ತಾಲೂಕು

ಧಾರವಾಡ : ಪಂ. ಪಂಚಾಕ್ಷರ ಗವಾಯಿಗಳವರ ಪುಣ್ಯಸ್ಮರಣೆ ‘ಗುರು ಗುಣಗಾನ’ ಸಮಾರಂಭ.

ಧಾರವಾಡ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ತವರು ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕೊಡುಗೆ.

Share News

ಧಾರವಾಡ :  ಪಂ. ಪಂಚಾಕ್ಷರ ಗವಾಯಿಗಳವರ ಪುಣ್ಯಸ್ಮರಣೆ ‘ಗುರು ಗುಣಗಾನ’ ಸಮಾರಂಭ.

ಧಾರವಾಡ : ಸತ್ಯಮಿಥ್ಯ (ಜೂಲೈ -10)

ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾದ ಮತ್ತು ತಮ್ಮ ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ತವರು ಎನ್ನುವ ಖ್ಯಾತಿ ತಂದುಕೊಡುವಲ್ಲಿ ತಮ್ಮದೆಯಾದ ಕೊಡುಗೆಯನ್ನು ನೀಡಿದ, ಗಾನಯೋಗಿ ಪಂಚಾಕ್ಷರ ಗವಾಯಿಗಳವರ ಪುಣ್ಯಸ್ಮರಣೆ ‘ಗುರು ಗುಣಗಾನ’ ಕವಿಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನವನ್ನು ಒಳಗೊಂಡ ಸಮಾರಂಭವು ದಿನಾಂಕ: ೧೪ ಜುಲೈ ೨೦೨೪ ಸಂಜೆ ೪-೦೦ ಗಂಟೆಗೆ ಧಾರವಾಡದ ರಂಗಾಯಣದಲ್ಲಿ ಜರುಗಲಿದೆ.

ಗದುಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಆಯೋಜಿಸಿದೆ. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕರಾದ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಗದಗ ಇವರು ಅಧ್ಯಕ್ಷತೆ ವಹಿಸಿಕೊಳ್ಳುವರು ಶ್ರೀಮತಿ ಮೃಣಾಲ ಜೋಶಿ ಅಧ್ಯಕ್ಷರು, ಸಂಸ್ಕೃತಿ ಶಿಶು ಮಂದಿರ, ಧಾರವಾಡ, ಶ್ರೀ ಪ್ರಕಾಶ ಬಾಳಿಕಾಯಿ ವ್ಯವಸ್ಥಾಪಕರು, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ ಡಾ. ಎ. ಎಲ್ ದೇಸಾಯಿ, ಸಹಾಯಕ ಉಪನ್ಯಾಸಕರು ಕ. ವಿ. ವಿ. ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯ, ಧಾರವಾಡ ಅತಿಥಿಗಳಾಗಿ ಭಾಗವಹಿಸುವರು. ಡಾ. ಪಂ. ಪು. ಸೇವಾ ಸಮಿತಿಯ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಡಾ. ಸುಮಾ ಬಸವರಾಜ ಹಡಪದ, ಹಳಿಯಾಳ ಸೇವಾ ಸಮಿತಿಯ ಮಹಿಳಾ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಹೊಸಪೇಟೆಯ ಶ್ರೀಮತಿ ದೇವಿಕಾ ಜೋಗಿ, ಸಮಿತಿಯ, ಕಲಘಟಗಿ ತಾಲೂಕಾ ಘಟಕದ ಅದ್ಯಕ್ಷರಾದ ಡಾ. ಸುರೇಶ ಕಳಸಣ್ಣವರ, ಹಾವೇರಿ ತಾಲೂಕಾ ಘಟಕ, ಕಾರ್ಯದರ್ಶಿ ಶಶಿಕಲಾ ಅಕ್ಕಿ ಉಪಸ್ಥಿತರಿರುವರು.

ಸಭಾ ಕಾರ್ಯಕ್ರಮಮದ ನಂತರ, ಧಾರವಾಡದ ಶ್ರೀಗುರು ಪುಟ್ಟರಾಜ ಸಂಗೀತ ಶಾಲೆ, ವೀರಶೈವ ಜಾಗೃತಿ ಮಹಿಳಾ ಸಮಿತಿ, ‘ಮಾಸ್ಟರ್’ ಸಾತ್ವಿಕ್ ಜಿ. ಮಹಾಮನೆ ಇವರುಗಳು ಸಂಗೀತ ನಮನ ಸಲ್ಲಿಸುವರು. ಹುಬ್ಬಳಿಯ ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್, ಧಾರವಾಡದ ರತಿಕಾ ನೃತ್ಯ ನಿಕೇತನ ಮತ್ತು ಉಪಾಧ್ಯ ನೃತ್ಯ ವಿಹಾರ, ತಾಳಿಕೊಟೆಯ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ, ಮುಂಡರಗಿಯ ನಾಟ್ಯಬಿಂದು ಡ್ಯಾನ್ಸ್ ಅಕಾಡೆಮಿ, ಸಂಸ್ಥೆಯ ಶಿಷ್ಯರು ನೃತ್ಯ ನಮನ ಸಲ್ಲಿಸುವುರು.

ಪೂಜ್ಯಗುರು ಪಂಚಾಕ್ಷರ ಗವಾಯಿಗಳವರ ಕುರಿತು ಬರೆದ ಕಲೆಗೆ ಕಣ್ಣಿತ್ತ ಪೂಜ್ಯರು ಕವಿಗೋಷ್ಠಿಯಲ್ಲಿ ಮೃತ್ಯುಂಜಯ ಹಿರೇಮಠ, ಮಾಗಡಿ ಪ್ರೊ ಜಯಶ್ರೀ ಹಿರೇಮಠ, ಧಾರವಾಡ ಪದ್ಮಾ ಜೆ. ಕಬಾಡಿ, ಗದಗ ವೀರಯ್ಯ ಸಂಕಿನಮಠ, ಹಾವೇರಿ, ಬಸವರಾಜ ಹಡಪದ, ಹಳಿಯಾಳ ವಿಮಲಾ ಮಲ್ಲಪ್ಪ, ಹುಬ್ಬಳ್ಳಿ. ಸಂಧ್ಯಾ ದೀಕ್ಷಿತ, ಹುಬ್ಬಳ್ಳಿ ಸುಲೋಚನ ಮಾಲಿಪಾಟೀಲ್, ಧಾರವಾಡ ರೇಖಾ ಜೋಶಿ, ಧಾರವಾಡ ವೀರೇಶರಡ್ಡಿ ಟಿ. ಕಾಮರಡ್ಡಿ, ಕನಕವಾಡ ದಾನಮ್ಮ ವೀ ಅಂಗಡಿ, ಬೆಲ್ಲದ ಬಾಗೇವಾಡಿ ಮಧುಮತಿ ಸಣಕಲ್, ಧಾರವಾಡ ಸೀತಾ ಛಪ್ಪರ, ಧಾರವಾಡ ಶಾರದಾ ಕೆಲಸಂಗದ, ಧಾರವಾಡ ಶಾಂತಕ್ಕ ಹೊಂಬಳ, ಧಾರವಾಡ ಇಂದಿರಾ ಮೋಟೆಬೆನ್ನೂರ, ಬೆಳಗಾವಿ ಇವರುಗಳು ತಮ್ಮ ಕವನದ ಮೂಲಕ ಗುರು ಗುಣಗಾನ ಮಾಡಲಿದ್ದಾರೆ. ಶ್ರೀಮತಿ ಸುಧಾ ಕಬ್ಬೂರ ಇವರು ಕಾರ್ಯಕ್ರಮದ ನಿರೂಪಣೆ ಮಾಡುವರು ಎಂದು ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಡಾ. ಸುಮಾ ಹಡಪದ, ಹಳಿಯಾಳ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವರದಿ : ವಿರೂಪಾಕ್ಷ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!