ನೂರು ದಿನದ ಓದು ಕಾರ್ಯಕ್ರಮ “ದೇಶದ ಬೆನ್ನೆಲುಬು ರೈತನ”ವೇಷದಲ್ಲಿ ಶಾಲಾ ಮಕ್ಕಳ ಸಂಭ್ರಮ.
ವ್ಯಾಸನಂದಿಹಾಳ:ಸತ್ಯಮಿಥ್ಯ (ಫೆ -05).
ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವರೆ ಹೆಚ್ಚು ಇದರ ಮಧ್ಯೆ ವ್ಯಾಸನಂದಿಹಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಸರ್ಕಾರಿ ಶಾಲೆ ಎಂದರೆ ಹೆಮ್ಮೆಪಡುವಂತಹ ಶಿಕ್ಷಕರ ಹಾಗೂ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಆಶಯದಂತೆ (ನೂರು ದಿನದ ಓದು)ಕಾರ್ಯಕ್ರಮದ ನಿಮಿತ್ಯ ಶಾಲೆಯಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ಶಾಲೆಯಲ್ಲಿ ಇಂದು ದೇಶದ ಬೆನ್ನೆಲುಬು ರೈತನ’ ವೇಷದಲ್ಲಿ ಶಾಲಾ ಮಕ್ಕಳ ಶಾಲೆಗೆ ಬಂದು ರೈತರು ಕೃಷಿಯಲ್ಲಿ ಕೆಲಸ ಮಾಡುವುದರ ಕುರಿತಂತೆ ರೈತರ ಉಳುಮೆಯ ಕುರಿತಂತೆ ಪ್ರಾತ್ಯಕ್ಷತೆಯ ಮೂಲಕ ಶಾಲೆಯಲ್ಲಿ ಗುರುಗಳ ಮಾರ್ಗದರ್ಶನದಂತೆ ಶಾಲಾ ಮಕ್ಕಳು ಸಂಭ್ರಮಿಸಿದರು.
ಅಲ್ಲದೆ ಶಾಲೆಯ ಮಕ್ಕಳು ಬಗೆ ಬಗೆಯ ಬಣ್ಣದ ಉಡುಗಿಗಳನ್ನು ತೊಟ್ಟು ಗ್ರಾಮೀಣ ಸೊಗಡನ್ನು ಬಿಂಬಿಸುವಂತಹ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶದ್ದಾರೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶಕದಂತೆ ಭಾರತ ದೇಶದ ಸಂಸ್ಕ್ರತಿ ಆಚಾರ ವಿಚಾರ ಜನಪದ ಶೈಲಿಯ ಗ್ರಾಮೀಣ ವೇಶ ಭೂಷಣ್ ಆಧುನಿಕ ಕಾಲದ ಪರಿಣಾಮವಾಗಿ ಮಾಯವಾಗುತ್ತಿವೆ ಗ್ರಾಮೀಣ ಕಸಬುಗಳಾದ ರೈತರ ಹೊಲಗಳಲ್ಲಿ ಕೆಲಸ ಮಾಡುವದರ ಕುರಿತು, ಜೋಳದ ರೊಟ್ಟಿ ತಯಾರಿಸುವುದು, ಹಣ್ಣು ಮಾರುವುದು, ಕಿರಾಣಿ ಅಂಗಡಿಗಳ ದಿನಸಿ ಮಾರಾಟ ಮಾಡುವುದು ತರಕಾರಿ ಮಾಡುವುದು, ಹೂ ಮಾರಾಟ, ಮಾಡುವುದು, ಗ್ರಾಮೀಣ ಸೊಗಡಿನ ಜೀವಂತಿಕೆ ತುಂಬಿದ ಸುಂದರವಾದ ಕಾರ್ಯಕ್ರಮವನ್ನು ಮಕ್ಕಳು ಮಾಡುವುದು ಬಲುಚಂದ ಇಂಥಹ ಒಂದು ಕಾರ್ಯಕ್ರಮವನ್ನು ಶಾಲೆಯಲ್ಲಿ ಇಂದು ಹಮ್ಮಿಕೊಳಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಶೈಲ ಅಂಬಿಗೇರ ಸಹ ಶಿಕ್ಷಕರಾದ ಇರಬಸಪ್ಪ ಜೂಂಡಿ ಶಿಕ್ಷಕರ ಕಾರ್ಯವೈಖರಿಗೆ ಎಸ.ಡಿ.ಎಂ.ಸಿ.ಅಧ್ಯಕ್ಷರು, ಉಪಾಧ್ಯಕ್ಷರು ಪದಾಧಿಕಾರಿಗಳ ಹಾಗೂ ಬಿಸಿಯೂಟ ಅಡಿಗೆ ಕಾರ್ಯಕರ್ತೆಯರಾದ ಶಂಕ್ರವ್ವ ಕಟಗೇರಿ,ಹಾಗೂ ಗ್ರಾಮದ ಗುರು ಹಿರಿಯರು ಪ್ರಶಂಸೆಯ ನುಡಿಗಳನ್ನು ಹೇಳಿದ್ದಾರೆ
ವರದಿ : ಮುತ್ತು ಗೋಸಲ.