ ಹೋರಾಟಗಳನ್ನು ಹತ್ತಿಕ್ಕಲು ಲಾಠಿ ಪ್ರಯೋಗ.ಗ್ಯಾರಂಟಿಗಳ ಬಣ್ಣ ಎಲ್ಲಿ ಬಯಲಾಗುತ್ತದೆ ಎಂದು ಬಿಜೆಪಿಯವರು ಗ್ಯಾರಂಟಿಗಳ ವಿರೋಧಿಗಳು ಎಂದು ಸುಳ್ಳು ಹೇಳುವ ಸಿದ್ದರಾಮಯ್ಯನವರಿಗೆ ಒಂದು ಸ್ಪಷ್ಟನೆ ಕೊಡಲು ಇಚ್ಚಿಸುತ್ತೇವೆ. ನೀವೂ ಹೇಳಿದಂತೆ ಅವರಿಗೂ ಪ್ರೀ, ಇವರಿಗೂ ಪ್ರೀ, ನಿನ್ನ ಹೆಂಡತಿಗೂ ಪ್ರೀ, ನನ್ನ ಹೆಂಡತಿಗು ಫ್ರಿ, ಈ ಹೇಳಿಕೆಯನ್ನು ಮರೆತು ಹೋಗಿದ್ದಿರಿ. ಈ ರೀತಿಯ ವಿಚಾರಗಳಿಂದ ರಾಜ್ಯ ಸರ್ಕಾರ ಜನರ ದಾರಿ ತಪ್ಪುಸುವ ಪ್ರಯತ್ನವನ್ನು ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದು ಪತ್ರಿಕೆ ಪ್ರಕಟಣೆ ಹೊರಡಿಸಿದ್ದಾರೆ.
ವರದಿ : ಚನ್ನು. ಎಸ್.