ತಾಲೂಕು

ಗಾಂಧಿ ಪುರಸ್ಕೃತ ಗ್ರಾಮಕ್ಕಿಲ್ಲ ಶೌಚಾಲಯ ಭಾಗ್ಯ

ಹಲವು ವರ್ಷಗಳಿಂದ ಮಹಿಳಾ ಶೌಚಾಲಯ ಇಲ್ಲದೇ ಪರದಾಟ

Share News

* ಗ್ರಾಮ ಪಂಚಾಯತ ನಿರ್ಲಕ್ಷ್ಯ 
* ಬರಿ ಮತಗಳಿಗೆ ಸಿಮಿತವಾದ ನಾಯಕರು 
* ಹಲವು ವರ್ಷಗಳಿಂದ ಮಹಿಳಾ ಶೌಚಾಲಯ ಇಲ್ಲದೇ ಪರದಾಟ 

ಸಾವಳಗಿ:ಸತ್ಯ ಮಿಥ್ಯ (ಜೂ -24)

ತಾಲ್ಲೂಕಿನಲ್ಲಿಯೇ ದೊಡ್ಡ ಹೋಬಳಿ ಕೇಂದ್ರವಾಗಿರುವ ಸಾವಳಗಿ ಹಲವಾರು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಗ್ರಾಮದ ಜನರು ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿದ್ಯಾ ನಗರದ ಸೇರಿದಂತೆ ಅನೇಕ ಕಡೆ ಶೌಚಾಲಯವಿಲ್ಲದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿಯೇ ಅತಿದೊಡ್ಡ ಗ್ರಾಮ ಸಾವಳಗಿ, ಹಾಗೂ ಗ್ರಾಮ ಪಂಚಾಯತಿಯ ಇಲ್ಲಿ 32 ಜನ ಸದಸ್ಯರನ್ನು ಹೊಂದಿದ್ದು ಕಳೆದ ಬಾರಿ ಗಾಂಧಿ ಪುರಸ್ಕಾರ ಪಡೆದ ಗ್ರಾಮ ಪಂಚಾಯತಿಯ ಸಾವಳಗಿದ್ದು.

 ಹಿಂದೆ ರಾಷ್ಟ್ರಪತಿ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಡಿ.ಜತ್ತಿ ಅವರ ಊರು ಈಗಿನ ಪ್ರತಿಷ್ಠಿತ ಇನ್ಪೋಸಿಸ್ ಕಂಪನಿಯ ಸುಧಾಮೂರ್ತಿಯವರ ಮೂಲ ಊರು ಸಾವಳಗಿ ಗ್ರಾಮ.

ಅಷ್ಟೇ ಅಲ್ಲದೆ ಜಮಖಂಡಿ ತಾಲೂಕಿನ ಹಲವಾರು ಜನಪ್ರತಿನಿಧಿಗಳು ಈ ಗ್ರಾಮದ ಮತಗಳಿಂದ ಆಯ್ಕೆಯಾಗಿದ್ದಾರೆನ್ನುವದು ಸಹ ಮರೆತಿದ್ದಾರೆ ಎಂದು ಅನಿಸುತ್ತದೆ ಯಾಕೆಂದರೆ ಸುತ್ತಲಿನ 23 ಹಳ್ಳಿಗಳನ್ನು ಹೊಂದಿರುವ ಸಾವಳಗಿ ಹೋಬಳಿ ಎನಿಸಿಕೊಂಡಿದ್ದರು ಅಭಿವೃದ್ಧಿ ಮರೀಚಿಕೆಯಾಗಿದೆ.

ಶೌಚಾಲಯಗಳಿಲ್ಲದೇ ನಿತ್ಯವೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಬೇಕಾದ ಅತ್ಯಂತ ಕನಿಷ್ಠ ಸೌಲಭ್ಯಗಳನ್ನೂ ಒದಗಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ದೂರಿದೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಮ್ಮ ಮನೆಗಳಲ್ಲಿ ಮಾತ್ರ ಲಕ್ಷ ಲಕ್ಷ ಖರ್ಚು ಮಾಡಿ ಹೊರದೇಶದ ರೀತಿಯ ಶೌಚಾಲಯ ನಿರ್ಮಿಸಿಕೊಂಡು ಒಳ್ಳೆಯ ಬದುಕು ನಡೆಸುತ್ತಿರುವ ಜನಪ್ರತಿನಿಧಿಗಳು, ಗ್ರಾಮೀಣ ಮಹಿಳೆಯರ ಕಷ್ಟಗಳನ್ನುಅರಿತುಕೊಳ್ಳಬೇಕು. ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆಯಾಗುತ್ತಿದ್ದು. ಅಧಿಕಾರಿಗಳು ಮಾತ್ರ ಶೌಚಾಲಯ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹಳೆಯ ಕಾಲದ ಅಲ್ಲೊಂದು, ಇಲ್ಲೊಂದು ಶೌಚಾಲಯವಿದ್ದು, ಸುತ್ತಲೂ ಜಾಲಿಗಿಡ ಬೆಳೆದು ನಿಂತಿವೆ. ಹೊಸ ಶೌಚಾಲಯ ನಿರ್ಮಿಸುವಂತೆ ಅಧಿಕಾರಿಗಳನ್ನು ಕೇಳಿದರೆ, ನಿರ್ಮೀಸೋಣ ಎಂದು ಭರವಸೆ ನೀಡುತ್ತಾರೆ.

” ಶೌಚಾಲಯ ನಿರ್ಮಾಣ ಹಾಗೂ ಕೆರೆಗಳು ಅಭಿವೃದ್ಧಿ ಕಾರ್ಯ ಸೇರಿದಂತೆ ಅನೇಕ ಕೆಲಸಗಳು ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಇದರ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಬೇಕು “

ಹೇಸರು ಹೇಳದ ಸಾವಳಗಿ ಗ್ರಾಮಸ್ಥ

 

ವರದಿ :ಸಚಿನ್ ಜಾದವ್ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!