ಅಂಗನವಾಡಿ ಕಾಮಗಾರಿ ಕಳಪೆ! ಗುತ್ತೇದಾರ ಪರವಾನಿಗೆ ರದ್ದುಪಡಿಸಿ : ಮಲ್ಕಣ್ಣ ಪೂಜಾರಿ ಆಗ್ರಹ
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಆಗ್ರಹ.

ಅಂಗನವಾಡಿ ಕಾಮಗಾರಿ ಕಳಪೆ! ಗುತ್ತೇದಾರ ಪರವಾನಿಗೆ ರದ್ದುಪಡಿಸಿ : ಮಲ್ಕಣ್ಣ ಪೂಜಾರಿ ಆಗ್ರಹ
ಜೇವರ್ಗಿ :ಸತ್ಯಮಿಥ್ಯ ( ಜುಲೈ -15)
ತಾಲೂಕಿನ ಚೆನ್ನೂರು ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಣೆಗಳು ಮಳೆಯಿಂದ ಸಂಪೂರ್ಣವಾಗಿ ಸೋರುತ್ತಿದ್ದು ಅಲ್ಲೇ ಮಕ್ಕಳು ವಿದ್ಯಾಭ್ಯಾಸ ಮಾಡಲು ಜೀವ ಕೈಯಲ್ಲಿ ಹಿಡಿದುಕೊಂಡು ಅಭ್ಯಾಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜೇವರ್ಗಿ ತಾಲೂಕಿನ ಶ್ರೀರಾಮ ಸೇನದ ಅಧ್ಯಕ್ಷರಾದ ಮಲ್ಕಣ್ಣ ಪೂಜಾರಿ ಆರೋಪಿಸಿದ್ದಾರೆ.
ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದರಲ್ಲದೆ ಅಡುಗೆ ಮಾಡಿಸಲು ಸಂಪೂರ್ಣ ಕೋಣೆ ಜಲಾವೃತಗೊಂಡಿದೆ ಈ ಕಾಮಗಾರಿ ಮಾಡಿದ ಗುತ್ತೇದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಜೊತೆಗೆ ಅವರ ಗುತ್ತೇದಾರ್ ಪರವಾನಿಗೆಯನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಕೆಲವೇ ವರ್ಷಗಳಲ್ಲಿ ಈ ರೀತಿ ಮಳೆಯಿಂದ ಸೋರುತ್ತಿದೆ ಜೊತೆಗೆ ಅಲ್ಲಲ್ಲಿ ಮೇಲ್ಚಾವಣಿ ಕುಸಿದು ಮಕ್ಕಳ ಮೇಲೆ ಬೀಳುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಈ ಕಾಮಗಾರಿ ಮಾಡಿದ ಗುತ್ತೇದಾರರ ಪರವಾನಿಗೆ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ವರದಿ : ಶಿವು ರಾಠೋಡ್.