
ಮೂಡಲಗಿಯಲ್ಲಿ ಪತ್ರಕರ್ತರ ಅಕ್ಷರ ಬೇಸಾಯ ಸಮೃದ್ದವಾಗಿದೆ : ಪ್ರೋ ಗುಜಗೊಂಡ
ಮೂಡಲಗಿ : ಸತ್ಯಮಿಥ್ಯ ( ಜುಲೈ -15).
ಪತ್ರಿಕಾ ದಿನಾಚರಣೆಯನ್ನು 365 ದಿನಗಳ ಕಾಲ 24×7 ಸಮಾಜ ಸೇವೆಯನ್ನು ಮಾಡಿದ ಪತ್ರಕರ್ತರನ್ನು ಗೌರವಿಸುವುದಕ್ಕೆ.ಅಷ್ಟೇ ಅಲ್ಲ ಅವರ ಪರಿಶ್ರಮ, ತಾಕಲಾಟ,ಸುದ್ದಿ ಸಂಗ್ರಹಣೆಗಾಗಿ ಪರದಾಟದ ಜೊತೆಗೆ ತಮ್ಮ ಪರಿವಾರವನ್ನು ರಾತ್ರಿ ಸಮಯದಲ್ಲಿ ಒಂಟಿಯಾಗಿ ಬಿಟ್ಟು ಘಟನೆ ನಡೆದ ಸ್ಥಳಕ್ಕೆ ದೌಡಾಯಿಸುವ ಸಂದರ್ಭವನ್ನು ಮೇಲಕು ಹಾಕುವದು ಆಗಿದೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ.ಸಂಗಮೇಶ ಗುಜಗೊಂಡ ಹೇಳಿದರು.
ಸೋಮವಾರ ಮೂಡಲಗಿ ಶಿಕ್ಷಣ ಸಂಸ್ಥೆಯ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಕಲ್ಮೇಶ್ವರಬೋಧ ಸಭಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ಗೌರವ ಸನ್ಮಾನದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ಸಮಾಜದ ಮುಖವಾಣಿ ಪತ್ರಿಕೆ. ಪತ್ರಿಕೆ ಇಲ್ಲದೆ ಮುಂಜಾನೆ ಅಪೂರ್ಣ. ಪತ್ರಿಕೆ ಒದಿದ ಅನುಭವ ಯಾವ ತಂತ್ರಜ್ಞಾನದಿಂದಲು ಸಿಗುವದಿಲ್ಲ, ವಿದ್ಯಾರ್ಥಿಗಳ ಸಾಧನೆಯ ಸುದ್ದಿ ಪ್ರಕಟವಾದರೆ ಆತನ ಸಾಧನೆಗೆ ಮತ್ತಷ್ಟು ಪ್ರೇರಣಾದಾಯಕಾಗುತ್ತದೆ ,ಮೂಡಲಗಿಯ ಪತ್ರಕರ್ತರು ಕ್ರೀಯಾಶೀಲರು ಇಲ್ಲಿಯ ಪತ್ರಿಕಾ ವರದಿಗಾರರ ಅಕ್ಷರ ಬೇಸಾಯ ರಾಜ್ಯದ ಮೂಲೆ ಮೂಲೆಗೂ ಪಸರಿಸಿದೆ ಎಂದರೆ ಅತಿಸೋಕ್ತಿಯಾಗಲಾರದು, ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ. ಪತ್ರಕರ್ತರು ವಿದ್ಯಾರ್ಥಿಗಳು ಒಂದೆ, ಇಬ್ಬರು ಹೊಸ ಹೊಸ ವಿಷಯವನ್ನು ಹುಡುಕುತ್ತಾರೆ, ಇಬ್ಬರು ವಿಷಯ ಸಂಗ್ರಹಿಸುತ್ತಾರೆ ಅದನ್ನು ಯಾವ ತರಹದಲ್ಲಿ ಸಮಾಜದ ಮುಂದೆ ಶಿಕ್ಷಕರ ಮುಂದೆ ವಿನೂತವಾಗಿ ಪ್ರಸ್ತುತ ಪಡಿಸುವಲ್ಲಿ ತಮ್ಮ ಕಲಾ ಕೌಶಲ್ಯವನ್ನು ತೊರಿಸಬೇಕಾಗುತ್ತದೆ. ಇದರಲ್ಲಿ ವಿಧ್ಯಾರ್ಥಿ ಹಾಗೂ ಪತ್ರಕರ್ತರ ನೈಪುಣ್ಯತೆಯನ್ನು ಅಡಗಿದೆ. ಯಾವ ವಿಷಯವನ್ನು ಸಮಾಜದ ಮುಂದೆ ಪ್ರಸ್ತುತ ಪಡಿಸಬೇಕು ಎಂಬ ವಿಷಯ ಪತ್ರಕರ್ತರ ಅಡಗಿದಂತೆ ವಿದ್ಯಾರ್ಥಿಗಳು ಶಿಕ್ಷಕರ ಮುಂದೆ ವಿಷಯ ತೊರಿಸುವಾಗ ಅವರ ಜಾಣ್ಮೆಯನ್ನು ಪ್ರದರ್ಶಿಸಬೇಕಾಗುತ್ತದೆ ಎಂದರು.
ಅದ್ಯಕ್ಷತೆ ವಹಿಸಿದ ವೆಂಕಟೇಶ ಸೋನವಾಲ್ಕರ ಮಾತನಾಡಿ. ಪತ್ರಕರ್ತರು ಸಮಾಜದ ಮುಖ್ಯ ಭಾಗ ಅವರ ಸಾಧನೆ ನಿರಂತರವಾಗಿರಲಿ. ವಿದ್ಯಾರ್ಥಿಗಳು ಛಲ ಮತ್ತು ಸಾಧಿಸುವ ನಿರಂತರ ಕಾಯಕ ಯಾವಾಗಲು ನೀಮ್ಮದಾಗಲಿ ಎಂದು ಹಾರೈಸಿದರು. ಕರೋನಾ ಸಮಯದಲ್ಲಿ ಪತ್ರಕರ್ತರ ಪಾತ್ರ ಬಹಳ ಅನನ್ಯವಾಗಿತ್ತು ಹಾಗೇಯೇ ಮೂಡಲಗಿಯಲ್ಲಿ ಆಗಬೇಕಾದ ಕಾರ್ಯಗಳು ಇವೆ ಅದರ ಬಗ್ಗೆ ಕಾಳಜಿವಹಿಸಿ ಎಂದರು.
ನಿವೃತ್ತ ಗ್ರಂಥಪಾಲಕ ಬಾಲಶೇಖರ ಬಂದಿ. ನ್ಯಾಯವಾದಿ ಲಕ್ಷ್ಮಣ ಅಡಿಹುಡಿ ಮಾತಮಾಡಿದರು.
ಡಾ ಎಸ್ ಎಲ್ ಚಿತ್ರಗಾರ ನಿರೂಪಿಸಿದರು .ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಮ್ ಎಸ್ ಪಾಟೀಲ ವಂದಿಸಿದರು.
ವರದಿ : ಶಿವಾನಂದ ಮುಧೋಳ್.