ಶಾಸಕ ಜಿ. ಎಸ್. ಪಾಟೀಲರ ಹೇಳಿಕೆಯನ್ನು ಬಿಜೆಪಿ ಮುಖಂಡರು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ – ಶಿವರಾಜ ಘೋರ್ಪಡೆ.
ಶಾಸಕ ಜಿ. ಎಸ್. ಪಾಟೀಲರ ಹೇಳಿಕೆಯನ್ನು ಬಿಜೆಪಿ ಮುಖಂಡರು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ – ಶಿವರಾಜ ಘೋರ್ಪಡೆ.
ಗಜೇಂದ್ರಗಡ : ಸತ್ಯಮಿಥ್ಯ ( ಅಗಸ್ಟ್ -29).
ನಗರದಲ್ಲಿ ಎರಡು ದಿನಗಳ ಹಿಂದೆ ಆಹಿಂದ ಮತ್ತು ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ. ಸ್ಥಳೀಯ ಶಾಸಕ ಜಿ.ಎಸ್. ಪಾಟೀಲರು ನೀಡಿದ ಹೇಳಿಕೆಯನ್ನು. ಬಿಜೆಪಿ ಮುಖಂಡರು ತಿರುಚಿ ರಾಜ್ಯಾದ್ಯಂತ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಕುರಿತು ಸ್ಪಷ್ಟನೆ ಕೊಡುವ ಸಲುವಾಗಿ ನಗರದ ರೋಣ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಇಂದು ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಶಿವರಾಜ ಘೋರ್ಪಡೆ.136 ಜನ ಶಾಸಕರ ಬೆಂಬಲದೊಂದಿಗೆ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಪಂಚಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಯಶಸ್ವಿ ಆಡಳಿತ ನಡೆಸುತ್ತಿದೆ. ಇಂತಹ ಜನಪ್ರಿಯ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಮಾಡಿದ್ದಲ್ಲಿ. ರಾಜ್ಯದ ಜನ ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ದಂಗೆ ಏಳುವ ಸಾಧ್ಯತೆ ಇದೆ ಎನ್ನುವ ಉದ್ದೇಶದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಅದನ್ನು ಬಿಜೆಪಿ ನಾಯಕರು ತಿರುಚುವ ಮೂಲಕ ಶಾಸಕರಾದ ಜಿ. ಎಸ್. ಪಾಟೀಲರ ಬಗ್ಗೆ ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.ವಿರೋಧ ಪಕ್ಷದ ಅನೇಕ ನಾಯಕರನ್ನು ಇಡಿ ಐಟಿ ಇಲಾಖೆಯ ಮೂಲಕ ಹತ್ತಿಕ್ಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರನ್ನು ಅಸ್ತ್ರವಾಗಿಸುವ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಇದನ್ನು ಖಂಡಿಸುತ್ತೇವೆ ಎಂದರು.
ಕಾಂಗ್ರೇಸ್ ಮುಖಂಡ ಸಿದ್ದಪ್ಪ ಬಂಡಿ ಮಾತನಾಡಿ ಬಿಜೆಪಿ ಮುಖಂಡರು ಜಿ. ಎಸ್. ಪಾಟೀಲರ ಹೇಳಿಕೆಯನ್ನು ತಿರುಚುವ ಮೂಲಕ. ಜನಸಾಮಾನ್ಯರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನೇಕ ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು. ಜನರಿಂದ ಚುಣಾಯಿತವಾದ ವಿರೋಧ ಪಕ್ಷಗಳ ರಾಜ್ಯಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಮುಂದುವರೆದರೆ ಜನಾ ದಂಗೆ ಏಳುವ ಕಾಲ ದೂರವಿಲ್ಲ ಎಂಬ ಅರ್ಥದಲ್ಲಿ ಶಾಸಕರಾದ ಜಿ. ಎಸ್. ಪಾಟೀಲರು ಹೇಳಿಕೆ ನೀಡಿದ್ದಾರೆ. ಅಲ್ಲದೇ ಇಂದಿನ ಬಿಜೆಪಿ ಪ್ರತಿಭಟನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಗುಂಡಾಗಿರಿ ಪದಬಳಕೆಗೆ ಉತ್ತರ ನೀಡುತ್ತಾ ಜಿ. ಎಸ್. ಪಾಟೀಲರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಚ್. ಎಸ್. ಸೋಂಪುರ, ಬಸವರಾಜ ಶೀಲವಂತರ ಮಾತನಾಡಿದರು.
ಈ ಸಂದರ್ಭದಲ್ಲಿ ವೀರಣ್ಣ ಶಟ್ಟರ, ಪ್ರಶಾಂತ ರಾಠೋಡ್, ಶ್ರೀಧರ ಬಿದರಳ್ಳಿ, ಮುರ್ತುಜ ಡಾಲಯತ,ವೆಂಕಟೇಶ ಮುದಗಲ್, ರಾಜು ಸಾಂಗ್ಲಿಕರ, ಯಲ್ಲಪ್ಪ ಬಂಕದ,ಶ್ರೀಧರ್ ಗಂಜಿಗೌಡ್ರ,ಅರ್ಜುನ ರಾಠೋಡ್,ಉಮೇಶ ರಾಠೋಡ್ ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.