ದೇಶದ ಪ್ರಜೆಗಳಲ್ಲಿ ಸಮಾನತೆ ಮತ್ತು ಪರಸ್ಪರರಲ್ಲಿ ಬ್ರಾತೃತ್ವ ಮೂಡಿಸುವಲ್ಲಿ ಸಂವಿಧಾನದ ಪಾತ್ರ ಬಹುದೊಡ್ಡದು: ದಿವಾನಿ ನ್ಯಾಯಾಧೀಶ ಆದಿತ್ಯ ಬಿ. ಕಲಾಲ.
ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ.
ದೇಶದ ಪ್ರಜೆಗಳಲ್ಲಿ ಸಮಾನತೆ ಮತ್ತು ಪರಸ್ಪರರಲ್ಲಿ ಬ್ರಾತೃತ್ವ ಮೂಡಿಸುವಲ್ಲಿ ಸಂವಿಧಾನದ ಪಾತ್ರ ಬಹುದೊಡ್ಡದು: ದಿವಾನಿ ನ್ಯಾಯಾಧೀಶ ಆದಿತ್ಯ ಬಿ. ಕಲಾಲ.
ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ
ಗಜೇಂದ್ರಗಡ:ಸತ್ಯಮಿಥ್ಯ (ನ -26).
ದೇಶದ ಪ್ರಜೆಗಳಲ್ಲಿ ಸಮಾನತೆ ಮತ್ತು ಪರಸ್ಪರರಲ್ಲಿ ಬ್ರಾತೃತ್ವ ಮೂಡಿಸುವಲ್ಲಿ ಸಂವಿಧಾನದ ಪಾತ್ರ ಬಹುದೊಡ್ಡದು.ಪ್ರಜಾಪ್ರಭುತ್ವ ಆಧಾರದ ಮೇಲೆ ಲಿಖಿತ ರೂಪದಲ್ಲಿ ರಚನೆಗೊಂಡು, ಭಾರತೀಯರ ಬದುಕಿಗೆ ಹತ್ತಿರವಾಗಿರುವ ಭಾರತದ ಸಂವಿಧಾನ, ಸೃಜನ ಶೀಲ, ಸ್ಪಂಧನಾ ಮತ್ತು ಚಲನಶೀಲವಾಗಿದೆ ಎಂದು ರೋಣ-ಗಜೇಂದ್ರಗಡ ತಾಲ್ಲೂಕು ಪ್ರದಾನ ದಿವಾನಿ ನ್ಯಾಯಾಧೀಶ ಆದಿತ್ಯ ಬಿ. ಕಲಾಲ ಹೇಳಿದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘದಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯುನ್ನತವಾಗಿದೆ. ದೇಶದ ಸಾರ್ವಭೌಮತೆ, ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು ಎಂದರು. ಅಮಾಯಕರಿಗೆ ಶಿಕ್ಷೆಗೆ ಆಗಬಾರದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನೊಂದವರಿಗೆ, ಅಬಲೆಯರಿಗೆ, ದೀನದಲಿತರಿಗೆ, ಅಮಾಯಕರಿಗೆ ಪರಿಹಾರ ಒದಗಿಸುವುದೇ ಕಾನೂನಿನ ಮುಖ್ಯ ಉದ್ದೇಶವಾಗಿದೆ ಎಂದರು. ಕಾನೂನು ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕಾದ ಮಹತ್ತರ ಉದ್ದೇಶವಾಗಿದ್ದು, ಒಂದು ರಾಷ್ಟ್ರದ ಅಭಿವೃದ್ಧಿ ಹೊಂದಬೇಕಾದರೆ ಆ ರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಕಾನೂನು ಸಾಕ್ಷರತೆಯು ಬರೀ ಸಾಕ್ಷರತೆಯಾಗದೇ ಸಾರ್ವಜನಿಕರು ಯಾವುದು ತಪ್ಪು ಯಾವುದು ಸರಿ ಎಂದು ತಿಳುವಳಿಕೆ ಹೊಂದುವಂತಾಗಬೇಕು ಎಂದರು.
ರೋಣ-ಗಜೇಂದ್ರಗಡ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ವಿ. ಎಸ್. ಬಂಗಾರಿ ಮಾತನಾಡಿ, ಎಲ್ಲಾ ಕಾನೂನುಗಳ ತಾಯಿಯಾಗಿರುವ ಸಂವಿಧಾನವನ್ನು ಓದುವುದರ ಜೊತೆಗೆ ಅದರಲ್ಲಿನ ಅಂಶಗಳನ್ನು ಪ್ರತಿಯೊಬ್ಬರೂ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ದೇಶದಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಾಧ್ಯವಾಗುತ್ತದೆ. ಕಾನೂನು ಸೇವೆಗಳು ಇರುವುದು ಸಮಾಜದ ನಾಗರಿಕರ ಒಳಿತಿಗಾಗಿ ಹಾಗಾಗಿ ಅವುಗಳನ್ನು ಪಾಲನೆ ಮಾಡುವುದು ನಮ್ಮೆಲ್ಲರ ಹಿತಕ್ಕಾಗಿ ಎಂದರು.
ಪಿಯು ಕಾಲೇಜಿನ ಪ್ರಾಂಶುಪಾಲ ವಸಂತರಾವ್ ಗಾರಗಿ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರು 1949ರ ನ. 26ರಂದು ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡುವ ಮೂಲಕ ಸಮಗ್ರ ಅಭಿವೃದ್ದಿಗೆ ಕಾರಣೀಭೂತರಾದರು. ಈ ದಿನವನ್ನು ನಾವೆಲ್ಲರೂ ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದರು. ಸಾರ್ವಭೌಮತ್ವದಿಂದ ಕೂಡಿರುವ ಭಾರತದಲ್ಲಿ ಪ್ರತಿಯೊಬ್ಬ ಸಾಮಾನ್ಯ ಮನುಷ್ಯ ದೇಶದ ಅತ್ಯುನ್ನುತ ಹುದ್ದೆ ಪಡೆಯಲು ಅವಕಾಶ ಕಲ್ಪಿಸಿರುವ ಭಾರತದ ಸಂವಿಧಾನದ ಆಸೆ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ. ವಿದ್ಯಾರ್ಥಿಗಳು ನ್ಯಾಯಾಧೀಶರ ಸಾಧನೆಯನ್ನು ಸ್ಪೂರ್ತಿಯಾಗಿ ಪಡೆದು ಅಂತಹ ಹುದ್ದೆಗಳನ್ನು ಪಡೆಯಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪ್ರದಾನ ದಿವಾನಿ ನ್ಯಾಯಾಧೀಶ ಆದಿತ್ಯ ಬಿ. ಕಲಾಲ ಸಂವಿಧಾನದ ಪೀಠಿಕೆಯನ್ನು ಓದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಪ್ಪ ಕೆ. ರೇವಡಿ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಎನ್. ಆರ್. ಗೌಡರ, ವಕೀಲರಾದ ಬಿ. ಎಂ. ಸಜ್ಜನ, ಎ. ಎಸ್. ಅರಹುಣಸಿ, ರಾಜೇಶ್ವರಿ, ಬಾಲು ವಿ. ರಾಠೋಡ, ಸುನಿಲ ಪವಾರ, ಎಸ್. ಬಿ. ಹಿಡಿಮಠ, ಎನ್. ಎಸ್. ಬಸವರೆಡ್ಡಿ ಹಾಗೂ ಕಾಲೇಜಿನ ಸಿಬ್ಬಂದಿಗಳು ಇದ್ದರು.
ವರದಿ : ಚನ್ನು. ಎಸ್.