ತಾಲೂಕು

ಕಂಪ್ಯೂಟರ್ ಜ್ಞಾನವಿದ್ದರೆ ಜೀವನ ಸುಲಭ – ನಂದೀಶ್‌ ಅಚ್ಚಿ.

Share News

ಕಂಪ್ಯೂಟರ್ ಜ್ಞಾನವಿದ್ದರೆ ಜೀವನ ಸುಲಭ – ನಂದೀಶ್‌ ಅಚ್ಚಿ.

ಉದ್ಯೋಗ ಪಡೆಯಲು ಕಂಪ್ಯೂಟರ್ ಜ್ಞಾನ ಅವಶ್ಯಕ.

ನರೇಗಲ್:‌ಸತ್ಯಮಿಥ್ಯ (ಜು-01)

ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನವಿದ್ದರೆ ಜೀವನ ನಡೆಸುವುದು ಸುಲಭವಾಗಲಿದೆ. ಅನೇಕ ಉದ್ಯೋಗಗಳಿಗೆ ಗಣಕವಿಜ್ಞಾನ ಜ್ಞಾನ ಕಡ್ಡಾಯವಾಗಿದ್ದು ಉದ್ಯೋಗ ಪಡೆಯಲು ಅವಶ್ಯಕವಾಗಿದೆ ಎಂದು ಉಪನ್ಯಾಸಕ ನಂದೀಶ್‌ ಅಚ್ಚಿ ಹೇಳಿದರು.

ನರೇಗಲ್‌ನ ಸೈಬರ್ ಟೆಕ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಭಾನುವಾರ ನಡೆದ ಒಂದು ವರ್ಷದ ಉಚಿತ ತರಬೇತಿ ಕೊರ್ಸ್‌ನ 15ನೇ ಬ್ಯಾಚಿನ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.

ವದ್ಯಾರ್ಥಿಗಳು ಪಡೆಯುವ ಕಂಪ್ಯೂಟರ್‌ ಪದವಿಗೆ ಹಾಗೂ ಕಂಪ್ಯೂಟರ್‌ ಜ್ಞಾನಕ್ಕೆ ವ್ಯತುಂಬಾ ವ್ಯತ್ಯಾಸವಿದೆ. ಯಾರಲ್ಲಿ ಕ್ರೀಯಾತ್ಮಕವಾಗಿ, ತ್ವರಿತವಾಗಿ ಕೆಲಸಗಳನ್ನು ಅಚ್ಚುಕುಟ್ಟಾಗಿ ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೋ ಅವರು ಮಾತ್ರ ಆಧುನಿಕ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಹಾಗೂ ಉನ್ನತ ಹುದ್ದೆಗಳನ್ನು ಏರಲು ಸಾಧ್ಯವಿದೆ. ಅದಕ್ಕಾಗಿ ನಾವು ಪಡೆಯುವ ಪದವಿ, ಕೋರ್ಸ್‌ಗಳ ಜೊತೆಗೆ ಪ್ರಾಯೋಗಿಕ ಜ್ಞಾನ ಬೇಕಾಗುತ್ತದೆ. ಕಂಪ್ಯೂಟರ್‌ ಕಲಿಕೆಗೆ ಕೊನೆ ಎಂಬುವುದು ಇಲ್ಲ, ಇವತ್ತಿರುವ ವರ್ಸನ್‌ ನಾಳೆ ಇರುವುದಿಲ್ಲ ಅದಕ್ಕಾಗಿ ನಿರಂತರ ಕಲಿಕೆ ಹಾಗೂ ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌, ಅಪ್‌ಗ್ರೇಡ್‌ ಅನಿವಾರ್ಯವಾಗಿದೆ ಎಂದರು.

ತರಬೇತಿ ಸಂಸ್ಥೆಯ ಮುಖ್ಯಸ್ಥ ವಿ. ಕೆ. ಸಂಗನಾಳ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರಂಭ ಮಾಡಿದ ನಮ್ಮ ಸಂಸ್ಥೆ 25 ವರ್ಷಗಳನ್ನು ಪೂರೈಸಿ ಹಾಗೂ 15 ವರ್ಷಗಳನ್ನು ಉಚಿತ ಕಂಪ್ಯೂಟರ್‌ ಕೋರ್ಸ್‌ಗಳನ್ನು ನೀಡುತ್ತಿದೆ ಎಂದರು. ನಮ್ಮಲ್ಲಿ ಕಲಿಯಲು ಬರುವ ಮಕ್ಕಳಿಗೆ ಕಂಪ್ಯೂಟರ್‌ನ ಸಾಮಾನ್ಯ ಜ್ಞಾನವು ಇರುವುದಿಲ್ಲ ಆದರೆ ಹಂತಹಂತವಾಗಿ ಉತ್ತಮ ಕಂಪ್ಯೂಟರ್‌ ವಿದ್ಯಾರ್ಥಿಗಳಾಗಿ ಬದಲಾಗುತ್ತಾರೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ತರಬೇತುದಾರರಾದ ಬಸವರಾಜ ಮಡಿವಾಳರ, ಅಂದಯ್ಯ ಹಿರೇಮಠ, ವಿದ್ಯಾ ಜಕ್ಕಲಿ, ರಾಜು ಬಿಸನಳ್ಳಿ, ರಾಜೇಶ್ವರಿ ಇದ್ದರು.

ವರದಿ:ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!