ಗಜೇಂದ್ರಗಡ : ಸ್ಫೂರ್ತಿದಾಯಕವಾದ ಬಸಮ್ಮತಾಯಿ ಪಾಟೀಲ್ ಪುಣ್ಯಸ್ಮರಣೆ ಕಾರ್ಯಕ್ರಮ.
ಅಂತಾರಾಷ್ಟ್ರೀಯ ದಿವ್ಯಾಂಗ ಚೆಸ್ ಆಟಗಾರ್ತಿ ಅಂಬಿಕಾ ಮಸಗಿಗೆ ಸನ್ಮಾನ.

ಗಜೇಂದ್ರಗಡ : ಸ್ಫೂರ್ತಿದಾಯಕವಾದ ಬಸಮ್ಮತಾಯಿ ಪಾಟೀಲ್ ಪುಣ್ಯಸ್ಮರಣೆ ಕಾರ್ಯಕ್ರಮ.
ಅಂತಾರಾಷ್ಟ್ರೀಯ ದಿವ್ಯಾಂಗ ಚೆಸ್ ಆಟಗಾರ್ತಿ ಅಂಬಿಕಾ ಮಸಗಿಗೆ ಸನ್ಮಾನ.
ಗಜೇಂದ್ರಗಡ : ಸತ್ಯ ಮಿಥ್ಯ ( ಜುಲೈ -31)
ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅತ್ಯಮೂಲ್ಯ. ಒಂದು ಮಗು ಜೀವನದಲ್ಲಿ ಸರ್ವ ಶ್ರೇಷ್ಠ ಮಟ್ಟ ತಲುಪಲು ತಾಯಿ ಮಾರ್ಗದರ್ಶನ ಜೊತೆಗೆ ಮನೆಯ ವಾತಾವರಣ ಸಹಕಾರಿಯಾಗಿದೆ ಎಂದು ಧಾರವಾಡದ ಪ್ರಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ನುಡಿದರು.
ಅವರು ಜುಲೈ 30 ರ ಮಂಗಳವಾರ ಗಜೇಂದ್ರಗಡದ ಜಿ. ಕೆ. ಬಂಡಿ ಗಾರ್ಡನ್ ನಲ್ಲಿ ನಡೆದ ರೋಣ ಶಾಸಕ ಜಿ.ಎಸ್.ಪಾಟೀಲರ ತಾಯಿ.ಪೂಜ್ಯ ಮಾತೋಶ್ರೀ ಬಸಮ್ಮನವರು ಸಂಗನಗೌಡ ಪಾಟೀಲ ಇವರ ಇಪ್ಪತ್ತನೇಯ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತ. ಮಕ್ಕಳು ಗರಿಷ್ಠ ಅಂಕಗಳಿಸುವಲ್ಲಿ ವಿಫಲರಾದರೆ ತಾಯಿಯರು ಅವರ ಮೇಲೆ ರೇಗಾಡ ಬೇಡಿ. ಮಗು ಅಭ್ಯಾಸ ಮಾಡುವ ಪದ್ಧತಿಯಲ್ಲಿ ವಿಫಲವಾದ ಬಗೆಯನ್ನು ಕಂಡುಹಿಡಿದು ಮಾರ್ಗದರ್ಶನ ನೀಡಿದಾಗ ಮತ್ತೆ ಮಗು ಉತ್ತಮ ಅಂಕ ಗಳಿಸಬವುದು.ಮಕ್ಕಳು 90% ಅಂಕ ಗಳಿಸಿದರು ಇನ್ನೊಂದಿಷ್ಟು ಸ್ಕೋರ್ ಮಾಡಬೇಕಿತ್ತು ಎನ್ನುವ ಪಾಲಕರು ಹೆಚ್ಚಾಗುತ್ತಿದ್ದರೆ. ಈ ಮನೋಭಾವವೇ ಮಗುವಿನ ಮಾನಸಿಕತೆಗೆ ಮಾರಕವಾಗಿ ಜಾಣ ಮಕ್ಕಳೇ ಮಾನಸಿಕ ರೋಗಿಗಳಾಗುತ್ತಿದ್ದಾರೆ.ತಾಯಂದಿರು ಮೊಬೈಲ್ ಬಳಕೆ ಕಡಿಮೆ ಮಾಡಬೇಕು.ಅವಿಭಕ್ತ ಕುಟುಂಬಗಳು ಮಾಯವಾಗಿ ಕೇವಲ ಗಂಡ ಹೆಂಡತಿ ಒಂದು ಮಗು ಈ ರೀತಿಯ ಕುಟುಂಬಗಳು ಹೆಚ್ಚಾಗಿರುವುದರಿಂದ ಬಹುತೇಕ ಮಕ್ಕಳು ತಾಯಿಯನ್ನೆ ಅನುಕರಣೆ ಮಾಡುತ್ತಿದ್ದಾರೆ. ಒಳ್ಳೆಯ ಆಹಾರ, ವಿಹಾರ, ವಿಚಾರಗಳನ್ನು ಮೈಗೂಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ದಿವ್ಯ ಸಾಧನೆ ಮಾಡಿದ ಅಂಬಿಕಾ ಮಸಗಿಗೆ ಸನ್ಮಾನ : ಹುಲ್ಲುರಿನ ಬಾಲೆ ಟರ್ಕಿಯಲ್ಲಿ ಜರುಗಿದ ಒಲಂಪಿಕ್ ಪಂದ್ಯಾವಳಿಯಲ್ಲಿ ಪ್ರಾಚೀನ ಭಾರತದ ಶ್ರೇಷ್ಠ ಆಟವಾಗಿರುವ ಚದುರಂಗ( ಚೆಸ್ ) ಆಟದಲ್ಲಿ ಭಾರತವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದು ಭಾರತದ ಕೀರ್ತಿ ಎತ್ತಿಹಿಡಿದ ಅಂಬಿಕಾ ಮಸಗಿ ಬಾಲ್ಯದಿಂದಲೇ ಮಾತನಾಡಲು ಬಾರದೆ ಇದ್ದರು ಬಿ.ಇ ಪದವೀಧರೆ ಜೊತೆಗೆ ಡಿಪ್ಲೋಮ ಕಂಪ್ಯೂಟರ ಸೈನ್ಸ ಶಿಕ್ಷಣ ಪಡೆಯುವ ಮೂಲಕ ಸಾಧನೆಗೆ ಅಂಗವೈಖಲ್ಯ ಮೆಟ್ಟಿನಿಂತ ಮಹಿಳೆ ಆದ್ದರಿಂದ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ರೋಣ ತಾಲೂಕಾ ಹುಲ್ಲೂರ ಗ್ರಾಮದವರಾದ( ಪ್ರಸ್ತುತ ಧಾರವಾಡದಲ್ಲಿ ನೆಲೆಸಿರುವ )ನಾಗಪ್ಪ ಯಲ್ಲಪ್ಪ ಮಸಗಿ ಜಯಶ್ರೀ ಮಸಗಿಯವರ ಸುಪುತ್ರಿಯಾದ ಅಂಬಿಕಾ. ಇದೆ ತಿಂಗಳಲ್ಲಿ ನಡೆದ ಆಲ್ ಇಂಡಿಯಾ ಸ್ಪೋರ್ಟ್ಸ್ ಕೌನ್ಸಿಯಲ್ ಅಡಿಯಲ್ಲಿ ಜರುಗಿದ ಡಿಕಾಫ್ ಚೆಸ್ ಟೀಮನ ಮಹಿಳಾ ವಿಭಾಗದಲ್ಲಿ ಆಯ್ಕೆಯಾಗಿ. ಅಕ್ಟೋಬರ್ ತಿಂಗಳು ಇರಾನ್ ನಲ್ಲಿ ನಡೆಯುವ ಎಶಿಯನ್ ಒಲಂಪಿಕ್ ನಲ್ಲಿ ಚೆಸ್ ಆಟದ ಮೂಲಕ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇದೆ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ, ಆರಕ್ಷಕ, ಪೌರಸೇವೆ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರಿಗೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಡಾ.ಅನುಪಮಾ ಪಾಂಡುರಂಗಿ. ಬಸಮ್ಮ ತಾಯಿ ತಮ್ಮ ಮಕ್ಕಳನ್ನು ಬೆಳೆಸಿದ ಪರಿ ಸಮಾಜಕ್ಕೆ ಮಾದರಿ. ಒಟ್ಟು 8 ಮಕ್ಕಳ ತಾಯಿಯಾದ ಬಸಮ್ಮನವರ ಮೊದಲ ಮಗ ಆರ್. ಎಸ್. ಪಾಟೀಲ್ ಸಂಸದರಾಗಿ, ಬಿ. ಎಸ್. ಪಾಟೀಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ಕರ್ನಾಟಕ ರಾಜ್ಯದ ಅತ್ಯುನ್ಯತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ,ವಿ. ಎಸ್ ಪಾಟೀಲ್ ರಾಯಚೂರಿನಲ್ಲಿ ವೈದ್ಯರಾಗಿ ಜನಸೇವೆ ಸಲ್ಲಿಸುತ್ತಿದ್ದಾರೆ,ಪ್ರಸ್ತುತ ಸಂದರ್ಭದಲ್ಲಿ ರೋಣ ಮತಕ್ಷೇತ್ರದ ಶಾಸಕರಾದ ಜಿ. ಎಸ್. ಪಾಟೀಲರು ತಮ್ಮ ಜನಸೇವೆ ಮೂಲಕ ಹೆಸರುವಾಸಿಯಾದವರು. ಕೆ ಸಿ ಸಿ ಬ್ಯಾಂಕನ ಅಧ್ಯಕ್ಷರಾಗಿ ಮತ್ತು ಬೀಜ ನಿಗಮದ ನಿರ್ದೇಶಕರಾಗಿ 6 ಸಾರಿ ಆಯ್ಕೆಯಾದ ಐ. ಎಸ್. ಪಾಟೀಲರು ಬಸಮ್ಮ ತಾಯಿಯ ಮಕ್ಕಳೇ ಎಂಬುವದು ಹೆಮ್ಮೆಯ ವಿಷಯ. ಬಸಮ್ಮ ತಾಯಿಯವರ ಮಕ್ಕಳೆಲ್ಲರೂ ಸಾರ್ವಜನಿಕ ಸೇವೆಯಲ್ಲಿ ತಮ್ಮ ಬದುಕ ಕಂಡವರು. ಆದ್ದರಿಂದ ಬಸಮ್ಮ ತಾಯಿ ನಮ್ಮ ನಿಮ್ಮೆಲ್ಲರಿಗೂ ಮಾದರಿ ಎಂದರು. ಪ್ರತಿ ವರ್ಷ 5 ದಿನ ಬಸಮ್ಮ ತಾಯಿ ಸ್ಮರಣೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಅನ್ನಪೂರ್ಣ.ಜಿ. ಪಾಟೀಲ್, ವಿದ್ಯಾ ಬಂಡಿ, ಮಂಜುಳಾ ರೇವಡಿ, ಪ್ರಿಯಾ ಘೋರ್ಪಡೆ, ಡಾ.ಪಾರ್ವತಿಬಾಯಿ ಭಾಂಡಗೆ, ಸಹನಾ ಮತ್ತಿಕಟ್ಟಿ,ಮಲ್ಲಮ್ಮ ಬಿಚ್ಚುರ, ಮಂಜುಳಾ ಹುಲ್ಲಣ್ಣವರ, ಶರಣಮ್ಮ ಮಠದ, ಡಾ.ರೇಷ್ಮಾ ಕೋಲಕಾರ, ಸವಿತಾ ಬಿದರಳ್ಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.