ಬೀದಿ ಬದಿ ವ್ಯಾಪಾರಸ್ತರ ಗಜೇಂದ್ರಗಡ ತಾಲೂಕ ಸಮಾವೇಶ.
ಗಜೇಂದ್ರಗಡ:ಸತ್ಯಮಿಥ್ಯ (ಡಿ -15).
ನಗರದ ಶ್ರೀ ಸೇವಾಲಾಲ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಸ್ತರ ಸಂಘ CITU ಸಂಯೋಜಿತ ಗಜೇಂದ್ರಗಡ ತಾಲೂಕ ಬೀದಿ ಬದಿ ವ್ಯಾಪಾರಸ್ತರ ಸಮಾವೇಶ ಉದ್ಘಾಟಿಸಿ ಪುರಸಭೆ ಮಾಜಿ ಸದಸ್ಯರಾದ ಎಮ್ ಎಸ್ ಹಡಪದ ಅವರು ಮಾತನಾಡಿ ಗಜೇಂದ್ರಗಡವು ಗದಗ ಜಿಲ್ಲೆಯಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿನ ಸುತ್ತಮುತ್ತಲಿನ ಜನರಿಗೆ ವ್ಯಾಪಾರಸ್ತ ಒಂದು ಜೀವಾಳ ವಾಗಿದೆ , ಮಾರುಕಟ್ಟೆ ಸ್ಥಳಾಂತರ ಭಾಗವಾಗಿ ಎಷ್ಟೋ ಬಡ ಕುಟುಂಬಗಳು ಬಿದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರಿಪಡಿಸಲು ಮುಂದಾಗಬೇಕು.
ಬಾಲು ರಾಠೋಡ ಮಾತನಾಡಿ ನಗರದಲ್ಲಿ ಬೀದಿ ಬದಿ ವ್ಯಾಪಾರಸ್ತರಿಗೆ ಮಾರಾಟಮಾಡಲು ಅಧಿಕಾರಿಗಳು ನಿರ್ಬಂಧ ಹಾಕಿದ್ದಾರೆ ಅದನ್ನು ಕೈ ಬಿಡಬೇಕು ಎಲ್ಲಾ ವ್ಯಾಪಾರಸ್ತರಿಗೆ ಪುಟಬಾತ್ ಮೇಲೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು, ಬೀದಿ ಬದಿ ಕಾಯ್ದೆ ಅಡಿ ವ್ಯಾಪಾರಸ್ತರಿಗೆ ರಕ್ಷಣೆ ನೀಡುವಂತಾಗಬೇಕು ವ್ಯಾಪಾರ ಮಾಡಲು ಒಂದು ಶಾಶ್ವತ ಸ್ಥಳಾವಕಾಶ ಮಾಡಿಕೊಡಬೇಕು ಎಂದು ಮಾತನಾಡಿದರೂ
ಗಜೇಂದ್ರಗಡ ಬೀದಿ ಬದಿ ವ್ಯಾಪಾರಸ್ತರ ತಾಲೂಕ ಸಮಾವೇಶದಲ್ಲಿ ಅಧ್ಯಕ್ಷರನ್ನಾಗಿ ಶಾಮೀದ್ಅಲಿಸಾಬ್ ದಿಂಡವಾಡ ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಹಾಗೂ ಪದಾಧಿಕಾರಿಗಳಾಗಿ, ಚೌಡಮ್ಮ ಯಲ್ಪು, ಮೈಬೂಸಾಬ್ ಮಾಲ್ದಾರ,ಮುತ್ತಣ್ಣ ರಾಠೋಡ, ಅಂಬರೇಶ ಚವ್ಹಾಣ, ಮಾರುತಿ ಗೊಂದಳೆ, ಮುತ್ತಣ್ಣ ತೇಜಪ್ಪ ರಾಠೋಡ, ವೀಷ್ಣು ಚಂದುಕರ, ಮಹಾಂತೇಶ ಹೀರೇಮಠ, ಖಜಾಂಚಿಯಾಗಿ:– ಪರಸುರಾಮ ಬಡಿಗೇರ ಸದಸ್ಯರಾಗಿ:- ಗಂಗಾಧರ ಸತ್ಯನ್ಯವರ,ಯಮನೂರಸಾಬ್ ಗಾದಿ,ಮರ್ತುಜಾ ದಿಂಡವಾಡ, ಅಶೋಕ್ ಚವ್ಹಾಣ, ಕಳಕಪ್ಪ ಮಾಳೋತ್ತರ, ರಾಜುಪಾಲ,ಅಲ್ಲಾಬಕ್ಷಿ ಮುಚ್ಚಾಲಿ, ಸುರೇಶ್ ಅಕ್ಕಸಾಲಿ, ನಾಗರಾಜ ಅಜ್ಮೀರ,ದೇವಕ್ಕ ರಾಠೋಡ, ಭದ್ರೇಶ್ ರಾಠೋಡ,30 ಜನರ ಸಮಿತಿಯನ್ನ ರಚಿಸಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಾಲು ರಾಠೋಡ, ಮೆಹಬೂಬ್ ಹವಾಲ್ದಾರ್, ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ ಹಾಗೂ ವ್ಯಾಪಾರಸ್ತರು ಭಾಗವಹಿಸಿದ್ದರು.
ನೂತನ ಸಮಿತಿಯಲ್ಲಿ ತುರ್ತು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು:-
1) ಡಬಲ್ ರೋಡ ಭಾಗವಾದ ದುರ್ಗಾ ಸರ್ಕಲ್ ಯಿಂದ ಕೇ ಕೇ ಸರ್ಕಲನ ನಾಲ್ಕು ಭಾಗದಲ್ಲಿ 2004 ಕಾಯ್ದೆ ಅಡಿಯಲ್ಲಿ ಅವಕಾಶ ನಿಡಬೇಕು.
2) ಸಂಬಂಧಪಟ್ಟ ಶಾಸಕರು ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ಎಲ್ಲಾ ವ್ಯಾಪಾರ ನಡುವೆ ಒಂದು ಜಂಟಿ ಸಭೆಯನ್ನು ನಡೆಸಿ ತಿರ್ಮಾನ ತೆಗೆದುಕೋಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದೆಂದು ಸಮಿತಿಯೂ ತಿರ್ಮಾನಿಸಲಾಯಿತು.
3) ತರಕಾರಿ ಮಾರುಕಟ್ಟೆಗೆ ಪ್ರತ್ಯೇಕ ಸ್ಥಳ ಮೂಲ ಭೂತ ಸೌಕರ್ಯ ಕಲ್ಪಿಸಬೇಕು.
4) ಹಣ್ಣು ಎಗ್ ರೈಸ್ ಕಬ್ಬಿನ ಹಾಲು ಬಟ್ಟೆ ವ್ಯಾಪಾರ ಚಪ್ಪಲಿ,ಎಲೆ ಅಡಿಕೆ, ಪಾನಿಪುರಿ ಮಾರುವ ಎಲ್ಲಾ ವ್ಯಾಪಾರಸ್ತರಿಗೆ ಬೀದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು.
ವರದಿ:ಚನ್ನು. ಎಸ್.