ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಅಭಿನಂದಿಸಿದ ಗವಿಶ್ರೀ.
ಶ್ರೀ ಗವಿಸಿದ್ದೇಶ್ವರ ಶಾಲಾ ವಿದ್ಯಾರ್ಥಿಗಳು 2೦24-25 ನೇ ಸಾಲಿನ ಯಲಬುರ್ಗಾ ಮತ್ತು ಕುಕನೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ:-ಶ್ರೀ ಗವಿಸಿದ್ದೇಶ್ವರ ಶ್ರೀಗಳು ಅಭಿನಂದಿಸಿದ್ದಾರೆ.
ಕುಕನೂರು:ಸತ್ಯಮಿಥ್ಯ (ಅ -02).
ಪಟ್ಟಣದ ಶ್ರೀ ಗವಿಸಿದ್ದೇಶ್ವರ ಶಾಲಾ ವಿದ್ಯಾರ್ಥಿಗಳು 2024 -25ನೇ ಸಾಲಿನ ಕ್ರೀಡಾಕೂಟವು ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ನಡೆದವು. ಈ ಕ್ರೀಡಾಕೂಟದಲ್ಲಿ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ , ದ್ವಿತೀಯ, ತೃತಿಯ ಸ್ಥಾನ ಪಡೆದು ಆಯ್ಕೆ ಆಯ್ಕೆಯಾಗಿರುತ್ತಾರೆ.
* ಚೇತನ ಹಳ್ಳೂರ ಗುಂಡು ಎಸೆತ ಪ್ರಥಮ,
* ಚನ್ನಬಸವಯ್ಯ 400 ಮೀ ಹರ್ಡಲ್ಸ ತೃತೀಯ,
* ಶೈಲಾ ಮನ್ನಾಪೂರ ಭಲ್ಲೆ ಎಸೆತ ಪ್ರಥಮ.
* ಶ್ರೀದೇವಿ ಆರಬೇರಳಿನ ಭಲ್ಲೆ ಎಸೆತ ದ್ವಿತೀಯ,
* ಅಮೃತಾ ನಾಗಣ್ಣವರ ಉದ್ದ ಜಿಗಿತ ತೃತೀಯ,
* ಅಮೃತಾ ನಾಗಣ್ಣವರ ತ್ರವಿದ ಜಿಗಿತ ತೃತೀಯ ,
* ವೈಶಾಲಿ ನಾಯಕ ಸರಪಳಿ ಗುಂಡು ಎಸೆತ ಪ್ರಥಮ,
* ಪೂರ್ಣಿಮಾ ಅಡಿನ ಸರಪಳಿ ಗುಂಡು ಎಸೆತ ದ್ವಿತೀಯ,
* ಬಾಲಕಿಯರ ಥ್ರೋ ಬಾಲ್ ಪ್ರಥಮ,
ವಿದ್ಯಾರ್ಥಿಗಳ ಈ ಸಾಧನೆಗೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಶ್ರೀಗಳು ಅಭಿನಂದಿಸಿದ್ದಾರೆ ಮತ್ತು ಶ್ರೀ ಗವಿಸಿದ್ದೇಶ್ವರ ಶಾಲಾ ಆಡಳಿತ ಮಂಡಳಿಯವರು, ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ವರದಿ : ಚೆನ್ನಯ್ಯ ಹಿರೇಮಠ.