ಕೊಪ್ಪಳ : ವೈಭವದಿಂದ ಜರುಗಿದ ಬಿನ್ನಾಳ ಬಸವೇಶ್ವರ ಜಾತ್ರೆ.
ಕೊಪ್ಪಳ : ಸತ್ಯಮಿಥ್ಯ (ಅಗಸ್ಟ್ -27).
12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಶ್ರಮಿಸಿದರು ಆದರೆ ಇವತ್ತಿನ ದಿವಸ ಬಿನ್ನಾಳ ಗ್ರಾಮದಲ್ಲಿ ಅನೂನ್ಯತೆಯಿಂದ ಜಾತ್ರೆ ನೆರವೇರಲು ಸರ್ವರೂ ಸಮಾನತೆಯನ್ನು ಅನುಕರಣೆ ಮಾಡಿ ಬಸವಣ್ಣವರ ಕನಸು ನನಸಾಗುವಂತೆ ಮಾಡಿದ್ದಾರೆ ಎಂದು ಸಂಸದ ರಾಜಶೇಖರ್ ಹಿಟ್ನಾಳ ನುಡಿದರು.
ಅವರು ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ಬಿನ್ನಾಳ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮಹಾ ರಥೋತ್ಸವಕ್ಕೆ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು , ಬಸವ ಪ್ರಭು ಮಹಾಸ್ವಾಮಿಗಳು, ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮತ್ತು ಸಿದ್ದಲಿಂಗಯ್ಯ ಶಿವಸಂಗಯ್ಯ ಹಿರೇಮಠ ಪೂಜ್ಯರಿಂದ ಮತ್ತು ಲೋಕಸಭಾ ಸದಸ್ಯರಾದ ರಾಜಶೇಖರ್ ಹಿಟ್ನಾಳ ಅವರಿಂದ ಚಾಲನೆಯನ್ನು ನೀಡಲಾಯಿತು.
ಇದೆ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಪಂಚಮಸಾಲಿ ಗುರು ಪೀಠಾಧ್ಯಕ್ಷರು, ಕೂಡಲಸಂಗಮ. ಮತ್ತು ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಇನ್ನು ಅನೇಕ ಹರ ಗುರು ಚರಮೂರ್ತಿಗಳು ಜಾತ್ರಾ ಮಹೋತ್ಸವ ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಬಿನ್ನಾಳಬಸವೇಶ್ವರ ಸೇವಾ ಸಮಿತಿಯ ಮತ್ತು ಪ್ರಸಾದ ಸೇವಾ ಸಮಿತಿಯವರ ಕಾರ್ಯ ಅಮೋಘವಾಗಿದ್ದು ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ ನೆರವೇರಲು ಗ್ರಾಮದ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.
ಜಾತ್ರಾ ಮಹೋತ್ಸವ ಅಂಗವಾಗಿ 25 -8 -2024 ರಿಂದ 27 -8 -2024 ಮೂರು ದಿನಗಳ ಕಾಲ ಧರ್ಮ ಧ್ವಜಾರೋಹಣ ಹಾಗೂ ಕಳಸಾರೋಹಣ, ಧರ್ಮಚಿಂತನಾ ಸಭೆ, ಎತ್ತಿನ ಮೆರವಣಿಗೆ, ಮತ್ತು ಲಘು ರಥೋತ್ಸವ ಹಾಗೂ ಬಿನ್ನಾಳ ಗ್ರಾಮದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿದವು
ಈ ಸಂದರ್ಭದಲ್ಲಿ ಬಿನ್ನಾಳ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಸಮಸ್ತ ಮಂಡಳಿ , ಹಾಗೂ ಸಕಲ ಸದ್ಭಕ್ತರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.