ಕಲಿತು ಕಲಿಸುವವರೇ ಉತ್ತಮ ಗುರು ಆಗಬಲ್ಲರು: ಹಿರಿಯ ಪತ್ರಕರ್ತ ಸೋಮು ಲದ್ದಿಮಠ

ಕಲಿತು ಕಲಿಸುವವರೇ ಉತ್ತಮ ಗುರು ಆಗಬಲ್ಲರು: ಹಿರಿಯ ಪತ್ರಕರ್ತ ಸೋಮು ಲದ್ದಿಮಠ
ಗಜೇಂದ್ರಗಡ:ಸತ್ಯಮಿಥ್ಯ (ಸೆ-05)
ಸೆಪ್ಟೆಂಬರ್ 5ರಂದು ರಾಷ್ಟ್ರಾದ್ಯಂತ ಶಿಕ್ಷಕರ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಆದರ್ಶ ಶಿಕ್ಷಕರಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸುವ ದಿನ. ಜೊತೆಗೆ ರಾಷ್ಟ್ರದಲ್ಲಿರೋ ಎಲ್ಲ ಶಿಕ್ಷಕರಿಗೂ ವಿದ್ಯಾರ್ಥಿಗಳು ಶುಭಾಶಯ ತಿಳಿಸುವ ಶುಭಗಳಿಗೆ. ವಿದ್ಯಾರ್ಥಿಗಳ ಬೆಳವಣಿಗೆಗೆ, ಭವಿಷ್ಯ, ಯಶಸ್ಸಿಗೆ ಹೀಗೆ ಸಾಲು ಸಾಲು ವಿಚಾರಗಳನ್ನು ತಿಳಿ ಹೇಳುವುದಕ್ಕೆ ಶಿಕ್ಷಕರು ತುಂಬಾ ಮುಖ್ಯ ಎಂದು ಹಿರಿಯ ಪತ್ರಕರ್ತ ಸೋಮು ಲದ್ದಿಮಠ ಹೇಳಿದರು.
ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ಗ್ರಾಮದ ಅಥರ್ವ ನವೋದಯ ಕೋಚಿಂಗ್ ಸೆಂಟರ್ ಹಾಗೂ ಅಥರ್ವ ಪ್ರಿ ಪ್ರೈಮರಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣ ಎಲ್ಲರಿಗೂ ಮುಖ್ಯ. ಇಲ್ಲಿ ಇಂಥವರೇ, ಅಂಥವರೇ ಕಲಿಬೇಕು ಅನ್ನೋದಿಲ್ಲ. ಕಲಿಕೆ ಎಂಬುವುದು ನಿಂತ ನೀರಲ್ಲ, ನಿರಂತರವಾಗಿ ಹರಿಯುವ ನೀರಿನಂತೆ ಇರಬೇಕು. ಯಾರು ಬೇಕಾದರೂ ಓದಬಹುದು. ಆದರೆ ಕಲಿಯುವ ಹಂಬಲ ಇರಬೇಕಷ್ಟೇ. ಬಹಳ ಮುಖ್ಯವಾಗಿ ಶಿಕ್ಷಕರಿಗೆ ಬೇಕಾಗಿರುವುದು ತಾಳ್ಮೆ ಹಾಗೂ ಸಹನೆ. ನಾವು ಹೇಗೆ ವರ್ತಿಸುತ್ತಿವೋ ಮಕ್ಕಳು ಅದನ್ನೇ ಕಲಿಯುತ್ತಾರೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಆನಂದ ದೊಡ್ಡಮನಿ, ಶಿಕ್ಷಕಿಯರಾದ ಪೂಜಾ ವಿರಾಪೂರಮಠ, ಮೈತ್ರಾ ಹೂಗಾರ ಮಾತನಾಡಿ, ಭಾರತದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5, 1888 ಅನ್ನು 1962 ರಿಂದ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭಗಳಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಎಸ್.ರಾಠೋಡ, ಸಮಾಜ ಸೇವಕ ವಿರೇಶ ರಾಠೋಡ, ಶಬೀನಾ ಬೆಳ್ಳಟ್ಟಿ, ತಾಯಪ್ಪ, ನಿರ್ಮಲ ಸಾರಂಗಮಠ, ಮಹೇಶ ಕ್ಯಾದಗುಂಪಿ ಸೇರಿದಂತೆ ಇತರರು ಇದ್ದರು.
ವರದಿ : ಸುರೇಶ ಬಂಡಾರಿ.