
ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು. ಬಂಡತನ ಬಿಟ್ಟು ಹೊರಬನ್ನಿ – ವಿಜಯೇಂದ್ರ.
ಬೆಂಗಳೂರು- ಸತ್ಯಮಿಥ್ಯ (ಸ – 25)
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕೇಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿನ್ನೆ ಹೈಕೋರ್ಟ್ ನಲ್ಲಿ ಹಿನ್ನೆಲೆಯಾಗಿತ್ತು.ರಾಜ್ಯಪಾಲರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಸರಿಯಾಗಿದೆ ಎಂದಿದ್ದಾರೆ. ಇಂದು ಕೂಡ ಜನಪ್ರತಿನಿದಿನಗಳ ನ್ಯಾಯಾಲಯದಲ್ಲಿ ಕೂಡಾ ಹೈಕೋರ್ಟ್ ತೀರ್ಪನ್ನೇ ಎತ್ತಿ ಹಿಡಿದಿದೆ.
ಇನ್ನೇನು ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲೆ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈ ನಡುವೆ ನ್ಯಾಯಮೂರ್ತಿ ಸಂತೋಷ ಹೆಗ್ಡೆ ” ಸಿದ್ದರಾಮಯ್ಯ ಇಂತಹ ಗಂಭೀರ ಆರೋಪ ಇರುವಾಗ ರಾಜೀನಾಮೆ ಕೊಡಬೇಕು. ಕೊಡೋದು ಬಿಡೋದು ಅವರಿಗೆ ಬಿಟ್ಟಿದ್ದು. ಮೊದಲು ನಾನೇನು ಮಾಡಿಲ್ಲ ಎಂದಿದ್ದರು ಈಗ ಕೋರ್ಟ್ ತನಿಖೆಗೆ ಆದೇಶ ಮಾಡಿದಾಗ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ” ಎಂದಿದ್ದಾರೆ.
ಹಿಂದೆ ಯಡಿಯೂರಪ್ಪ ಮೇಲೆ ಆರೋಪ ಬಂದಾಗ ಇದೆ ಸಿದ್ದರಾಮಯ್ಯ ” ಯಡಿಯೂರಪ್ಪ ವಿರುದ್ಧ ಎಫ್ ಐ ಆರ್ ಆಗಿದೆ. ಅವರನ್ನು ತನಿಖೆ ಮಾಡುವ ಸಂಸ್ಥೆ ಲೋಕಾಯುಕ್ತ. ಲೋಕಾಯುಕ್ತ ಸೇರಿದಂತೆ ಅನೇಕ ತನಿಖಾ ಸಂಸ್ಥೆಗಳು ಸಿಎಂ ಪ್ರಭಾವಕ್ಕೆ ಒಳಗಾಗಿರುತ್ತವೆ. ಆದ್ದರಿಂದ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದಿದ್ದರು. ಇಂದು ಆ ಪರಿಸ್ಥಿತಿಗೆ ಸಿದ್ದರಾಮಯ್ಯ ತಲುಪಿದ್ದಾರೆ.
ಕಮಲ ಪಡೆ ಕೋರ್ಟ್ ಆದೇಶದಿಂದ ಖುಷ್ ಆಗಿದ್ದು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡುತ್ತ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಆದರೆ ರಾಜೀನಾಮೆ ನೀಡುವುದಿಲ್ಲ ಎಂಬ ಬಂಡತನ ಹೇಳಿಕೆ ಕೈ ಬಿಡಬೇಕು. ನೈತಿಕತೆ ಇದ್ದರೆ ಕೂಡಲೇ ಸಿಎಂ ರಾಜೀನಾಮೆ ನೀಡಬೇಕು ಎಂದರು.
ಬಿಜೆಪಿ ಮುಖಂಡ ಸಿ.ಟಿ. ರವಿ ಮಾತನಾಡುತ್ತ. ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ತನಿಖೆಗೆ ಒಳಪಡಬೇಕು. ಕರ್ನಾಟಕ ಕಾಂಗ್ರೆಸ್ ರಾಜಕೀಯ ವೆಂಟಿಲೀಟರ್ ಮೇಲೆ ನಿಂತಿದೆ. ಆಕ್ಸಿಜನ್ ಮೇಲೆ ನಿಂತಿದೆ ಆಕ್ಸಿಜನ ಸಪ್ಲೆ ನಿಂತ ಮೇಲೆ ಬೀಳುತ್ತೆ ಎನ್ನುವ ರೀತಿಯಲ್ಲಿ ಮಾತನಾಡುತ್ತ. ಸರ್ಕಾರ ಐಸಿಯು ನಲ್ಲಿದೆ ಎಂದಿದ್ದಾರೆ.
ಮುಖ್ಯಮಂತ್ರಿ ರಾಜೀನಾಮೆ ಕೊಡದೆ ಇದ್ದರೆ. ಬಿಜೆಪಿ ನಾಯಕರು ನಾಳೆಯಿಂದ ಇನ್ನಷ್ಟು ಹೋರಾಟ ಚುರುಕುಗೊಳಿಸುವ ತಯಾರಿ ನಡೆಸಿದೆ.
ಈ ಪ್ರಕರಣದಿಂದ ಅರ್ಕಾವತಿ, ರೀಡೂ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಜಾಣತನದಿಂದ ತಪ್ಪಿಸಿಕೊಂಡಿದ್ದ ಸಿದ್ದರಾಮಯ್ಯ. ಮುಡಾ ಪ್ರಕರಣದಲ್ಲಿ ವಿರೋಧ ಪಕ್ಷದ ನಾಯಕರ ಮೇಲೆ ಅನೇಕ ಪ್ರಕರಣಗಳನ್ನು ಮರಳಿ ತನಿಖೆಗೆ ಒಳಪಡಿಸುವ ಮತ್ತು ಇದ್ದ ಕೇಸುಗಳಿಗೆ ತನಿಖೆ ತೀವ್ರಗೊಳಿಸುವ ಮೂಲಕ ತಂತ್ರ ಹುಡಿದರು ಅದು ಪರಿಣಾಮ ಬಿರಲಿಲ್ಲ. ಆದರೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ತಮ್ಮ ಕುಟುಂಬದವರಿಗೆ ಲಾಭ ಮಾಡುವ ಎಲ್ಲ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬಂದಿದ್ದು. ಕಂಡವರ ಮಾತು ಕೇಳಿ ಕೆಟ್ಟ ಸಿದ್ದರಾಮಯ್ಯ ನಾಲ್ಕು ದಶಕದ ತಮ್ಮ ರಾಜಕೀಯ ಇತಿಹಾಸಕ್ಕೆ ಮಸಿ ಬಳೆದುಕೊಂಡಂತಾಗಿದೆ ಎಂಬುವದು ರಾಜಕೀಯ ಚಿಂತಕರ ಲೆಕ್ಕಾಚಾರ.
ವರದಿ : ಚನ್ನು. ಎಸ್.