ಬಡಿಗೇರ ಅಭಿವೃದ್ಧಿ ಸಂಘದಿಂದ ಜಕಣಾಚಾರಿ ಸಂಸ್ಕರಣಾ ದಿನ ಆಚರಣೆ.
ಗಜೇಂದ್ರಗಡ: ಸತ್ಯಮಿಥ್ಯ (ಜ-01).
ನಗರದ ಬಡಿಗೇರರ ಅಭಿವೃದ್ಧಿ ಸಂಘ ( ರಿ)ಗಜೇಂದ್ರಗಡ ವತಿಯಿಂದ ಇಂದು ಜಕಣಾಚಾರಿ ಸಂಸ್ಕರಣಾ ದಿನಾಚರಣೆಯನ್ನು ಆಚರಿಸಲಾಯಿತು.
ಗಜೇಂದ್ರಗಡದ ಬಡಿಗೇರ ಅಭಿವೃದ್ಧಿ ಸಂಘದ ಕಛೇರಿಯಲ್ಲಿ ವಿಶ್ವಕರ್ಮ ಎಂಟರ್ಪ್ರೈಸ್ ಹಾರ್ಡವೇರ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಮೌನೇಶ ಕಮ್ಮಾರ ಮಾತನಾಡಿ.ಅಮರಶಿಲ್ಪಿ ಜಕಣಾಚಾರಿಯವರು ಈ ನಾಡಿನ ಶ್ರೇಷ್ಠ ಶಿಲ್ಪಿಗಳಲ್ಲಿ ಮೊದಲಿಗರು ಎಂದರೆ ತಪ್ಪಾಗಲಾರದು. ಅವರು ನಿರ್ಮಾಣ ಮಾಡಿದ ಅನೇಕ ದೇವಾಲಯಗಳು ಇಂದಿಗೂ ಬೆರಗು ಹುಟ್ಟಿಸುತ್ತವೆ. ಅವರ ಕೆತ್ತನೆಯನ್ನು ವಿದೇಶಿಗರು ವೀಕ್ಷಣೆ ಮಾಡಲೆಂದೆ ಬರುವುದು ನಮ್ಮ ದೇಶದ ಹೆಮ್ಮೆ. ಇಂತಹ ಮಹಾಪುರುಷರನ್ನು ನಮ್ಮನ್ನಾಳುವ ಸರ್ಕಾರಗಳು ಅವರಿಗೆ ನೀಡಬೇಕಾದ ಗೌರವ ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹಮ್ಮದ ನಾಲಬಂದ, ಕಾರ್ಯದರ್ಶಿ ಶ್ರೀನಿವಾಸ ಕಮ್ಮಾರ, ಖಜಂಚಿ ವಿರುಪಾಕ್ಷಪ್ಪ ಕಮ್ಮಾರ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಬಡಿಗೇರ, ಪರಶುರಾಮ ಕಮ್ಮಾರ, ದೇವಪ್ಪ ಬಡಿಗೇರ, ಶೇಖಪ್ಪ ಕಮ್ಮಾರ, ಬಿಸರಹಳ್ಳಿ ಮಂಜು, ಮಂಜು ಪತ್ತಾರ ಫಿರೋಜಿರಾವ್ ಅರಗಂಜಿ, ಪರಶುರಾಮ ಹೊಸಮನಿ, ಪರಶುರಾಮ ಕಮ್ಮಾರ, ಕಾಮನೂರು ಮಲ್ಲೇಶ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.