
ಪ್ರತಿಯೊಬ್ಬರು ವೃತ್ತಿಯನ್ನು ಗೌರವಿಸುವುದು ಮೊದಲು ಕಲಿಯಬೇಕು:-ಎಸ್ .ಎಸ್. ಗೌಡರ್
ಕುಕನೂರ : ಸತ್ಯಮಿಥ್ಯ ( ಅಗಸ್ಟ್ -30).
ನಾವು ಮಾಡುವಂತಹ ಯಾವುದೇ ವೃತ್ತಿಯಾಗಲಿ ಅದನ್ನು ಶ್ರದ್ದೆ, ಗೌರವ ಮತ್ತು ಪ್ರಾಮಾಣಿಕವಾಗಿ ವೃತ್ತಿಯನ್ನು ಮಾಡಿದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಗದಗ ಜಿಲ್ಲಾ ಫೋಟೋ ಮತ್ತು ವಿಡಿಯೋಗ್ರಾಫರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಸ್ .ಎಸ್. ಗೌಡರ್ ನುಡಿದರು .
ಕೊಪ್ಪಳ ಜಿಲ್ಲೆಯ ಕುಕುನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕುಕನೂರು ತಾಲೂಕ ನೂತನ ಫೋಟೋ ಮತ್ತು ವಿಡಿಯೋಗ್ರಾಫರ್ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಕನೂರು ತಾಲೂಕ ಫೋಟೋ ಮತ್ತು ವಿಡಿಯೋಗ್ರಾಫರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಹಮ್ಮದ್ ರಫಿ ಹಿರಿಯಾಳ. ಈ ಮೊದಲು ಯಲಬುರ್ಗಾ ತಾಲೂಕಿನಲ್ಲಿ ಮಾತ್ರ ಸಂಘಟನೆ ಇದ್ದಿತ್ತು. ಈಗ ನೂತನವಾಗಿ ಕುಕನೂರು ಪಟ್ಟಣದಲ್ಲಿ ಸಂಘವನ್ನ ಸ್ಥಾಪಿಸಿದ್ದು ಸಂತಸದ ವಿಚಾರ.ಒಂದು ಸಂಘಟನೆ ಯಶಸ್ವಿಯಾಗಬೇಕಾದರೆ ನಮ್ಮ ತಾಲೂಕಿನ ಎಲ್ಲಾ ಫೋಟೋ ಮತ್ತು ವಿಡಿಯೋಗ್ರಾಫರ್ ಗಳ ಬೆಂಬಲ ಎಲ್ಲರ ಸಹಕಾರದೊಂದಿಗೆ ಸಂಘಟನೆ ಯಶಸ್ವಿಗೆ ಎಲ್ಲರ ಪರಿಶ್ರಮವು ಅಧಿಕವಾಗಿದೆ ಹೇಳಲು ತುಂಬಾ ಸಂತೋಷವೆನಿಸುತ್ತದೆ. ನಮ್ಮ ಫೋಟೋ ಮತ್ತು ವಿಡಿಯೋಗ್ರಾಫರ್ ಗಳಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಮತ್ತು ಜೀವನ ನಿರ್ವಹಣೆಗೆ ಭದ್ರತೆಯನ್ನು ನೀಡಬೇಕು ಎಂದು ಮಾತನಾಡಿದರು.
ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಡಾ.ಮಹದೇವ ಮಹಾಸ್ವಾಮಿಗಳು ಮಾತನಾಡುತ್ತ ಹಳೆಯ ನೆನಪುಗಳ ಮರಿಕಳಿಸುವ ಚಿತ್ರ ಸೆರೆ ಹಿಡಿಯುವ ಫೋಟೋ ಮತ್ತು ವಿಡಿಯೋಗ್ರಾಫರ್ ಗಳು ನಮ್ಮ ಸವಿ ನೆನಪುಗಳನ್ನು ಉಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಯೊಬ್ಬರು ತಮ್ಮ ವೃತ್ತಿಗಳನ್ನು ಗೌರವಿಸಿ ಪೂಜಿಸುವುದು ಮತ್ತು ಶ್ರದ್ಧೆಯಿಂದ ನೆರವೇರಿಸಿಕೊಂಡು ಹೋದಾಗ ಅಂತಹ ವೃತ್ತಿಗಳಿಗೆ ಗೌರವ ಸಿಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂದರ್ಭದಲ್ಲಿ ಉದ್ಘಾಟಕರಾಗಿ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ವಸ್ತ್ರದ, ಅಧ್ಯಕ್ಷತೆಯನ್ನು ಶರಣಪ್ಪ ಗೌಡ್ರು ಪಾಟೀಲ್ ಗೌರವಧ್ಯಕ್ಷರು ಕುಕನೂರು ತಾಲೂಕ, ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು , ಕಾರ್ಯದರ್ಶಿಗಳಿಗೆ ವಿಶೇಷ ಸನ್ಮಾನಿಸುತ್ತಾರಾದ ವಿಜಯಕುಮಾರ್ ವಸ್ತ್ರದ, ಪ್ರಾಣೇಶ್ ಕಂಪ್ಲಿ, ಬಸವರಾಜ ಕಂಪ್ಲಿ, ಮಂಜುನಾಥ ಕುರುಗೋಡು, ಚಾಂದ್ ಪಾಷಾ ಗಡಾದ, ವಿರುಪಾಕ್ಷಿ ಮುದ್ದಾ ಬಳ್ಳಿ, ಉಮಾಪತಿ ಹೊಸಮನಿ, ಸಂದೀಪ್, ಪ್ರೀತಮ್, ಸಂಗಮೇಶ್ ಉಪ್ಪಿನ್, ಅಣ್ಣೀರಯ್ಯ ಹಿರೇಮಠ, ಮಹಾಂತೇಶ್ ಹಿರೇಮಠ, ಶಿವಶರಣಯ್ಯ ಮ್ಯಾಗಳ ಮಠ, ರಾಜಶೇಖರ್ ಶಾಗೋಟಿ, ಮಹಮ್ಮದ್ ರಫಿ ಹಿರಿಯಾಳ, ಮಂಜುನಾಥ್ ತೋಟದ,
ಸಂದರ್ಭದಲ್ಲಿ ಮೂರ್ತಿ ಕಂಪ್ಲಿ, ರಶೀದ್ ಮುಬಾರಕ್, ಮಹೇಶ ಬಾರ್ಕೆರ್, ಮತ್ತು ಕುಕನೂರು ತಾಲೂಕು ಮತ್ತು ವಿವಿಧ ಗ್ರಾಮದ ತಾಲೂಕುಗಳ ಫೋಟೋ ಮತ್ತು ವಿಡಿಯೋಗ್ರಾಫರ್ ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.