ತಾಲೂಕುವಿಡಿಯೋಗಳು

ಕಲಿಕೆಗೆ ಸಹಕಾರಿಯಾಗುತ್ತಿರುವ ಕಲಿಕೆ ಟಾಟಾ ಟ್ರಸ್ಟ್ – ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮದಲ್ಲಿ ಆಕರ್ಷಕ ಉಡುಗೆ ತೊಟ್ಟ ಮಕ್ಕಳು.

ಶಿಕ್ಷಣದ ಮಹತ್ವ ಸಾರಿದ ಜಾಥಾ.

Share News

ಕಲಿಕೆಗೆ ಸಹಕಾರಿಯಾಗುತ್ತಿರುವ ಕಲಿಕೆ ಟಾಟಾ ಟ್ರಸ್ಟ್ – ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮದಲ್ಲಿ ಆಕರ್ಷಕ ಉಡುಗೆ ತೊಟ್ಟ ಮಕ್ಕಳು.

ಕುಷ್ಟಗಿ : ಸತ್ಯ ಮಿಥ್ಯ ( ಜೂ -21).

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಇವರ ಸಹಯೋಗದಲ್ಲಿ ಶಾಲಾ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೆಂಕಟಾಪುರದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು  ಡೊಳ್ಳು ಬಾರಿಸುವ ಮೂಲಕ ಉದ್ಘಾಟನೆ ಮಾಡಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಊರಿನ ಪ್ರಮುಖ ಬೀದಿಗಳಲ್ಲಿ ಶಾಲೆಯ ಕೆಲವು ವಿದ್ಯಾರ್ಥಿನಿಯರು ಭಾರತೀಯ ಸಂಪ್ರದಾಯದಂತೆ ಸೀರೆಯನ್ನು ಧರಿಸಿ ಇನ್ನು ಕೆಲವು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ವಿವಿಧ ಕರುನಾದ ವೇಷಭೂಷಗಳಂತರಿಸಿ ಸಾಗಿದರು ಮತ್ತು ರಾಷ್ಟ್ರೀಯ ನಾಯಕರಗಳಾದ ಮಹಾತ್ಮ ಗಾಂಧಿ ಭಗತ್ ಸಿಂಗ್ ಕಿತ್ತೂರಾಣಿ ಚೆನ್ನಮ್ಮ ಸಾಲ ಮರ ತಿಮ್ಮಕ್ಕ ಹಾಗೂ ಲಂಬಾಣಿ ವೇಷವನ್ನು ಅವರ ಚದ್ಮವೇಷವನ್ನು ಧರಿಸಿ ಶಿಸ್ತಿನಿಂದ ದಾರಿ ಉದ್ದಕ್ಕೂ ಘೋಷಣೆಗಳ ಕೂಗುತ್ತಾ, ಲಂಬಾಣಿ ಮಕ್ಕಳು ನೃತ್ಯ ಮಾಡುತ್ತಾ ಮುಂದೆ ಸಾಗಿದರು ವಿದ್ಯಾರ್ಥಿಗಳ ಕಲಿಕೆ ಸಂಸ್ಥೆ ನೀಡಿರುವ ಕರೆಪತ್ರಗಳನ್ನು ಗ್ರಾಮದ ಜನರಿಗೆ ಹಂಚಿದರು. ಈ ಜಾಥಾದಲ್ಲಿ ಮೂಲಕ ಜನರಿಗೆ ಜಾಗೃತ ಮೂಡಿಸಲಾಯಿತು. ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಪೆನ್ನು ಮತ್ತು ನೋಟ ಬುಕ್ಕನ್ನು ವಿತರಿಸಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು

ಕಲಿಕೆ ಟಾಟಾ ಟ್ರಸ್ಟ್ ನ ಕುಷ್ಟಗಿ ವಲಯದ ಕಾರ್ಯಕ್ರಮ ಸಂಯೋಜಕರಾದ ಶ್ರೀ ಬಸವರಾಜ ನಾಗಣ್ಣವರ ಮಾತನಾಡಿ ಕಲಿಕೆ ಟಾಟಾ ಟ್ರಸ್ಟ್ ಕಾರ್ಯಕ್ರಮದ ಪರಿಚಯ ಮಾಡಿಕೊಳ್ಳುತ್ತಾ ನಮ್ಮ ಸಂವಿಧಾನದಲ್ಲಿ ಇರುವಂತಹ 86ನೇ ತಿದ್ದುಪಡಿಯ ಮೂಲಕ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಶಿಕ್ಷಕರ ಹಾಗೂ ಪೋಷಕರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಈ ದಿನದಂದು ದಾಖಲಾತಿ ಮತ್ತು ಹಾಜರಾತಿ ಕಾರ್ಯಕ್ರಮವನ್ನು ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು ತುಂಬಾ ಸಂತೋಷದ ವಿಷಯ ಇತ್ತೀಚಿನ ದಿನಮಾನಗಳಲ್ಲಿ ಶಿಕ್ಷಣ ಬಹಳ ಅವಶ್ಯಕ ನಮ್ಮ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಸೌಲಭ್ಯಗಳಿವೆ. ಇದರ ಸದ್ಬಳಕೆಯನ್ನು ಗ್ರಾಮದವರು ಬಳಕೆ ಮಾಡಿಕೊಳ್ಳಬೇಕು.ಎಂದು ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಹನುಮಂತ ಗೋಡೆಕಾರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಮುತ್ತಪ್ಪ ನಾಯಕ, ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಗೋಣಿ, ಟಾಟಾ ಟ್ರಸ್ಟನ ಸಂಯೋಜಕರಾದ ಶ್ರೀ ಬಸವರಾಜ ನಾಗಣ್ಣವರ, ಶ್ರೀ ಬಸವರಾಜ ಹಾದಿಮನಿ ಗ್ರಾಮ ಪಂಚಾಯತ್ ಸದಸ್ಯರಾದ ತುಕಾರಾಮ ಕಮತರ, ಠಾಕೂರ್ ನಾಯಕ, ಮತ್ತು SDMC ಸದಸ್ಯರುಗಳಾದ ಗುರುನಗೌಡ ಗೌಡರ, ಸೋಮವ್ವ ಜಾಲಿಹಾಳ, ಲಾಲಪ್ಪ ನಾಯಕ, ವೆಂಕಟೇಶ ಕಮತರ, ಮುದಿಸಂಗಯ್ಯ ಸಾರಂಗಮಠ, ಗೀತಾ, ಮುದಕಪ್ಪ ಗೊಲ್ಲರ, ಮಹಾಲಕ್ಷ್ಮಿ ಗೊಲ್ಲರ, ರೇಣಮ್ಮ, ಶಾಂತವ್ವ, ಶರಣಮ್ಮ, ಮುಖಂಡರಾದ ಶ್ರೀ ನಾಗಪ್ಪ ಗೊಲ್ಲರ, ಯಮನೂರಪ್ಪ ಗೋಣಿ, ಗಂಗಪ್ಪ, ಶಿವಪ್ಪ, ಶಂಕ್ರಪ್ಪ ಲಮಾಣಿ ಮತ್ತು ಶಾಲಾ ಮುಖ್ಯ ಗುರುಗಳಾದ ಶ್ರೀ ಶಂಕರಪ್ಪ ಉಪ್ಪಾರ, ಸಿಬ್ಬಂದಿಯವರಾದ ನಾಗುಸಾ ನಿರಂಜನ್, ಬಸವರಾಜ ಬೇವೂರ, ಶ್ರೀಮತಿ ಶ್ರೀದೇವಿ ,ಮಾಸಪ್ಪ ಕಬ್ಬರಗಿ ಹಾಗೂ ಪ್ರೇರಕಿಯಾದ ಶ್ರೀಮತಿ ಶಶಿಕಲಾ ಕುಂಬಲಾವತಿ ಉಪಸ್ಥಿತರಿದ್ದರು.

ವರದಿ : ಸ್ಯಾಮೂರ್ತಿ .


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!