ಮುಗಳಖೋಡ ಪುರಸಭೆ ಆಡಳಿತ ಬಿಜೆಪಿ ತೆಕ್ಕೆಗೆ.ಕಾಂಗ್ರೇಸಗೆ ತೀವ್ರ ಮುಖಭಂಗ.
ಉಸ್ತುವಾರಿ ಮಂತ್ರಿ, ಚಿಕ್ಕೋಡಿ ಸಂಸದರು, ಕುಡಚಿ ಶಾಸಕರು ಕಾಂಗ್ರೆಸ್ ಪಕ್ಷದವರೇ ಇದ್ದರೂ ಮುಗಳಖೋಡ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ.
ಮುಗಳಖೋಡ ಪುರಸಭೆ ಆಡಳಿತ ಬಿಜೆಪಿ ತೆಕ್ಕೆಗೆ.ಕಾಂಗ್ರೇಸಗೆ ತೀವ್ರ ಮುಖಭಂಗ.
ಅಧ್ಯಕ್ಷೆ ಶಾಂತವ್ವ ಗೋಕಾಕ ಮತ್ತು ಉಪಾಧ್ಯಕ್ಷೆ ಗಂಗವ್ವ ಬೆಳಗಲಿ ಮುಗಳಖೋಡ ಪುರಸಭೆಗೆ ಅವಿರೋಧವಾಗಿ ಆಯ್ಕೆಯಾದರು
ಉಸ್ತುವಾರಿ ಮಂತ್ರಿ, ಚಿಕ್ಕೋಡಿ ಸಂಸದರು, ಕುಡಚಿ ಶಾಸಕರು ಕಾಂಗ್ರೆಸ್ ಪಕ್ಷದವರೇ ಇದ್ದರೂ ಮುಗಳಖೋಡ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ.
ಮುಗಳಖೋಡ :ಸತ್ಯಮಿಥ್ಯ ( ಅಗಸ್ಟ್ -28)
ಪಟ್ಟಣದ ಪುರಸಭೆಗೆ ಮಂಗಳವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಶಾಂತವ್ವ ಗೋಪಾಲ್ ಗೋಕಾಕ್ ಅಧ್ಯಕ್ಷರಾಗಿ ಗಂಗವ್ವ ಹನುಮಂತ್ ಬೆಳಗಲಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಪಟ್ಟಣದ ಪುರಸಭೆಯ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಪಕ್ಷವು ತನ್ನದಾಗಿಸಿಕೊಂಡಿದೆ.
ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಮಹಿಳೆ ಅ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ದಕ್ಕೆ ನಿಗದಿಯಾಗಿತ್ತು, ಆದರೆ ಪುರಸಭೆಯಲ್ಲಿ 23 ಜನ ಚುನಾಯಿತ ಸದಸ್ಯರಲ್ಲಿ ಬಿಜೆಪಿಯ 13 ಜನ ಸದಸ್ಯರು ಒಬ್ಬ ಪಕ್ಷೇತರ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಶಾಂತವ್ವ ಗೋಪಾಲ ಗೋಕಾಕ, ಉಪಾಧ್ಯಕ್ಷ ಸ್ಥಾನಕ್ಕೆ ಗಂಗವ್ವ ಹಣಮಂತ ಬೆಳಗಲಿ ನಾಮಪತ್ರ ಸಲ್ಲಿಸಿದರು, ಆದರೆ ಇನ್ನುಳಿದ ಕಾಂಗ್ರೆಸ್ ಪಕ್ಷದ 4ಜನ ಸದಸ್ಯರು ಹಾಗೂ ಪಕ್ಷೇತರ 5 ಜನ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಇದ್ದುದ್ದರಿಂದ ಅಧ್ಯಕ್ಷೆಯಾಗಿ ಶಾಂತವ್ವ ಗೋಪಾಲ ಗೋಕಾಕ ಉಪಾಧ್ಯಕ್ಷೆಯಾಗಿ ಗಂಗವ್ವ ಹಣಮಂತ ಬೆಳಗಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೀಸಲಾತಿ ಘೋಷಣೆ ಆದ ದಿನದಂದೆ ಬಿಜೆಪಿಯ 13ಜನ ಒಬ್ಬ ಪಕ್ಷೇತರ ಸೇರಿ 14 ಸದಸ್ಯರು ಹಾಗೂ ಮುಖಂಡರು ಈ ಆಯ್ಕೆ ದಿನದವರೆಗೆ ದೇವಸ್ಥಾನ ಹಾಗೂ ಪ್ರವಾಸ ಕೈಗೊಂಡು ಮಂಗಳವಾರ 11 ಗಂಟೆಗೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಆದರೆ ಜನರಲ್ಲಿ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರು ನಾವು ಪಕ್ಷೇತರ ಹಾಗೂ ಶಾಸಕ,ಸಂಸದರ ಬೆಂಬಲದಿಂದ ಜಯ ನಮ್ಮದಾಗಿಸಿಕೊಳ್ಳುತ್ತೆವೆ ಎಂಬ ಮಹಾದಾಸೆಗೆ ಬಿದ್ದಿದ್ದರು ಆದರೆ ಪಕ್ಷದ ರಾಜ್ಯ ಮುಖಂಡರ ಆಣತಿಯಂತೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಇದ್ದುದ್ದರಿಂದ ಪುರಸಭೆ ಆಡಳಿತ ಬಿಜೆಯ ಪಾಲಾಗಿದೆ.
ಚುನಾವಣಾಧಿಕಾರಿ ತಹಶೀಲ್ದಾರ್ ಸುರೇಶ ಮುಂಚೆ, ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ, ಕಂದಾಯ ನಿರೀಕ್ಷಕ ಮಹೇಶ ಭಜಂತ್ರಿ, ಗ್ರಾಮ ಆಡಳಿತಾಧಿಕಾರಿ ಎಸ್.ಎಸ್.ಹತ್ತರಕಿ, ಸಿಪಿಐ ರವಿಚಂದ್ರನ್ ಡಿ.ಬಿ, ಪಿಎಸ್ಐ ಮಾಳಪ್ಪ ಪೂಜಾರಿ, ಪಿಎಸ್ಐ ಪ್ರೀತಮ್ ನಾಯಿಕ, ಕ್ರೈಂ ಪಿಎಸ್ ಐ ಗಿರಿಮಲ್ಲಪ್ಪ ಉಪ್ಪಾರ ಪೊಲೀಸ್ ಬಿಗಿ ಬಂದುಬಸ್ತ ಮಾಡಿದ್ದರು.
ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ, ಬಿಜೆಪಿಯ ಕಾರ್ಯಕರ್ತರ ತಂತ್ರಗಾರಿಕೆಯ ನಡೆಯಲ್ಲಿ ಶಾಂತತೆಯಿಂದ ಚುನಾವಣಾ ಪ್ರಕ್ರಿಯೆ ನಡೆಯಿತು. ಈ ಅಧಿಕಾರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿಯಾಗಿರಲಿದೆ ಎಂದು ಪಿ.ರಾಜೀವ ಹೇಳಿದರು.ನಂತರ ಸಿಡಿ ಮದ್ದು ಸಿಡಿಸುತ್ತಾ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯೊಂದಿಗೆ ಶ್ರೀ ಯಲ್ಲಾಲಿಂಗೇಶ್ವರ ಕರ್ತೃ ಗದ್ದುಗೆಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಬಿಜೆಪಿಯ ಚಿಕ್ಕೋಡಿ ಜಿಲ್ಲಾ ಪ್ರಕೊಷ್ಠಗಳ ಸಂಚಾಲಕ ರಮೇಶ ಖೇತಗೌಡರ, ಪುರಸಭೆ ಸದಸ್ಯ ರಾಜು ನಾಯಿಕ, ಅನುಸೂಯಾ ಲಮಾಣಿ, ಹಾಲಪ್ಪ ಶೇಗುಣಸಿ, ಗೀತಾ ಪ್ರಧಾನಿ, ಲಕ್ಷ್ಮವ್ವ ಶೇಗುಣಸಿ, ಚೇತನ ಯಡವಣ್ಣವರ,ಮಂಗಲ ಪನದಿ,ಐರವ್ವ ವಾಡೆನ್ನವರ, ಪ್ರತಿಭಾ ಹೊಸಪೇಟಿ, ಮಹಾಂತೇಶ ಯರಡೆತ್ತಿ, ಸಾವಿತ್ರಿ ಯರಡೆತ್ತಿ, ಕೆಂಪಣ್ಣ ಅಂಗಡಿ, ಹಿರಿಯರಾದ ಮಾರುತಿ ಗೋಕಾಕ, ಗೌಡಪ್ಪ ಖೆತಗೌಡರ, ಶಿವಾನಂದ ಮೆಕ್ಕಳಕಿ, ಕೃಷ್ಣ ನಾಯಿಕ, ಗೋಪಾಲ ಗೋಕಾಕ, ಗೋಪಾಲ ಯಡವಣ್ಣವರ,ಅಗ್ರಾಣಿ ಶೇಗುಣಸಿ, ಶಿವಾನಂದ ಗೋಕಾಕ, ಬಸವರಾಜ ಹೊಸಪೇಟಿ,ಅಚ್ಚಪ್ಪ ಬೆಳಗಲಿ, ಭೀಮಪ್ಪ ಬನಶಂಕರಿ, ನಾಗೇಶ ಹುಕ್ಕೇರಿ, ಮುತ್ತಪ್ಪ ಬಾಳೋಜಿ, ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಇದ್ದರು.
ವರದಿ : ಸಂತೋಷ ಮುಗಳಿ.