ಸಮಾಜದ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷ ಹಡಪದ ಅಪ್ಪಣ್ಣ – ವೈ.ಎಚ್.ದ್ರಾಕ್ಷಿ
ಜಮಖಂಡಿ: ಸತ್ಯಮಿಥ್ಯ ( ಜುಲೈ -21).
ಹಡಪದ ಅಪ್ಪಣ್ಣ 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ, ಸಮಾಜದ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷ’ ಎಂದು ಉಪತಹಸೀಲ್ದಾರ್ ವೈ.ಎಚ್.ದ್ರಾಕ್ಷಿ ಹೇಳಿದರು.
ತಾಲೂಕಿನ ಸಾವಳಗಿ ನಗರದ ನಾಡ ಕಛೇರಿಯಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಹಡಪದ ಅಪ್ಪಣ್ಣ ಜಾತಿ, ಧರ್ಮ, ವರ್ಣ, ವರ್ಗರಹಿತ ಸಮಾಜ ನಿರ್ಮಾಣಕ್ಕೆ ಮುಂದಾದ ಮಹಾನ್ ವ್ಯಕ್ತಿ. ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕೆಲ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಶ್ರಮಿಸಿದವರು. ತಮ್ಮ ವಚನಗಳ ಮೂಲಕವೂ ಉತ್ತಮ ಸಮಾಜ ನಿರ್ಮಾಣ ಮಾಡಿದ ಅವರು ಸದಾ ಸ್ಮರಣೀಯರು’ ಎಂದು ಹೇಳಿದರು.
ನಂತರ ಮಲ್ಲಿಕಾರ್ಜುನ ಹಡಪದ ಮಾತನಾಡಿ ಅಪ್ಪಣ್ಣ ಅವರು ಗೃಹಸ್ಥಾಶ್ರಮದಲ್ಲಿ ಇದ್ದುಕೊಂಡು ಮುಕ್ತಿ ಹೊಂದಿದ ದೈವ ಪುರುಷ. ಇಂತಹ ಶರಣರ ತತ್ವ ಸಿದ್ಧಾಂತಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ’ ಎಂದರು.
ಇದೇ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಈಶ್ವರ ಹೊಸಲಕರ, ಮಲ್ಲಿಕಾರ್ಜುನ ಹಡಪದ, ಸುನೀಲ್ ಪಾಟೋಳ್ಳಿ, ಸುರೇಶ್ ಮಾಳಿ, ಕಿರಣ ನಾವ್ಹಿ, ದರೆಪ್ಪಾ ನಾವ್ಹಿ ಹಾಗೂ ನಾಡ ಕಛೇರಿಯ ಸಿಬ್ಬಂದಿಗಳಾದ ಗಜಾನನ ಅವಟಿ, ಪ್ರಭು ಮಾಳಿ, ಮಾಹಾಂತೇಶ ಐಹೋಳ್ಳೆ, ಗಂಗಪ್ಪ ಶಿಂಧೆ ಸೇರಿದಂತೆ ಅನೇಕ ಉಪಸ್ಥಿತರಿದ್ದರು.
ವರದಿ : ಸಚಿನ್ ಜಾದವ್.