1.80 ಕೋ.ರೂ. ವೆಚ್ಚದಲ್ಲಿ ಸಂಚಾರಕ್ಕೆ ರೆಡಿಯಾದ ಬೆಳಗೇರಾ ಸೇತುವೆ – ಹೋರಾಟಕ್ಕೆ ಸಂದ ಜಯ ಉಮೇಶ ಮುದ್ನಾಳ.
ಕಳೆದ ವರ್ಷ ಮಹಿಳೆಯರು ಹಾಗೂ ರೈತರು ಸೇರಿಕೊಂಡು ಬತ್ತದ ನಾಟಿಯ ಹಾಡು ಹಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.
1.80 ಕೋ.ರೂ. ವೆಚ್ಚದಲ್ಲಿ ಸಂಚಾರಕ್ಕೆ ರೆಡಿಯಾದ ಬೆಳಗೇರಾ ಸೇತುವೆ – ಹೋರಾಟಕ್ಕೆ ಸಂದ ಜಯ ಉಮೇಶ ಮುದ್ನಾಳ.
ಯಾದಗಿರಿ:ಸತ್ಯಮಿಥ್ಯ (ಜೂ -29).
ಕಳೆದ ಎರಡು ವರ್ಷಗಳಲ್ಲಿ ಧಾರಾಕಾರ ಸುರಿದ ಮಳೆಯಿಂದ ಸಹ ಸೇತುವೆ ಇನ್ನಷ್ಟು ಕೊಚ್ಚಿಕೊಂಡು ಹೋಗಿತ್ತು. ಹದಗೆಟ್ಟು ಹೋದ ಸೇತುವೆ ನಿರ್ಮಾಣಕ್ಕೆ ಭತ್ತ ನಾಟಿ ಮಾಡುವ ಮುಖಾಂತರ ವಿನೂತನ ಪ್ರತಿಭಟನೆ ನಡೆಸಿದ್ದರು.
ಈದೀಗ 1ಕೋಟಿ 80 ಲಕ್ಷ ರೂ. ಗಳ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ ಎಂದು ಸಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.
ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ನಿರ್ಮಾಣವಾಗಿದ್ದನ್ನು ಮನಗಂಡ ನಂತರ ಹೇಳಿಕೆ ನೀಡಿದ ಅವರು, ಕಳೆದ ವರ್ಷ ಮಹಿಳೆಯರು ಹಾಗೂ ರೈತರು ಸೇರಿಕೊಂಡು ಬತ್ತದ ನಾಟಿಯ ಹಾಡು ಹಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಇದಾದ ನಂತರ ಸೇತುವೆ ಹಾಗೂ ರಸ್ತೆ ಸುಮಾರು 1.80 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ. ಈ ಸೇತುವೆಯಿಂದ ಕೇವಲ ಮುಂಡರಗಿ-ಬೆಳಗೇರಿ ಅಲ್ಲದೇ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಲಿದೆ. ಇದರ ಜೊತೆಗೆ ಬಸ್ ಸಂಚಾರ ಬಂದಾಗಿತ್ತು. ಈದೀಗ ಬಸ್ ಸಂಚಾರವೂ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದಾಗ ಶಾಸಕರು ಸಧ್ಯ ತಾತ್ಕಾಲಿಕವಾಗಿ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನಬಾರ್ಡ, ಕೆಕೆಆರ್‌ಡಿಬಿ ಇಲ್ಲವೇ ತಮ್ಮ ಶಾಸಕರ ಅನುದಾನದಲ್ಲಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.
ಅದರಂತೆ ಈದೀಗ ಸೇತುವೆ ನಿರ್ಮಾಣವಾಗಿರುವುದು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು. ಈದೀಗ ಶಾಸಕರು ಸಮಯ ನಿಗದಿಪಡಿಸಿ ಒಂದು ವಾರದಲ್ಲಿಯೇ ಸೇತುವೆ ಉದ್ಘಾಟನೆ ನೆರವೇರಿಸುವಂತೆ ಒತ್ತಾಯ ಮಾಡುವುದಾಗಿ ತಿಳಿಸಿದ್ದಾರೆ.
ಈ ವೇಳೆ ಬೆಳಗೇರಾ ಗ್ರಾಮಸ್ಥರಾದ ಆಂಜಿನೇಯ ನಾಯ್ಕೋಡಿ, ರಫೀಕ್ ಪಟೇಲ್, ಬಾಬುಖಾನ್, ಈರಪ್ಪ, ನಿಂಗಪ್ಪ ಮೋನಪ್ಪ ಸೇರಿ ಅನೇಕರಿದ್ದರು.
ಗ್ರಾಮಸ್ಥರಿಂದ ಅಭಿನಂದನೆ :
ಈ ಗ್ರಾಮಗಳ ಸಮಸ್ಯೆಗೆ ಶಾಸಕರು ಸ್ಪಂದಿಸಿ ಶೀಘ್ರ ಅನುಮೋದನೆಯನ್ನು ಕೆಕೆಆರ್.ಡಿಬಿಯಿಂದ ಕೊಡಿಸಿ ಕಾಮಗಾರಿಯೂ ತ್ವರಿತ ಪೂರ್ಣಗೊಳಿಸಿದ್ದಾರೆ ಇದಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಪರವಾಗಿ ಶಾಸಕರಿಗೆ ಅಭಿನಂದನೆಗಳು ಸಲ್ಲುತ್ತವೆ.
ವರದಿ : ಶಿವು ರಾಠೋಡ