ಗದಗ : ಶಾಲೆಗೆ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ.
ಗದಗ:ಸತ್ಯಮಿಥ್ಯ ( ಅಗಸ್ಟ್ -26).
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 6 ಸಿದ್ಧರಾಮೇಶ್ವರ ನಗರ ಶಾಲೆಯಲ್ಲಿ ಕಲಿ ನಲಿ ವಿದ್ಯಾರ್ಥಿಗಳಿಗೆ 25 ಕುರ್ಚಿ 4 ಟೇಬಲ್ ಗಳನ್ನು ಕೊಡುಗೆಯಾಗಿ ನೀಡಿದ ಉದ್ಯಮಿ ಜಯಂತಲಾಲ್ ಕವಾಡ್ ಇವರ ಕುಟುಂಬ ವರ್ಗವನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್. ಎಸ್. ಬುರಡಿಯವರು ಮಾತನಾಡಿ ಸರಕಾರಿ ಶಾಲೆ ಮಕ್ಕಳು ಯಾವುದರಲ್ಲಿ ಕಡಿಮೆ ಇಲ್ಲ ಸೂಕ್ತ ಮಾರ್ಗದರ್ಶನ ದೊರೆಯಬೇಕು. ತಂದೆ ತಾಯಿಗಳನ್ನು ಗೌರವಿಸಿ, ಈ ಕೊಡುಗೆಗಳ ಸದುಪಯೋಗವಾಗಲೆಂದು ದಾನಿಗಳಿಗೆ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉದ್ಯಮಿ ಶ್ರೀ ಜಯಂತಿಲಾಲ ಕವಾಡರ್ ಅವರು ವಿದ್ಯಾರ್ಥಿಗಳು ಸತ್ಯ ಮಾರ್ಗದಲ್ಲಿ ನಡೆಯಬೇಕು ಸುಳ್ಳು ಹೇಳಬಾರದು, ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು, ಒಳ್ಳೆಯ ಆರೋಗ್ಯ ಹೊಂದಬೇಕು, ಯಾವುದೇ ರೀತಿಯ ಜಂಕ್ ಫುಡ್ ಗಳನ್ನು ತಿನ್ನಬಾರದು, ವಿದ್ಯಾರ್ಥಿಗಳು ಸಮಾಜದ ಸತ್ಪ್ರಜೆಯಾಗಿ ಬೆಳೆಯಬೇಕೆಂದು ಕಿವಿಮಾತು ಹೇಳಿದರು.
ಉದ್ಯಮಿ ವೋಸ್ವಾಲ್ ರವರು ಕಾರ್ಯಕ್ರಮದ ಕುರಿತು ಅಭಿನಂದನೆಯ ನುಡಿಗಳನ್ನು ಹೇಳಿದರು.
ಅಧ್ಯಕ್ಷತೆ ವಹಿಸಿದ ಎಸಡಿಎಂಸಿ ಅಧ್ಯಕ್ಷರಾದ ಶ್ರೀ ಸಂಜೀವಪ್ಪ ವಾಲಿಕಾರ್ ವಿದ್ಯಾರ್ಥಿಗಳ ಸಾಧನೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಬೆಳಗಿ ಶಾಲೆಯ ಕೀರ್ತಿಯನ್ನು ಹಬ್ಬಿಸಬೇಕೆಂದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಟಿ.ಎಸ್ ಹೂಗಾರ್ ಅವರು ಪ್ರಾಸ್ತವಿಕವಾಗಿ ಮಾತನಾಡಿ ದಾನಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕವಾಡರವರ ಶ್ರೀಮತಿ, ಅವರ ಮಗ, ಸೊಸೆ ಉಪಸ್ಥಿತರಿದ್ದರು ಹಾಗೂ ಕ್ಷೇತ್ರ ಸಂಪನ್ಮೂಲವ್ಯಕ್ತಿಗಳಾದ ಶ್ರೀ ಶಾಮ್ ಲಾಂಡೆ ಹಾಗೂ ಶ್ರೀ ಎಂ ಎ ಯರಗುಡಿ ಹಾಗೂ ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಎಂ.ಎಂ ಜೋಗಿನ ಸ್ವಾಗತಿಸಿ, ನಿರೂಪಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಕವಾಡ ಕುಟುಂಬದವರೆಲ್ಲರೂ ಸಿಹಿ ಮತ್ತು ಪೆನ್ನುಗಳನ್ನು ವಿತರಿಸಿದರು.
ವರದಿ : ಮುತ್ತು.