ಕೊಪ್ಪಳ : ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಆಯ್ಕೆ.
ಜಿಲ್ಲಾ ಮತ್ತು ಕುಕನೂರು ಯಲಬುರ್ಗಾ ತಾಲೂಕುಗಳ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೇ
ಕೊಪ್ಪಳ: ಸತ್ಯಮಿಥ್ಯ (ಜುಲೈ -22).
ಕರ್ನಾಟಕ ರಕ್ಷಣಾ ವೇದಿಕೆಯ ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮವನ್ನು ಯಲಬುರ್ಗಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಕೊಪ್ಪಳ ಜಿಲ್ಲಾ ಕ ರ ವೇ ಅಧ್ಯಕ್ಷರಾದ ಬಸವರಾಜ ಹಳ್ಳಿ ಪದಾಧಿಕಾರಿಗಳ ಆಯ್ಕೆಯ ನೇತೃತ್ವವನ್ನುವಹಿಸಿ ಮಾತನಾಡಿದರು. ನಮ್ಮ ಸಂಘಟನೆ ಕನ್ನಡ ನಾಡು – ನುಡಿ ರಕ್ಷಣೆ, ಕನ್ನಡ ಸಂಸ್ಕೃತಿ ಬೆಳವಣಿಗೆಗೆ ಸದಾ ಸಿದ್ದ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕ ( ಸ್ವಾಭಿಮಾನಿ ಬಣ )ಜಿಲ್ಲಾ ಉಪಾಧ್ಯಕ್ಷರಾಗಿ ವೀರೇಶ್ ನೆರೇಗಲ್, ಜಿಲ್ಲಾ ಕಾರ್ಯದರ್ಶಿ ಶಿವರಾಜ್ ಕಾರ್ಬಾರಿ,ಯಲಬುರ್ಗಾ ತಾಲೂಕು ಅಧ್ಯಕ್ಷರಾಗಿ ರುದ್ರಪ್ಪ, ಕುಕುನೂರು ತಾಲೂಕ ಅಧ್ಯಕ್ಷರನ್ನಾಗಿ ಮರಿಯಪ್ಪ ಕನಕಗಿರಿ, ಯಲಬುರ್ಗಾ ಯುವ ಘಟಕದ ಅಧ್ಯಕ್ಷರನ್ನಾಗಿ ಮಂಜುನಾಥ್ ತಳವಾರ, ಕುಕನೂರು ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಶರಣು ಕಾಳಿ, ತಾಲೂಕ ಉಪಾಧ್ಯಕ್ಷರನ್ನಾಗಿ ಶಿವಾನಂದ್ ಹವಾಲ್ದಾರ್,
ಸದಸ್ಯರುಗಳು ಹನುಮಂತ ಸಣ್ಣಮನಿ, ರಮೇಶ ದೊಡ್ಡಮನಿ, ಅಂಬರೀಶ ಗೌಡ್ರು, ಸುಖಮನಿ ನಾಯಕ್, ಬಸವರಾಜ ಬಳೆಗಾರ, ಅರ್ಜುನ ಪೂಜಾರ, ಬಸವರಾಜ ಹುಲಿ ನೇಮಕ ಮಾಡಲಾಯಿತು.
ವರದಿ : ಚನ್ನಯ್ಯ ಹಿರೇಮಠ