![](https://satyamityanews.com/wp-content/uploads/2024/07/IMG-20240719-WA0025-780x470.jpg)
ಡೆಂಗ್ಯೂ ಬಗ್ಗೆ ಜಾಗೃತಿ ಇರಲಿ ಭಯ ಬೇಡ – ಡಾ. ಶರಣು ಗಾಣಿಗೇರ.
ಗಜೇಂದ್ರಗಡ – ಸತ್ಯಮಿಥ್ಯ ( ಜುಲೈ -19).
ನಗರದಲ್ಲಿಂದು ಸುಶೃತ ಪ್ಯಾರಾ ಮೆಡಿಕಲ್ ಕಾಲೇಜು ಮತ್ತು ಸಾಯಿದತ್ತ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ಡೆಂಗ್ಯೂ ಜ್ವರ ಜಾಗೃತಿ ಅಭಿಯಾನ ಕೈಕೊಳ್ಳಲಾಯಿತು.
ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಶರಣು ಗಾಣಗೇರ. ಮನೆಯಲ್ಲಿ ನೀರು ಸಂಗ್ರಹಣೆ ಮಾಡುವ ಟ್ಯಾಂಕಗಳನ್ನು ಸ್ವಚ್ಛವಾಗಿಡಿ, ಮನೆಯ ಸುತ್ತಮುತ್ತಲು ಸೊಳ್ಳೆಗಳು ಹೆಚ್ಚಾಗಿದ್ದಾರೆ ಕೀಟನಾಶಕ ಸಿಂಪಡಿಸಿ, ಮಕ್ಕಳಲ್ಲಿ ಪದೇ ಪದೇ ಜ್ವರ ಕಾಡುತ್ತಿದ್ದಾರೆ ವೈದ್ಯರನ್ನು ಸಂಪರ್ಕಿಸಿ, ರೋಗ ನಿರೋದಕ ಶಕ್ತಿಯನ್ನು ವೃದ್ಧಿಸುವ ಆಹಾರ ಸೇವನೆ ಮುಖ್ಯವಾಗಿದೆ ಒಳ್ಳೆಯ ಆಹಾರ, ಸ್ವಚಂದ ವಾತಾವರಣ ಮತ್ತು ಜಾಗೃತಿ ಇದ್ದರೆ ಡೆಂಗ್ಯೂ ನಿಮ್ಮಿಂದ ದೂರವಿರುತ್ತದೆ ಡೆಂಗ್ಯೂ ಬಗ್ಗೆ ಜಾಗೃತಿ ಇರಲಿ ಭಯ ಬೇಡ ಎಂದರು.
ನೂರಾರು ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳ ಮುಖಾಂತರ ಸಂಚಾರಿಸಿ ಡೆಂಗ್ಯೂ ಜ್ವರ ಜಾಗೃತಿ, ಪರಿಸರ ಕಾಳಜಿ ಬಗ್ಗೆ ಬೆಳಕು ಚಲ್ಲಿದರು.
ಈ ಸಂದರ್ಭದಲ್ಲಿ ಸುಶೃತ ಪ್ಯಾರಾ ಮೆಡಿಕಲ್ ಕಾಲೇಜು ಮತ್ತು ಸಾಯಿದತ್ತ ಸ್ಕೂಲ್ ಆಫ್ ನರ್ಸಿಂಗನ ಉಪನ್ಯಾಸಕರು, ಸಿಬ್ಬಂದಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ವರದಿ : ಸುರೇಶ ಬಂಡಾರಿ.