
“ಶ್ರೇಷ್ಠ ಕೃಷಿಕ” ಡಾ. ಶೌಕತ್ ಅಲಿ ಲಂಬೂನವರರಿಗೆ ಸ್ನೇಹಿತರ ಬಳಗದಿಂದ ಸನ್ಮಾನ
ನವಲಗುಂದ:ಸತ್ಯಮಿಥ್ಯ(ಸೆ-17).
ತಾಲೂಕಿನ ನಾಗನೂರ ಗ್ರಾಮದ ರೈತ ಡಾ. ಶೌಕತ್ ಅಲಿ ಲಂಬೂನವರ ಇವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ನೀಡಿದ ಅತ್ಯುನ್ನತ “ಶ್ರೇಷ್ಠ ಕೃಷಿಕ” ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಸ್ನೇಹಿತರ ಬಳಗದಿಂದ ಸನ್ಮಾನಿಸಿ ಲಂಬೂನವರ ಅವರ ಕೃಷಿ ಕ್ಷೇತ್ರದ ಪರಿಶ್ರಮ, ನಾವೀನತೆ ಮತ್ತು ಮಾದರಿ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ವಿಶೇಷವಾಗಿ ಇವರ “ಸಹಜ ನೈಸರ್ಗಿಕ ಸಮಗ್ರ ಕೃಷಿ”ಮೂಲಭೂತ ಸೌಲಭ್ಯಗಳಾದ ನೀರಾವರಿ, ವಿದ್ಯುತ್ ಶಕ್ತಿ, ಬೋರ್ವೆಲ್, ಇಲ್ಲದೆ ಇರುವುದು ಗಮನಾರ್ಹವಾದದು ಇದು ಕೇವಲ ಮಳೆಯಾಶ್ರಿತ ಈ ವಿಶಿಷ್ಟ ಸಾಧನೆಯನ್ನು ಗಮನಿಸಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಕೃಷಿ ಸಮ್ಮೇಳನದಲ್ಲಿ ನಾಡಿನ ದೊರೆ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಕೃಷಿ ಸಚಿವ ಏನ್ ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನವಲಗುಂದ ಶಾಸಕ ಏನ್ ಎಚ್ ಕೋನರಡ್ಡಿ ಗಣಾಧ್ಯಕ್ಷತೆ ವಹಿಸಿದ್ ಸಭಾಪತಿ ಬಸವರಾಜ್ ಹೊರಟ್ಟಿ ಮುಖ್ಯ ಸಚತಕ ಆಶೋಕ್ ಪಟ್ಟಣ ಇವರೆಲ್ಲರ ಸಮುಖದಲ್ಲಿ ನಮ್ಮ ತಾಲೂಕಿನ ಹೆಮ್ಮೆಯ ರೈತ, ಆಯುಷಕಾರಿ ರೈತ ಹಾಗೂ ಕೃಷಿ ಪಂಡಿತರಾದ ಡಾ. ಶೌಕತ್ ಅಲಿ ಲಂಬೂನವರ ಅವರನ್ನು ಗೆಳೆಯರ ಬಳಗದಿಂದ ಸನ್ಮಾನಿಸಿದು ಹೆಮ್ಮೆಯ ಸಂಗತಿ.
ಮೋದಿನ್ ಸಾಬ್ ಶಿರಕೋಳ ಮಾತನಾಡಿ “ಸಮಗ್ರ ಕೃಷಿಯ ಮೂಲಕ ರೈತರ ಜೀವನೋಪಾಯವನ್ನು ಸುಧಾರಿಸುವಲ್ಲಿ ಶೌಕತ ಅಲಿ ಲಂಬೂನವರ ಅವರ ಕೆಲಸ ಇತರರಿಗೆ ಪ್ರೇರಣೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಶೌಕತ ಅಲಿ ಲಂಬೂನವರ ಅವರು ಸ್ನೇಹಿತರು ಹಾಗೂ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿ,ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ನವೀನ ಪ್ರಯೋಗಗಳನ್ನು ಮುಂದುವರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರವಿ ದಾಟನಾಳ ಬಾಬಾಜಾನ್ ಶಿರಕೋಳ, ಸಂಜಯ್ ಗುರಿಕಾರ್, ರವಿ ದಾಟನಾಳ, ಶಿವಪ್ಪ ಕರಿಗಾರ, ಗಂಗಾಧರ ಕತ್ತಿ ಉಪಸ್ಥಿತರಿದ್ದರು.
ವರದಿ :ಮುತ್ತು ಗೋಸಲ.