ತಾಲೂಕು

ನರೇಗಲ್‌ – 32ನೇ ರಾಜ್ಯಮಟ್ಟದ ಹೊನಲು ಬೆಳಕಿನ ಅಟ್ಯಾ-ಪಟ್ಯಾ ಚಾಂಪಿಯನ್‌ಶಿಪ್ ಗೆ ಚಾಲನೆ.

Share News

ನರೇಗಲ್‌ – 32ನೇ ರಾಜ್ಯಮಟ್ಟದ ಹೊನಲು ಬೆಳಕಿನ ಅಟ್ಯಾ-ಪಟ್ಯಾ ಚಾಂಪಿಯನ್‌ಶಿಪ್ ಗೆ ಚಾಲನೆ.

ನರೇಗಲ್:‌ಸತ್ಯಮಿಥ್ಯ (ಡಿ -09).

ದೇಶಿಯ ಕ್ರೀಡೆಗಳು ಮನುಷ್ಯನ ಸರ್ವಾಂಗಿಣ ಬೆಳವಣಿಗೆಗೆ ಸಹಕಾರಿ. ಅದೇ ರೀತಿ ಆಟ್ಯಾ ಪಾಟ್ಯಾ ಕ್ರೀಡೆಯು ನಮ್ಮದೇ ದೇಶಿಯ ಕ್ರೀಡೆಯಾಗಿದೆ.ಈ ಕ್ರೀಡೆ ಬೆಳವಣಿಗೆ ಹೊಂದುತ್ತಾ ಬಂದಿದೆ. ಸದ್ಯ ನರೇಗಲ್‌ ಭಾಗದಲ್ಲಿ ಸುದ್ದು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಕಾಂಗ್ರೆಸ್‌ ಪಕ್ಷದ ಯುವ ಮುಖಂಡ ಅಕ್ಷಯ ಐ. ಪಾಟೀಲ ಹೇಳಿದರು.

ಗದಗ ಜಿಲ್ಲಾ ಅಟ್ಯಾ-ಪಟ್ಯಾ ಸಂಸ್ಥೆ, ನರೇಗಲ್‌ ಪಟ್ಟಣದ ಚೈತನ್ಯ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಸ್ಥಳೀಯ ಹೊಸ ಬಸ್‌ ನಿಲ್ದಾಣದ ಎದುರಿನ ಸರ್ಕಾರಿ ಶಾಲೆಯ ಆವರಣದಲ್ಲಿ ಶನಿವಾರ ರಾತ್ರಿ ಆರಂಭವಾದ 32ನೇ ರಾಜ್ಯಮಟ್ಟದ ಹೊನಲು ಬೆಳಕಿನ ಅಟ್ಯಾ-ಪಟ್ಯಾ ಚಾಂಪಿಯನ್‌ಶಿಪ್ ಗೆ ಚಾಲನೆ ನೀಡಿ ಮಾತನಾಡಿದರು.

ಅಟ್ಯಾ-ಪಟ್ಯಾ ಆಟವು.ಶಕ್ತಿ ಮತ್ತು ಬುದ್ದಿಮತ್ತೇ ಬಳಸಿ ಆಡುವ ಆಟವಾಗಿದೆ .ಈ ಆಟ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಈ ಆಟದಲ್ಲಿ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸಿದ ಅನೇಕ ಕ್ರೀಡಾಪಟುಗಳು ನರೇಗಲ್‌ ಭಾಗದಲ್ಲಿರುವುದು ಕಂಡು ಸಂತೋಷವಾಯಿತು ಎಂದರು. ಕ್ರೀಡೆಯಲ್ಲಿ ಏಕಾಗ್ರತೆ, ಸಮನ್ವಯತೆ ಇದ್ದಾಗ ಮಾತ್ರ ಜಯ ನಮ್ಮದಾಗಿಸಿಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿ ತಂದ ಕ್ರೀಡಾಪಟುಗಳು ಸಂಘಟಾತ್ಮಕವಾಗಿ ಆಟವಾಡಬೇಕು ಹಾಗೂ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದರು.

ಅಟ್ಯಾ–ಪಟ್ಯಾ ಸಂಸ್ಥೆಯ ರಾಜ್ಯ ಪ್ರಭಾರಿ ಕಾರ್ಯದರ್ಶಿ ಎಲ್.ಸಿ. ಲಮಾಣಿ ಮಾತನಾಡಿ, ಈ ಆಟ ಬಹುತೇಕ ಕೊಕ್ಕೊ ಆಟವನ್ನೇ ಹೋಲುತ್ತದೆ. ಅದೇ ಅಂಕಣವನ್ನು ಬಳಸಿಕೊಂಡು ಆಡಬಹುದು. ಈ ಆಟವಾಡಲು ಯಾವುದೇ ಸಲಕರಣೆಗಳ ಅಗತ್ಯವಿಲ್ಲ. ಒಂದು ಸಮತಟ್ಟಾದ ಮೈದಾನ ಇದ್ದರೆ ಸಾಕು ಎಂದು ಮಾಹಿತಿ ನೀಡಿದರು. ಕ್ರೀಡಾಪಟುಗಳಲ್ಲಿ ಕ್ರೀಡಾ ಮನೋಭಾವನೆ ಮುಖ್ಯ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಎದುರಾಳಿ ತಂಡದ ವಿರುದ್ಧ ಆಡುವಾಗ ಆತ್ಮವಿಶ್ವಾಸ ಕಳೆದುಕೊಳ್ಳದೇ ಕ್ರೀಡೆಯ ನಿಯಮಾವಳಿಗಳ ಪ್ರಕಾರ ಆಟವಾಡಬೇಕು ಎಂದರು.

ಕ್ರೀಡಾಕೂಟದಲ್ಲಿ ವಿವಿಧ ಜಿಲ್ಲೆಯ ಬಾಲಕ ಹಾಗೂ ಬಾಲಕಿಯರ ವಿಭಾಗದ 500ಕ್ಕೂ ಹೆಚ್ಚಿನ ಕ್ರೀಡಾಪಟಗಳು ಭಾಗವಹಿಸಿದ್ದರು. ಈ ವೇಳೆ ನರೇಗಲ್‌ ಶಹರ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ, ಶಿವನಗೌಡ ಪಾಟೀಲ, ಗದಗ ಜಿಲ್ಲಾ ಅಟ್ಯಾ–ಪಟ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಟಿ. ನಡಮನಿ, ಎಂ. ಎಸ್. ಧಡೆಸೂರಮಠ, ಮೈಲಾರಪ್ಪ ವೀ. ಚಳ್ಳಮರದ, ಅಲ್ಲಾಬಕ್ಷಿ ನದಾಫ್‌, ಸಂತೋಷ ಹನಮಸಾಗರ, ಸಂಜೀವ ರಡ್ಡೆರ, ಡಾ. ಎ. ಡಿ. ಸಾಮುದ್ರಿ, ಉಮೇಶ ಸಂಗನಾಳಮಠ, ಕಲ್ಮೇಶ ತೊಂಡಿಹಾಳ, ಬಸವರಾಜ ವಂಕಲಕುಂಟಿ, ಬಸವರಾಜ ಕುರಿ, ತಿಮ್ಮರಡ್ಡಿ ಬಂಡ್ಡಿವಡ್ಡರ, ಆರ್. ಎಸ್. ನರೇಗಲ್, ಭೀಮಮ್ಮ ಪೂಜಾರ, ನಿಂಗರಾಜ ಬೇವಿನಕಟ್ಟಿ, ವಿ. ಎ. ಕುಂಬಾರ, ರಫೀಕ ರೇವಡಿಗಾರ, ಮಹಾದೇವ ಬೇವಿನಕಟ್ಟಿ ಇದ್ದರು.

ನರೇಗಲ್‌ ಪಟ್ಟಣದ ಸರ್ಕಾರಿ ಶಾಲೆಯ ಆವರಣದಲ್ಲಿ ಶನಿವಾರ ರಾತ್ರಿ ಆರಂಭವಾದ 32ನೇ ರಾಜ್ಯಮಟ್ಟದ ಹೊನಲು ಬೆಳಕಿನ ಅಟ್ಯಾ-ಪಟ್ಯಾ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಪಂದ್ಯಾದ ಆರಂಭದ ವೇಳೆ ಭಾಗವಹಿಸಿದ ಕ್ರೀಡಾಪಟುಗಳು ಹಾಗೂ ಗಣ್ಯರು

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!