ತಾಲೂಕು

ಯೋಗದಿಂದ ದೇಹ ಮನಸ್ಸು ಮತ್ತು ಬುದ್ದಿಮಟ್ಟ ನಿಶ್ಚಲ : ಯೋಗಪಟು ವಿ.ಎ. ಕುಂಬಾರ

ದಕ್ಷಿಣ ಕಾಶಿ ಕಾಲಕಾಲೇಶ್ವರದಲ್ಲಿ ನೂರಾರು ವಿದ್ಯಾರ್ಥಿಗಳಿಂದ ಯೋಗಾಭ್ಯಾಸ

Share News

ಯೋಗದಿಂದ ದೇಹ ಮನಸ್ಸು ಮತ್ತು ಬುದ್ದಿಮಟ್ಟ ನಿಶ್ಚಲ : ಯೋಗಪಟು ವಿ.ಎ. ಕುಂಬಾರ

ಗಜೇಂದ್ರಗಡ :ಸತ್ಯ ಮಿಥ್ಯ (ಜೂ.೨೧).

ಮಾನವನ ದೇಹ, ಮನಸ್ಸು ಮತ್ತು ಬುದ್ದಿ ನಿಶ್ಚಲವಾದಾಗ ಒಬ್ಬ ಪರಿಪೂರ್ಣ ವ್ಯಕ್ತಿ ನಿರ್ಮಾಣ ವಾಗುತ್ತಾನೆ. ಇಂತಹ ಸ್ಥಿತಿ ತಲುಪಲು ಯೋಗ ಸಹಕಾರಿಯಾಗಲಿದೆ. ಆದ್ದರಿಂದ ನಿತ್ಯ ಯೋಗದ ಅವಶ್ಯಕತೆ ಇದೆ ಎಂದು ಯೋಗಪಟು, ಶಿಕ್ಷಕ ವಿ.ಎ.ಕುಂಬಾರ ಹೇಳಿದರು

ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿ ಶುಕ್ರವಾರ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಗಜೇಂದ್ರಗಡ ಹಾಗೂ ಅಥರ್ವ ನವೋದಯ ಕೋಚಿಂಗ್‌ ಸೆಂಟರ್‌ ಕಾಲಕಾಲೇಶ್ವರ, ಕಾಯಕ ಚಾರೀಟಬಲ್ ಟ್ರಷ್ಟ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು. 

ನಮ್ಮ ಹಿರಿಯರು ಕಾಯಕ ಪ್ರಿಯರು ಪ್ರತಿನಿತ್ಯ ಶ್ರಮದಾನದ ಮೂಲಕ ತಮ್ಮ ದೇಹ, ಮನಸ್ಸು ಮತ್ತು ಬುದ್ದಿಮತ್ತೆಯನ್ನು ಆರೋಗ್ಯಕರವಾಗಿಡುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಬದುಕು ಯಾಂತ್ರಿಕವಾಗಿದೆ ಯುವಕರಲ್ಲಿ ದೈಹಿಕ ಶ್ರಮ ಕಡಿಮೆಯಾಗಿದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮದುಮೇಹ, ಹೃದಯ ಸಂಬಂಧಿ ಮತ್ತು ನರ ದೌರ್ಬಲ್ಯದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಾತ್ರೆಗಳನ್ನು ನುಂಗುವುದೇ ಒಂದು ಕಾಯಕವಾಗಿದೆ. ಮಾತ್ರೆಯಿಂದ ಮುಕ್ತ ಜೀವನ ನಡೆಸಲು ಯೋಗಾಭ್ಯಾಸ ಮುಖ್ಯವಾಗಿದೆ. ಪ್ರತಿ ನಿತ್ಯ ಒಂದು ಗಂಟೆ ಯೋಗ ಮಾಡುವ ಮೂಲಕ ಸುಖಿಗಳಾಗಿ ಎಂದರು.

ಇದೆ ವೇಳೆ, ಶಶಿಧರ್ ಹೂಗಾರ್ ಮತ್ತು ರವಿ ಗಡೇದವರ್ ಮಾತನಾಡಿ, ಅಂತಾರಾಷ್ಟ್ರೀಯ ಯೋಗದಿನ ಕೇವಲ ಒಂದೆ ದಿನಕ್ಕೆ ಸೀಮಿತವಾಗದಿರಲಿ ಎಂದು ಹೇಳಿದರು. ಜೊತೆಗೆ ವಿಶ್ವಕ್ಕೆ ಭಾರತದ ಕೊಡುಗೆ ಯೋಗವಾಗಿದ್ದು, ನಮಗೆಲ್ಲರಿಗೂ ಸಂತಸ ಎನ್ನುತ್ತಲೇ, ಯೋಗ ಮಾಡುವುದರಿಂದ ರೋಗದಿಂದ ದೂರ ವಿರಬಹುದು. ಯುವ ಸಮೂಹ ಜಂಕ್ ಫುಡ್ ದಾಸರಾಗುವುದು ಬಿಡಬೇಕು. ಆಹಾರ ಪದ್ಧತಿಯಲ್ಲಿ ಬೇಳೆಕಾಳು, ತರಕಾರಿಗಳ ಬಳಕೆ ಹೆಚ್ಚಾಗಿರಲಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಇದೇ ಸಂಧರ್ಭದಲ್ಲಿ ಕಾಲಕಾಲೇಶ್ವರ ದೇವಸ್ಥಾನ ಧರ್ಮದರ್ಶಿಗಳಾದ ಮಂಗಳಾದೇವಿ ದೇಶಮುಖ್, ನಿವೃತ್ತ ಸೈನಿಕ ಶಾಂತಪ್ಪ, ಸಮಾಜ ಸೇವಕ ರವಿಗಡೇದವರ್, ಪತ್ರಕರ್ತ ಮಂಜುನಾಥ್ ರಾಠೋಡ, ಪ್ರಾಚಾರ್ಯರರಾದ ವಸಂತ ಗಾರ್ಗಿ, ಯೋಗ ಪಟು ವಿ.ಎ ಕುಂಬಾರ ಅವರಿಗೆ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

ದಕ್ಷಿಣ ಕಾಶಿ ಕಾಲಕಾಲೇಶ್ವರನ ಪುಣ್ಯ ಸ್ಥಳದಲ್ಲಿ ಸಾವಿರಾರು ವಿದ್ಯಾರ್ಥಿಗಳು ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಲಾಯಿತು. ಸಾರ್ವಜನಿಕರು ಮತ್ತು ಗ್ರಾಮಸ್ಥರು ಸ್ಮೃತಿಪಟಲದಲ್ಲಿ ನೆನಪಿಡುವಂತಹ ಕಾರ್ಯಕ್ರಮ ನಡೆಯಿತು.

ಇದೇ ಸಂಧರ್ಭದಲ್ಲಿ ಮಲ್ಲಯ್ಯ ಪೂಜಾರ, ಮೃತ್ಯುಂಜಯ ಹಿರೇಮ, ಪರಶುರಾಮ ಚಿಲಝರಿ, ಬಸವರಾಜ ಹುಚ್ಚಯ್ಯನಮಠ, ಡಿ.ಜಿ.ತಾಳಿಕೋಟಿ ,

ಮಂಜುನಾಥ ಎಸ್.ರಾಠೋಡ, ಆನಂದ ಭಾಂಡಗೆ, ಮಲ್ಲಯ್ಯ ಭಿಕ್ಷಾವತಿಮಠ, ಬಸಣ್ಣ ಹೊಗರಿ, ವಿರೇಶ ರಾಠೋಡ, ಚಂದ್ರು ರಾಠೋಡ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!