
ಎಗ್ ರೈಸ್ ಚಹಾ ಬೀಡಾ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿ ದಾಳಿ.

ಗಜೇಂದ್ರಗಡ – ಸತ್ಯಮಿಥ್ಯ (ನ-13)
ನಗರದ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣದ ಮುಂದಿರುವ ಕಾಂಪ್ಲೆಕ್ಸ್ ನಲ್ಲಿನ ಎಗ್ ರೈಸ್, ಚಹಾ, ಬೀಡಾ ಅಂಗಡಿಗಳ ಮೇಲೆ ಗದಗ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಚೇತನಕುಮಾರ ದಾಳಿ ನಡೆಸಿದರು.

ಬುಧವಾರ ಸಾಯಂಕಾಲ ದಾಳಿ ನಡೆಸಿದ ಅಧಿಕಾರಿಗಳ ತಂಡ. ಎಗ್ ರೈಸ್ ಅಂಗಡಿಯಲ್ಲಿನ ಅಡುಗೆಗೆ ಬಳಸುವ ಎಣ್ಣೆ, ಮಾಂಸ, ತತ್ತಿ ಹಾಗೂ ಆಹಾರದ ಗುಣಮಟ್ಟ ಪರಿಶೀಲಿಸಿದರು.ಬೀಡಾ ಅಂಗಡಿಗಳಲ್ಲಿ ಸಿಗುವ ಬಿಸ್ಕೆಟ್, ತಂಪುಪಾನಿ ಮತ್ತು ಚಾಕಲೇಟ್ ಗಳ ಎಫ್ಎಸ್ಎಸ್ಎಐ ಲೋಗೋ, ಅವಧಿ ಮಿರುವ ದಿನಾಂಕ ಮತ್ತು ಹಾಳಾಗುವಿಕೆಯ ಚಿನ್ಹೆಗಳನ್ನು ಪರಿಶೀಲಿಸಿದರು. ಹಾಗೂ ಅನೇಕ ಟಿಫಿನ್ ಸೆಂಟರ್ ಗಳಿಗೆ ತೆರಳಿ ಸ್ವಚ್ಛತೆ, ಗುಣಮಟ್ಟದ ಆಹಾರ ಬಳಕೆ ಬಗ್ಗೆ ಹೇಳಿದರು.

ಈ ಸಂದರ್ಭದಲ್ಲಿ ಅನೇಕ ಅಂಗಡಿಗಳಲ್ಲಿ ಸ್ವಚ್ಛತೆ ಕೊರತೆ, ಅವಧಿ ಮೀರಿದ ದಿನಬಳಕೆ ವಸ್ತುಗಳು ಕಳಪೆ ಗುಣಮಟ್ಟದ ಅಡುಗೆ ಎಣ್ಣೆ ಮತ್ತು ಮಾಂಸ ಬಳಕೆ ಬೆಳಕಿಗೆ ಬಂದಿದೆ. ನಂತರ ಬಹುತೇಕ ಅಂಗಡಿಗಳಿಗೆ ನೋಟೀಸ್ ನೀಡಿ ಎರಡು ಮೂರುದಿನಗಳಲ್ಲಿ ಎಲ್ಲವು ಸರಿಯಾಗಬೇಕು. ಸರ್ಕಾರದ ಆದೇಶದಂತೆ ವ್ಯಾಪಾರ ವಹಿವಾಟು ಮಾಡಬೇಕು ಎಂದು ನೋಟೀಸ್ ನೀಡಿದರು ಕಡ್ಡಾಯವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪರವಾನಗೆ ತೆಗೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಧಿಕಾರಿ ಬಸವರಾಜ ಬಳಗನೂರ ಸೇರಿದಂತೆ ಪುರಸಭೆ ಸಿಬ್ಬಂದಿಗಳು ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಸುರೇಶ ಬಂಡಾರಿ.




