
ಮೊಹರಂ: ಹಿಂದೂ–ಮುಸ್ಲಿಮರು ಒಟ್ಟಿಗೆ ಶಾಂತಿ-ಸೌಹಾರ್ದದಿಂದ ಆಚರಿಸಬೇಕು – ಪಿಎಸ್ಐ ಸಂಜಯ್ ತಿಪ್ಪಾರೆಡ್ಡಿ.
ಮುದ್ದೇಬಿಹಾಳ- ಸತ್ಯಮಿಥ್ಯ ( ಜುಲೈ -14).
ನೂರಾರೂ ವರ್ಷಗಳಿಂದ ಹಿಂದೂ ಮುಸ್ಲಿಂ ಧರ್ಮದವರು ಸೌಹಾರ್ದಯುತವಾಗಿ ನಾಲತವಾಡದಲ್ಲಿ ಮೊಹರಂ ಆಚರಣೆ ನಡೆಸಿಕೊಂಡು ಬಂದಿದ್ದಾರೆ.ಅದೆ ರೀತಿ ಮುಂದೆಯೂ ಪರಸ್ಪರ ಸಹಕಾರ ಹಾಗೂ ಸೌಹಾರ್ದದಿಂದ ಪ್ರತಿಯೊಬ್ಬರೂ ಹಬ್ಬ ಆಚರಿಸಬೇಕು. ಮೊಹರಂ ಹಬ್ಬದಲ್ಲಿ ಶಾಂತಿಗೆ ಭಂಗ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಪಿಎಸ್ಐ ಸಂಜಯ ತಿಪ್ಪಾರೆಡ್ಡಿ ಹೇಳಿದರು.
ಅವರು ಇಲ್ಲಿನ ಹೊರ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದ ಮೊಹರಂ ಶಾಂತಿ ಸಭೆಯಲ್ಲಿ ಮಾತನಾಡಿದರು.
ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಿ, ಶಾಂತಿ ಕಾಪಾಡುವ ಅಗತ್ಯವಿದೆ. ವದಂತಿಗಳಿಗೆ ಕಿವಿಗೊಡದೆ ಸಾಮರಸ್ಯದಿಂದ ಹಬ್ಬ ಆಚರಿಸಿ ಎಂದರು.
ಹಬ್ಬದ ದಿನದಂದು ನಮ್ಮ ಇಲಾಖೆಯಿಂದ ಸೂಕ್ತ ಬಂದೋ ಬಸ್ತ್ ಒದಗಿಸುವ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ವೇಳೆ ಪ್ರಮುಖರಾದ ಬಾಲಚಂದ್ರ ಗದಗಿನ ಮಾತನಾಡಿದರು. ಸಭೆಯಲ್ಲಿ ಮುಖ್ಯ ಪೇದೆ, ಪಿ.ಎಸ್.ಪಾಟೀಲ, ಹನಮಂತ ಹೆಬ್ಬುಲಿ, ಬಸವರಾಜ ಹಿಪ್ಪರಗಿ, ಬಸವರಾಜ ಚಿಂಚೋಳಿ, ಚಿದಾನಂದ, ಮತ್ತು ಸಿಕ್ಕಲಗಾರ, ಅವಟಿ, ಖಾಜಿ, ಹವೇಲಿ, ನಾಡಗೌಡ, ಬಾರಪೇಟ, ತಳಗಿನ ಮಸೀದ್, ಜಾಲಗಾರ ಓಣಿಯ ಮಸೀದಿಯ ಪ್ರಮುಖರಿದ್ದರು.
ವರದಿ : ಶಿವು ರಾಠೋಡ್.