ಪಂಚಗ್ಯಾರಂಟಿಗಳ ಬಗ್ಗೆ ಸಂದೇಹ ಬೇಡ ನಿರಂತರವಾಗಿರುತ್ತವೆ – ಜಿ. ಎಸ್. ಪಾಟೀಲ್.
ಬಡವರ ಜೀವನ ಮಟ್ಟ ಸುಧಾರಿಸುವಲ್ಲಿ ಪಂಚ ಗ್ಯಾರಂಟಿಗಳು ಸಹಕಾರಿಯಾಗಿವೆ
ಪಂಚಗ್ಯಾರಂಟಿಗಳ ಬಗ್ಗೆ ಸಂದೇಹ ಬೇಡ ನಿರಂತರವಾಗಿರುತ್ತವೆ – ಜಿ. ಎಸ್. ಪಾಟೀಲ್.
ಗಜೇಂದ್ರಗಡ : ಸತ್ಯ ಮಿಥ್ಯ ( ಜೂ -21).
ಬಡವರ ಜೀವನ ಮಟ್ಟ ಸುಧಾರಿಸುವಲ್ಲಿ ಪಂಚ ಗ್ಯಾರಂಟಿಗಳು ಸಹಕಾರಿಯಾಗಿವೆ ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜಾರಿಯಾದ ಪಂಚ ಗ್ಯಾರಂಟಿಗಳು ನಿರಂತರವಾಗಿರುತ್ತವೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ನುಡಿದರು.
ಅವರು ಗುರುವಾರ ಗಜೇಂದ್ರಗಡ ಪಟ್ಟಣದ ಕೆಎಚ್‌ಡಿಸಿ ಕಾಲೋನಿಯ ನೂತನ ಅಂಗನವಾಡಿ ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡುತ್ತ. ಗಜೇಂದ್ರಗಡ ತಾಲೂಕಿಗೆ ಕ್ರೀಡಾಂಗಣ ಮಂಜೂರ ಆಗಿದ್ದು ಮುಂದಿನ ದಿನಗಳಲ್ಲಿ ನೂತನ ತಹಶೀಲ್ದಾರ್ ಕಚೇರಿ ಕಟ್ಟಡಕ್ಕೂ ಅನುದಾನ ಸಿಗುವ ಬರವಸೆ ವ್ಯಕ್ತಪಡಿಸಿದರು.
ಗಜೇಂದ್ರಗಡ ನಗರದಲ್ಲಿ ನಾಲ್ಕು ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಲಾಯಿತು. ಒಂದು ಅಂಗನವಾಡಿ ಕೇಂದ್ರಕ್ಕೆ 20 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಶಿವರಾಜ ಘೋರ್ಪಡೆ, ಶ್ರೀಧರ ಬಿದರಳ್ಳಿ, ಮುರ್ತುಜಾ ಡಾಲಾಯತ್,ಅಶೋಕ ಭಾಗಮಾರ, ವೆಂಕಟೇಶ ಮುದಗಲ್, ಶ್ರೀಧರ ಗಂಜಿಗೌಡ್ರ, ಎಫ್.ಎಸ್. ಕರೆದುರಗಣ್ಣವರ, ಮಾರುತಿ ಕಲ್ಲೋಡ್ಡರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಸುರೇಶ ಭಂಡಾರಿ.