ಕೃಷಿಗೆ ಸಂಬಂಧಪಟ್ಟ ಸಾಲದ ಕುರಿತು ಹಣ ತಡೆಹಿಡಿಯುತ್ತಿದ್ದು ರೈತರ ಹಣ ವರ್ಗಾವಣೆ ಮಾಡಲು ಆಗ್ರಹ.
ಲಿಂಗಸುಗೂರು:ಸತ್ಯಮಿಥ್ಯ (ಆಗಸ್ಟ್-02)
ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಲವಾರು ವರ್ಷಗಳಿಂದ ಅತೀವೃಷ್ಠಿ ಬರಗಾಲದಿಂದ ಮತ್ತು ರೈತರ ಬೆಳೆದ ಬೆಳೆಗೆ ಯೋಗ್ಯವಾದ ಬೆಲೆ ಸಿಗದೇ ರೈತರು ಕಂಗಾಲು ಆಗಿದ್ದು ಇದರ ನಡುವೆ ಬ್ಯಾಂಕಯ ಅಧಿಕಾರಿಗಳು ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಅಲ್ಲದೇ ಮತ್ತು ಮೌತುಕವಾಗಿ ಅಪರ ಜಿಲ್ಲಾಧಿಕಾರಿಗಳು ರಾಯಚೂರು ಇವರು ರೈತರಿಗೆ ಅನ್ಯಾಯವಾಗದಂತೆ ಮತ್ತು ಅವರ ಖಾತೆಯಲ್ಲಿ ಜಮೆ ಆದ ಹಣವನ್ನು ಸಾಲದ ಮೊತ್ತಕ್ಕೆ ಹಾಕದೇ ಅವರಿಗೆ ಕೊಡಲು ಆದೇಶ ಮಾಡಿರುತ್ತಾರೆ. ಇದರ ಬಗ್ಗೆ ಸಭೆ ಕರೆಯಲು ಲೀಡ್ ಬ್ಯಾಂಕ ಮ್ಯಾನೇಜರಿಗೆ ತಿಳಿಸಿರುತ್ತಾರೆ. ಆದರೆ ಇಲ್ಲಿಯವರೆಗೂ ಯಾವುದೇ ರೀತಿಯಿಂದ ಎಲ್ಲಾ ಬ್ಯಾಂಕ ಅಧಿಕಾರಿಗಳು ಮತ್ತು ರೈತರ ಸಭೆ ಕರೆದಿರುವದಿಲ್ಲ ಅದು ಅಲ್ಲದೇ ಮಾನ್ಯ ಮುಖ್ಯಮಂತ್ರಿಗಳ ಆದೇಶ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರ ಆದೇಶ ವಾಗಿದ್ದರು ಸಹ ರಾಯಚೂರು ಜಿಲ್ಲೆಯ ಎಲ್ಲಾ ಬ್ಯಾಂಕುಗಳಲ್ಲಿ ಕೃಷಿಗೆ ಸಂಬಂಧಪಟ್ಟಿ ಸಾಲದ ಕುರಿತು ಹಣ ತಡೆಹಿಡಿಯುತ್ತಿದ್ದು, ಇದನ್ನು ಕೊಡಲೇಸಡಲುಗೊಳಿಸಿ ರೈತರಿಗೆ ಹಣ ವರ್ಗಾವಣೆ ಮಾಡಿಕೊಡಲು ಅನುಕೂಲ ಮಾಡಿಕೊಡಬೇಕು ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿ ಸೂರ್ಯಕಾಂತ 5.099 ಹೆಕ್ಟರ್ ಮತ್ತು ಹೆಸರು 1161 ಹೆಕ್ಟರ ಪ್ರಮಾಣ ಬಿತ್ತನೇ ಆಗಿದ್ದು ಈಗಾಗಲೇ ಹೆಸರು ಕಟಾವಿಗೆ ಬಂದಿರುತ್ತದೆ. ಕೂಡಲೇ ಖರೀದಿ ಕೇಂದ್ರ ತೆರೆಯಬೇಕು, ಇಲ್ಲದಿದ್ದರೆ ಅಂತಹ ಬ್ಯಾಂಕಗಳ ಮುಂದೆ ಸಂಬಂಧಪಟ್ಟ ಇಲಾಖೆ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ರಾಯಚೂರು ಸಂಘಟನೆಯೊಂದಿಗೆ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಸುತ್ತದೆ.ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈಸಂದರ್ಭದಲ್ಲಿ ಬಸನಗೌಡ,ಕುಪ್ಪಣ್ಣ ಮಾಣಿಕ್, ಪ್ರಸಾದ್ ರೆಡ್ಡಿ, ಶಿವಪುತ್ರ ಗೌಡ,ಶರಣಪ್ಪ ಹಳ್ಳಿ, ಆನಂದ ಕುಮಾರ, ಹನುಮಂತ, ಮಹ್ಮದ್ ರಾಜಾಸಾಬ್, ಹನುಮಗೌಡ ಸೇರಿದಂತೆ ಇತರರಿದ್ದರು.
ವರದಿ :ಶಿವು ರಾಠೋಡ್.