ರಾಜ್ಯ ಸುದ್ದಿ

ಶಾಲೆ ಆಸ್ಪತ್ರೆ ಮತ್ತು ಕೋರ್ಟ್ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡುವ ಮೂಲಕ ಪಾಪ ಪರಿಹರಿಸಿಕೊಳ್ಳಿ- ನ್ಯಾಯಮೂರ್ತಿ ವ್ಹಿ.ಶ್ರೀಶಾನಂದ.

Share News

ಗಜೇಂದ್ರಗಡ : ಸತ್ಯಮಿಥ್ಯ ( ಜುಲೈ -21).

ಮುಖ್ಯವಾಗಿ ಶಾಲೆ, ಆಸ್ಪತ್ರೆ ಮತ್ತು ಕೋರ್ಟ್ ಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡುವ ಮೂಲಕ ಕಳಪೆ ಕಾಮಗಾರಿ ಮಾಡಿದ ಪಾಪ ಕಳೆದುಕೊಳ್ಳಿ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮತ್ತು ಗದಗ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ವ್ಹಿ . ಶ್ರೀಶಾನಂದ ಹೇಳಿದರು.

ಇಂದು ಬೆಳ್ಳಂ ಬೆಳಿಗ್ಗೆ  ಮಳೆಯ ನಡುವೆಯೂ ಗಜೇಂದ್ರಗಡ ನಗರದಲ್ಲಿ ನ್ಯಾಯಾಲಯ ಸಂಕಿರ್ಣ ನಿರ್ಮಾಣ ಮಾಡುವ ನಿವೇಶನ ವೀಕ್ಷಣೆ ಸಂದರ್ಭದಲ್ಲಿ ಮಾತನಾಡಿದರು . ಪ್ರತಿಯೊಬ್ಬರ ಮಕ್ಕಳು ವಿದ್ಯಾಭ್ಯಾಸಕ್ಕೆ ಶಾಲೆಗಳಿಗೆ ತೆರಳಬೇಕು ಅದೇರೀತಿ ಆರೋಗ್ಯದಲ್ಲಿ ಏರುಪೇರಾದರು ಆಸ್ಪತ್ರೆಗೆ ತೇರಳಲೇ ಬೇಕು ಕೊನೆಗೆ ಕುಟುಂಬದಲ್ಲಿ ತಂಟೆ ತಕರಾರು ಬಂದರೆ ಕೋರ್ಟ್ ಮೆಟ್ಟಿಲು ಇರಲೇ ಬೇಕು ಈ ಮೂರು ಕ್ಷೇತ್ರಗಳು ಸಮಸ್ಯೆ ಪರಿಹಾರ ಕೇಂದ್ರಗಳು ಆದ್ದರಿಂದ ಗುತ್ತಿಗೆದಾರ ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡುವುದರಿಂದ ನಿಮ್ಮ ಮಕ್ಕಳು, ಮೊಮ್ಮಕ್ಕಳು ಇವುಗಳನ್ನು ನೋಡಿದಾಗ ಇದು ನಮ್ಮ ಅಪ್ಪ ಅಥವಾ ಅಜ್ಜ ಕಟ್ಟಿದ ಕಟ್ಟಡ ಎಂದು ಹೆಮ್ಮೆ ಇಂದ ಹೇಳುವ ಹಾಗೆ ಇರಬೇಕು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ನ್ಯಾಯವಾದಿಗಳಾದ ಬಿ. ಎಂ. ಸಜ್ಜನರ, ಆರ್. ಎಂ. ರಾಯಬಾಗಿ, ಎಸ್. ಬಿ. ಹಿಡಕಿಮಠ, ಬಾಲು ರಾಠೋಡ್,ಎಂ.ಎಚ್.ಕೋಲಕಾರ ಪಿಎಸ್ಐ ಸೋಮನಗೌಡ ಗೌಡರ ಸೇರಿದಂತೆ ಅನೇಕರು ಇದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!