
ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶರವರಿಗೆ ಜನತೆಯ ಸೆಲ್ಯೂಟ್
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧಗಳ ತಡೆಗೆ ವಿನೂತನ ಕ್ರಮ ನೂತನ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರಿಗೆ ಜನತೆಯ ಸೆಲ್ಯೂಟ್
ಗದಗ:ಸತ್ಯಮಿಥ್ಯ (ಆ-14).
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ತಡೆಗಳಿಗೆ ಸಂಬಂಧಿಸಿದಂತೆ ಕಾನೂನು ಅರಿವು ಜಾಗೃತಿ ಕಾರ್ಯಕ್ರಮಗಳ ಮೂಲಕ ಮನೆಮನೆಗೆ ತೆರಳಿ ಹಾಗೂ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರಿಗೆ ಜನತೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಹೊಸದಾಗಿ ನೇಮಕಗೊಂಡಿರುವ ರೋಹನ್ ಜಗದೀಶ್, ತಮ್ಮ ಶಿಸ್ತಿನ ಕಾರ್ಯಶೈಲಿ, ಬುದ್ದಿವಂತಿಕೆ ಹಾಗೂ ನವೋತ್ಸಾಹದೊಂದಿಗೆ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ನೂತನ ಬದಲಾವಣೆ ತರಲಿದ್ದಾರೆ ಎಂಬ ನೀರಿಕ್ಷೆ, ಕುತೂಹಲ ಜನಸಾಮಾನ್ಯರಲ್ಲಿ ಗರಿಗೆದರಿದೆ. ವಿಶೇಷವಾಗಿ ಯುವಕರಲ್ಲಿ ಪೊಲೀಸರು ಹಾಗೂ ಸರ್ಕಾರದ ವ್ಯವಸ್ಥೆಗಳ ಬಗ್ಗೆ ನಂಬಿಕೆ ಮೂಡಿಸುವಲ್ಲಿ ಅವರು ನಿಜಕ್ಕೂ ಹೊಸ ಶಕ್ತಿಯಾಗುತ್ತಾರೆ.
2021 ರ ಅಗಸ್ಟ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ತೇರ್ಗಡೆಯಾದ ನಂತರ, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆಗಿನ ವಿಡಿಯೋ ಕಾನ್ಸರೆನ್ಸ್ ನಲ್ಲಿ ರೋಹನ್ ಅವರು ತಮ್ಮ ಮಾತಿನ ಕೌಶಲ್ಯದ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೆಚ್ಚುಗೆಗೆ ಪಾತ್ರರಾಗಿ ಇಡೀ ಪೊಲೀಸ್ ಇಲಾಖೆ ಗಮನ ಸೆಳೆದಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನ ಪದವಿ ಪಡೆದಿರೋ ರೋಹನ್, ಅವರ ತಂದೆಯಂತಯ ಆಸೆಯಂತೆ ಪೊಲೀಸ್ ಅಧಿಕಾರಿಯಾಗುವ ಮೂಲಕ ಅವರ ಕನಸನ್ನ ನನಸು ಮಾಡಿದ್ದಾರೆ. ಇವರ ತಂದೆ ಕೂಡ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದು, ರೋಹನ್ ಅವರಿಗೆ ಇದು ಹೆಮ್ಮೆಯ ವಿಷಯ. ಅಲ್ಲದೇ ತಾವೂ ಸಹ ಪೊಲೀಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದವರು ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ನೂತನ ಪೊಲೀಸ್ ವರಿಷ್ಟ ಅಧಿಕಾರಿಯಾಗಿ ಆಗಮಿಸಿ ದಿನದಿಂದ ಕಾನೂನು ವ್ಯವಸ್ಥೆಯನ್ನು ಕಾಪಾಡಲು ಮಹಿಳಾ ಪೊಲೀಸ್ ಠಾಣೆ ವತಿಯಿಂದ ಗದಗ ಶಹರದ ಎಲ್ಲಾ ಶಾಲೆಗಳ ಮಕ್ಕಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ 112 ತುರ್ತು ಸಹಾಯವಾಣಿ, 1930 ಸೈಬರ್ ಅಪರಾಧ ಸಹಾಯವಾಣಿ, 1098 ಮಕ್ಕಳ ಸಹಾಯವಾಣಿ, ಗುಡ್ ಟಚ್ ಮತ್ತು ಬ್ಯಾಡ್ ಟಚ್ ಹಾಗೂ ಪೋಕ್ಸೋ ಕಾಯ್ದೆ ಸೇರಿದಂತೆ ಮುಂತಾದ ಕೆಲವು ಕಾನೂನು ಅಂಶಗಳ ಜಾಗೃತಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಜಿಲ್ಲೆಯ ಪೋಲೀಸ್ ವರಿಷ್ಟಧಿಕಾರಿ ರೋಹನ್ ಜಗದೀಶ್ ಇವರ ಪ್ರಾಮಾಣಿಕ ಸೇವೆಗಳ ಬಗ್ಗೆ ಉತ್ತಮ ಅಭಿಪ್ರಾಯಗಳು ಜನರಿಂದ ಬರುತ್ತಿರುವುದು.
ಜಿಲ್ಲೆಯ ಪೋಲೀಸ್ ವರಿಷ್ಠ ಅಧಿಕಾರಿಗಳು ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಗುವ ಅಪರಾಧ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಅಪರಾಧ ಪ್ರಕರಣ ತಡೆಯಲು ಇವರ ಪ್ರಾಮಾಣಿಕ ಸೇವೆಗಳಿಗೆ ಎಷ್ಟೊಂದು ಧನ್ಯವಾದಗಳು ಹೇಳಿದರು ಕಡಿಮೆ. ಜಿಲ್ಲೆಯಲ್ಲಿ ಆಗುವ ಕಳ್ಳತನ ಪ್ರಕರಣಗಳನ್ನು ಸಹ ತಡೆಯಲು ಇವರು ಎಲ್ಲಾ ಪೋಲೀಸ್ ಸ್ಟೇಶನ್ ನಲ್ಲಿ ನಡೆಯುವ ದಿನಂಪ್ರತಿ ಆಗುವ ಘಟನೆಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಬಗ್ಗೆ ಗಮನ ಹರಿಸಿದ ಇವರ ಉತ್ತಮ ಸೇವೆಗಳಿಗೆ ಜಿಲ್ಲೆಯ ಜನತೆ ಅಭಿನಂದನೆಗಳನ್ನು ಹೇಳುತ್ತಿದ್ದಾರೆ.
ಅಪರಾಧ ಚಟುವಟಿಕೆಗಳ ನಿಯಂತ್ರಣ, ನೈತಿಕ ಶಿಸ್ತು ಹಾಗೂ ಪೊಲೀಸ್ ಬಲವರ್ಧನೆ ಎಂಬ ಮೂರು ಮೌಲ್ಯಗಳನ್ನ ರೋಹನ್ ಅವರ ಕೆಲಸದ ಶೈಲಿಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಖಡಕ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅತ್ಯಂತ ಸಕ್ರೀಯರಾಗಿದ್ದಾರೆ.
ಗದಗ ಜಿಲ್ಲೆಯ ಜನರಿಗೆ ಅಪರಾಧ ಪ್ರಕರಣ ತಡೆಯಲು ಮನೆ ಮನೆಗೆ ಪೋಲೀಸ್ ಇಲಾಖೆಯ ಕಾರ್ಯಕ್ರಮ ಜನರಿಗೆ ಮೆಚ್ಚುಗೆ ಸಹ ಕಾರಣ ಆಗಿದೆ.
ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಜೊತೆಗೆ ರಸ್ತೆ ಹಾಗೂ ಬೀದಿಯಲ್ಲಿ ಸಹ ಜನರಿಗೆ ವಿಶೇಷ ಜಾಗ್ರತೆ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಪ್ರತಿಯೊಂದು ಮನೆಯ ಜನರು ಸಹ ಪೋಲೀಸ್ ಇಲಾಖೆಯ ಬಗ್ಗೆ ವಿಶೇಷ ಗೌರವ ಬರುವಂತೆ ಮಾಡಿರುವ ಜಿಲ್ಲಾ ವರಿಷ್ಠ ಅಧಿಕಾರಿಗಳು ರೋಹನ್ ಜಗದೀಶ್ ಅವರಿಗೆ ಹಾಗೂ ಶಹರ ಹಾಗೂ ಗದಗ ಜಿಲ್ಲೆಯ ಎಲ್ಲಾ ಪೋಲೀಸ್ ಇಲಾಖೆಯ ಅವರ ಪ್ರಾಮಾಣಿಕ ಸೇವೆಗಳಿಗೆ ಅಭಿನಂದನೆಗಳನ್ನು ಹೇಳುತ್ತಿದ್ದಾರೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ತೆರಳಿ ಪೊಲೀಸ್ ಇಲಾಖೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಕೇಳುವುದಲ್ಲದೆ ಅದಕ್ಕೆ ಕ್ರಮಗಳನ್ನು ವಹಿಸುತ್ತಿರುವ ಅವರಿಗೆ ಜಿಲ್ಲೆಯ ಎಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಶಂಸನಾ ಪತ್ರಗಳನ್ನು ಕೊಡುವುದರ ಮೂಲಕ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಜಿಲ್ಲೆಯಲ್ಲಿ ಅಪರಾಧ ತಡೆಗೆ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡಲು ವಿನೂತನ ಕ್ರಮ ಕೈಗೊಳ್ಳುತ್ತಿರುವ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವರ ಕಾರ್ಯವನ್ನು ಮೆಚ್ಚಿ ಜನತೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ.
ಲೇಖನ :ಮುತ್ತು ಗೋಸಲ