ಗಜೇಂದ್ರಗಡ : ಶ್ರೀ ಅನ್ನದಾನೇಶ್ವರ ಐಟಿಐ ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ.
Gajendragarh: Self-motivated blood donation camp at Sri Annadaneshwar ITI.
ಗಜೇಂದ್ರಗಡ : ಶ್ರೀ ಅನ್ನದಾನೇಶ್ವರ ಐಟಿಐ ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ.
ಗಜೇಂದ್ರಗಡ : ಸತ್ಯಮಿಥ್ಯ (ನ -15)
ನಗರದ ಶ್ರೀ ಅನ್ನದಾನೇಶ್ವರ ಐಟಿಐ ಕಾಲೇಜಿನಲ್ಲಿ ಇಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಗಜೇಂದ್ರಗಡ ಶ್ರೀ ಅನ್ನದಾನೇಶ್ವರ ಐಟಿಐ ಕಾಲೇಜು, ಗದಗ ಜಿಮ್ಸ್ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಗಜೇಂದ್ರಗಡ ಇವರ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಶ್ವೇತಾ ಪಾಟೀಲ್. ರಕ್ತದಾನ ಶ್ರೇಷ್ಠವಾದದ್ದು ರಕ್ತವನ್ನು ಕೊಡುವುದರಿಂದ ನಿಮ್ಮ ದೇಹಕ್ಕೆ ಹೊಸ ರಕ್ತ ಉತ್ಪಾದನೆಯೊಂದಿಗೆ ನವ ಚೈತನ್ಯ ಮೂಡಲಿದೆ.ನೀವೂ ನೀಡುವ ಒಂದು ಯುನಿಟ್ ರಕ್ತ 4 ಜನರ ಜೀವ ಉಳಿಸುವ ಶಕ್ತಿ ಹೊಂದಿದೆ ಆದ್ದರಿಂದ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಕಾರ್ಯದಲ್ಲಿ ಸಾರ್ಥಕತೆ ಮೆರೆಯಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಅನ್ನದಾನೇಶ್ವರ ಐಟಿಐ ಕಾಲೇಜು ಪ್ರಾಚಾರ್ಯರು ಮತ್ತು ಕ.ಸಾ. ಪ ತಾಲೂಕಾ ಅಧ್ಯಕ್ಷರಾದ ಎ. ಪಿ. ಗಾಣಿಗೇರ ಮಾತನಾಡಿ. ರಕ್ತ ವೆಂಬುವದು ಮನುಷ್ಯನ ದೇಹದಲ್ಲಿ ಮಾತ್ರ ಉತ್ಪಾದನೆಗೊಳ್ಳುವ ಜೀವರಕ್ಷಕ. ಇಂದಿನ ಯುವ ಶಕ್ತಿ ರಕ್ತದಾನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅಲ್ಲದೇ ಜನರಲ್ಲಿ ರಕ್ತದಾನದ ಮಹತ್ವ ತಿಳಿಹೇಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಎಸ್. ಬಿ. ಪಾಟೀಲ್, ಸೂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಶರಣು ಗಾಣಿಗೇರ,ಎಚ್ ಡಿ ಎಫ್ ಸಿ ಬ್ಯಾಂಕ ಮ್ಯಾನೇಜರ್ ಕುಬೇರ ಆಮ್ರದ, ಡಾ. ಅಲೋಕ್,ಪವನ್ ರಂಗ್ರೇಜಿ, ಅಶೋಕ ಕೋಳಿವಾಡ,ಬಿ. ಬಿ. ಸೂಡಿ, ವಿ. ಎಮ್. ಸಾಲಿಮಠ,ಎಸ್.ಬಿ. ಬಿಜಕಲ್, ವಿ. ಎನ್. ಗಂಜೀಗೌಡ್ರ,ಶ್ರೀಮತಿ ಎಸ್. ಎಸ್. ಪೂಜಾರ, ಎಮ್ಎಸ್. ಹೊಂಬಳ, ಎಮ್. ಎಸ್. ಶಟ್ಟರ, ಕೆ. ಎಫ್. ತೋಟದ, ಆರ್. ಜಿ. ವದೇಗೋಳ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.