
ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನ ನೀಡಲಿ:-ಜಿ.ಜಯಾ
ಕೊಪ್ಪಳ : ಸತ್ಯಮಿಥ್ಯ (ಅಗಸ್ಟ್ -31)
ಜಿಲ್ಲೆಯ ಕುಕನೂರು ಪಟ್ಟಣದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಹಿಂದಿ ವಿಷಯ ಶಿಕ್ಷಕನಾಗಿ ಯಲ್ಲಪ್ಪ ಏ. ಎಚ್. 35 ವರ್ಷಗಳ ಕಾಲ ಸೇವೆಯಿಂದ ದಿನಾಂಕ 31.8.2024 ರಂದು ಸೇವಾ ನಿವೃತ್ತಿ ಹೊಂದಿದರು.
ಈ ಸಂದರ್ಭದಲ್ಲಿ ಜವಾಹರ್ ನವೋದಯ ವಿದ್ಯಾಲಯದ ಸಿಬ್ಬಂದಿ ವರ್ಗದವರಿಂದ ಹಿಂದಿ ವಿಷಯ ಬೋಧನೆಯ ಶಿಕ್ಷಕರಾದ ಯಲ್ಲಪ್ಪ ಅವರಿಗೆ ಹೃದಯಸ್ಪರ್ಶಿ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಜಿ. ಜಯಾ ವಹಿಸಿ ಮಾತನಾಡುತ್ತ ಹಿಂದಿ ಶಿಕ್ಷಕರಾಗಿ ಯಲ್ಲಪ್ಪ ಅವರು ಅನೇಕ ನವೋದಯ ವಿದ್ಯಾಲಯಗಳಲ್ಲಿ ಸೇವೆಯನ್ನ ಸಲ್ಲಿಸುತ್ತಾ ಬಂದಿದ್ದು ನಮ್ಮ ಕುಕುನೂರು ಪಟ್ಟಣದ ನವೋದಯ ಶಾಲೆಯಲ್ಲಿ ನಾಲ್ಕು ವರ್ಷ ಸೇವೆಯನ್ನು ಸಲ್ಲಿಸಿ ಇಂದು ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದು. ಇವರ ಸೇವೆ ಶ್ಲಾಘನೀಯವಾಗಿದೆ. ಈ ನಮ್ಮ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಷಯ ಬೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ನಿಷ್ಠೆ ಹಾಗೂ ಪ್ರೀತಿಯಿಂದ ಸೇವೆಯನ್ನು ನೀಡಿದ್ದಾರೆ ಇವರಿಗೆ ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಸೇವಾ ನಿವೃತ್ತಿ ಹೊಂದಿದ ಯಲ್ಲಪ್ಪ ಎ. ಎಚ್ .ಮಾತನಾಡುತ್ತ ನನ್ನ 35 ವರ್ಷ ಸೇವೆಯಲ್ಲಿ ನನಗೆ ಜವಾಹರ ನವೋದಯ ವಿದ್ಯಾಲಯದಲ್ಲಿ, ವಿದ್ಯಾಲಯದ ಆಡಳಿತ ಮಂಡಳಿಯವರು ಹಾಗೂ ಶಿಕ್ಷಕರು ಅತ್ಯಂತ ಅನೂನ್ಯತೆಯಿಂದ, ಆರೋಗ್ಯದಲ್ಲಿ ವ್ಯತ್ಯಾಸವಾದಾಗು ಕೂಡ ನನ್ನ ಮೇಲೆ ಯಾವುದೇ ಒತ್ತಡವನ್ನು ಹಾಕದೆ ಸಹಕರಿಸಿದ್ದಾರೆ.ವಿದ್ಯಾರ್ಥಿಗಳು ಸಹ ನಮ್ಮ ವಿದ್ಯಾಲಯದಲ್ಲಿ ಹೇಳಿದ ಪಠ್ಯಪುಸ್ತಕಗಳ ಶಿಕ್ಷಣವನ್ನು ಉತ್ತಮವಾಗಿ ಅಭ್ಯಾಸದೊಂದಿಗೆ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ಮಾತನಾಡಿದರು.
ಜವಾಹರ್ ನವೋದಯ ವಿದ್ಯಾರ್ಥಿಗಳು ಮಾತನಾಡುತ್ತ ಶಿಕ್ಷಕರಾದ ಯಲ್ಲಪ್ಪ ಅವರು ನಮ್ಮ ಜವಹಾರ್ ನವೋದಯ ವಿದ್ಯಾಲಯದಲ್ಲಿ ಉತ್ತಮ ಬೋಧನೆ ಮತ್ತು ವಿದ್ಯಾರ್ಥಿಗಳಿಗೆ ವಿಷಯ ಬೋಧನೆ ಜೊತೆಗೆ ತಮ್ಮ ಜ್ಞಾನದ ಜೀವನದ ಬಗ್ಗೆಯೂ ಸಹ ಮಹತ್ವದ ಪಾಠಗಳನ್ನು ಕಲಿಸಿದ್ದಾರೆ. ಅವರು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಬೆಂಬಲಿಸುವುದರ ಜೊತೆಗೆ ಅನೇಕ ಅಮೂಲ್ಯವಾದ ಜೀವನದ ಪಾಠಗಳನ್ನು ಕಲಿಸಿದ್ದಾರೆ. ಅವರು ಶಿಕ್ಷಕರಾಗಿ ಕೆಲವೊಮ್ಮೆ ಕಟ್ಟುನಿಟ್ಟಾಗಿದ್ದರು. ಆದರೆ ಅವರು ವಿದ್ಯಾರ್ಥಿಗಳೊಡನೆ ಸ್ನೇಹಿತನಂತೆ ತುಂಬಾ ಸ್ನೇಹ ಪರರಾಗಿದ್ದರು ಎಂದು ವಿದ್ಯಾರ್ಥಿಗಳು ತಿಳಿಸಿದರು.
ಜವಹಾರ್ ನವೋದಯ ಆಡಳಿತ ಮಂಡಳಿಯವರು ಮತ್ತು ವಿದ್ಯಾರ್ಥಿಗಳು ಶಿಕ್ಷಕರಾದ ಯಲ್ಲಪ್ಪ ಅವರಿಗೆ ಅತ್ಯಂತ ಗೌರವ ದೊಂದಿಗೆ ಅವರಿಗೆ ಸನ್ಮಾನಿಸಿ ಸತ್ಕರಿಸಿ ಸಮಾರಂಭವನ್ನು ನೆರವೇರಿಸಿದರು.
ಸಂದರ್ಭದಲ್ಲಿ ಉಪಪ್ರಾಚಾರ್ಯರಾದ ರಾಜೇಶ್ ಏನ್, ಪ್ರಾಣೇಶ, ಮರಿಸ್ವಾಮಿ ವರಿಷ್ಠ ಶಿಕ್ಷಕರು,ಎಸ್. ಪಿ. ಪೂಜಾರ, ನಟರಾಜ, ಅವಿನಾಶ, ವೆಂಕಟೇಶ ಹಿರೇಮಠ, ಫಾತೀಮಾ, ಶಕುಂತಲಾ ಪೂಜಾರ, ಅಂದಾನಯ್ಯ ಹಾಗೂ ಜವಹಾರ್ ನವೋದಯ ವಿದ್ಯಾಲಯದ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಇದ್ದರು.
ವರದಿ : ಚನ್ನಯ್ಯ ಹಿರೇಮಠ.