ದೇಶದ್ರೋಹ ಹೇಳಿಕೆ ವಿರುದ್ದ ಹರಿಹಾಯ್ದ ಮಾಜಿ ಸಚಿವ ಕಳಕಪ್ಪ ಬಂಡಿ.
ಗಜೇಂದ್ರಗಡ : ಸತ್ಯಮಿಥ್ಯ (ಅಗಸ್ಟ್ -29).
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ದೇಶದ ಮೇಲೆ ಭಯೋತ್ಪಾದಕ ಚಟುವಟಿಕೆಗಳು ನಡೆಯುದಿದ್ದವು. ಅನೇಕ ಜನರ ಮಾರಣ ಹೋಮ ನಡೆದಿತ್ತು. ಆ ಸಂದರ್ಭದಲ್ಲಿ ಭಯೋತ್ಪಾದಕ ಕಸಬ್ ನನ್ನ ಕರೆತಂದು ವರ್ಷಾನುಗಟ್ಲೆ ಬಿರಿಯಾನಿ ಕೊಟ್ಟು ಸಲುಹಿದರು. ಈಗಿನ ಶಾಸಕ ಜಿ. ಎಸ್. ಪಾಟೀಲರಿಗೆ ಅದರ ಪರಿಕಲ್ಪನೆ ಇಲ್ಲ. ಅಧಿಕಾರ ಶಾಶ್ವತವಲ್ಲ. ದೇಶ ದ್ರೋಹ ಹೇಳಿಕೆ ಸಹಿಸೋಲ್ಲ.ಇನ್ನೂ ಕೇವಲ ಮೂರುವರೆ ವರ್ಷ ಜನ ನಿಮ್ಮ ವಿರುದ್ದ ಮತ ಹಾಕಲು ಕಾಯುತ್ತಿದ್ದಾರೆ.ವಿಶ್ವದಲ್ಲಿಯೇ ನಂಬರ್ ಒನ್ ವ್ಯಕ್ತಿಯಾಗಿ ಮೋದಿ ಹೊರಹೊಮ್ಮುತ್ತಿದ್ದಾರೆ. ಮೋದಿಯವರ ಆಡಳಿತದಲ್ಲಿ ಭಯೋತ್ಪಾದಕರ ಲೆಕ್ಕವನ್ನು ತತ್ ಕ್ಷಣದಲ್ಲಿ ಚುಕ್ತಾ ಮಾಡುವ ತಾಕತ್ತು ನಮ್ಮ ಸೈನ್ಯಕ್ಕೆ ಇದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ನುಡಿದರು.
ಅವರು ನಗರದಲ್ಲಿಂದು ನಡೆದ. ರೋಣ ಶಾಸಕ ಜಿ. ಎಸ್ ಪಾಟೀಲರ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಮನೆಗೆ ನುಗ್ಗಿದ ಹಾಗೆ ನರೇಂದ್ರ ಮೋದಿ ಮನೆಗೆ ನುಗ್ಗುವ ಕಾಲ ಸನಿಹದಲ್ಲಿದೆ ಎಂಬ ಹೇಳಿಕೆ ಖಂಡಿಸಿ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತ. ನೇರವಾಗಿ ಶಾಸಕ ಜಿ. ಎಸ್. ಪಾಟೀಲರ ಮೇಲೆ ವಾಗ್ದಾಳಿ ಮಾಡುತ್ತಾ. ಜನತೆ ನಿಮ್ಮ ಪರವಾಗಿದ್ದಾರೆಂದು ನೀವೂ ತಪ್ಪು ತಿಳಿದಿದ್ದೀರಿ. ತಾಕತ್ತಿದ್ದರೆ ನೀವು ರಾಹುಲ್ ಗಾಂಧಿಯನ್ನು ಕರೆಸಿ ನಾವೂ ಮೋದಿಯವರನ್ನು ಕರೆಸುತ್ತೇವೆ ಯಾರಿಗೆ ಎಷ್ಟು ಜನ ಸೇರುತ್ತಾರೆ ಎಂದು ತಿಳಿಯುತ್ತದೆ.ಅಧಿಕಾರದಲ್ಲಿ ಸೂರ್ಯ ಚಂದ್ರರಿರುವವರೆಗೆ ನೀವೂ ಇರುವುದಿಲ್ಲ ನಾವೂ ಇರುವುದಿಲ್ಲ. ಮೋದಿಯವರ ಮನೆಗೆ ಮತ್ತು ಕಾರ್ಯಕರ್ತರ ಮನೆಗೆ ನುಗ್ಗುವ ನಿಮ್ಮ ಗುಂಡಾಗಿರಿಗೆ ಹೆದರುವ ಪ್ರಶ್ನೆಯೇ ಇಲ್ಲಾ. ನಾವೂ ಸೋತಿದ್ದೇವೆ ಸತ್ತಿಲ್ಲ. ಕ್ಷೇತ್ರದ ಜನತೆ ನಿಮ್ಮ ಅವಧಿ ಮೂರುವರೆ ವರ್ಷಮಾತ್ರ ಬಾಕಿ ಇದೆ ಎನ್ನುತ್ತಿದ್ದಾರೆ. ನಾವೂ ಸುಮ್ಮನೆ ಕೂತಿಲ್ಲ ನಿಮ್ಮ ಆಡಳಿತವನ್ನು ಗಮನಿಸುತ್ತಿದ್ದೇವೆ. ಶಾಸಕರು ಮಾತಿನ ಮೇಲೆ ಹಿಡಿತವಿರಬೇಕು. ಪೊಲೀಸ್ ಇಲಾಖೆಯವರು ಏನು ಮಾಡುತ್ತಿದ್ದೀರಿ ಎಂದರು.
ಇದಕ್ಕೂ ಪೂರ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕೆ. ಕೆ. ವೃತ್ತದಲ್ಲಿ ಜಿ. ಎಸ್. ಪಾಟೀಲರ ವಿರುದ್ದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಅಶೋಕ ನವಲಗುಂದ, ಉಮೇಶ ಚನ್ನು ಪಾಟೀಲ್, ಮುತ್ತಣ್ಣ ಕಡಗದ, ಬಿ. ಎಂ. ಸಜ್ಜನರ, ಅಮರೇಶ ಬಳಿಗೇರ, ಚಂದಪ್ಪ ಗುಡದೂರ, ಭಾಸ್ಕರ್ ರಾಯಬಾಗಿ, ಶಂಕರ ಇಂಜನಿ, ಸಂತೋಷ ವಸ್ತ್ರದ, ಕನಕಪ್ಪ ಅರಳಿಗಿಡದ, ಯು ಆರ್ ಚನ್ನಮ್ಮನವರ ಸೇರಿದಂತೆ ಅನೇಕರು ಇದ್ದರು.
ವರದಿ : ಸುರೇಶ ಬಂಡಾರಿ