ನರೇಗಲ್- ಸೈನಿಕನಿಗೆ ಗ್ರಾಮಸ್ಥರಿಂದ ಸ್ವಾಗತ.
ಸಾಮಾನ್ಯ ಕುಟುಂಬದ ರೈತನ ಮಗನೊಬ್ಬ ಭಾರತ ಮಾತೆಯ ಸೇವೆಗೈದು ಬಂದಿದ್ದನ್ನು ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ನರೇಗಲ್- ಸೈನಿಕನಿಗೆ ಗ್ರಾಮಸ್ಥರಿಂದ ಸ್ವಾಗತ.
ನರೇಗಲ್ ಪಟ್ಟಣಕ್ಕೆ ಆಗಮಿಸಿದ ಬಿಎಸ್‌ಎಫ್ ಸೈನಿಕ ಮಂಜುನಾಥ ಹನಮನಾಳ ಅವರನ್ನು ಸ್ಥಳೀಯರು ಹೂವಿನ ಮಾಲೆ ಹಾಕಿ ಸಿಹಿ ಹಂಚಿ ಸ್ವಾಗತ ಕೋರಿದ ಸಂದರ್ಭ.
ನರೇಗಲ್:ಸತ್ಯ ಮಿಥ್ಯ ( ಜು -13)
ಜಾರ್ಖಾಂಡ್ ನಲ್ಲಿ ಬಿಎಸ್‌ಎಫ್ ತರಬೇತಿ ಪೂರೈಸಿ ಆರು ತಿಂಗಳುಗಳ ನಂತರ ಊರಿಗೆ ಮರಳಿದ ಸೈನಿಕ ಮಂಜುನಾಥ ಕಳಕಪ್ಪ ಹನಮನಾಳ ಅವರನ್ನು ಪಟ್ಟಣದ ಜನರು ಹೂವಿನ ಮಾಲೆ ಹಾಕಿ ಸಿಹಿ ಹಂಚಿ ಸ್ವಾಗತ ಕೋರಿದರು. ಬಿಸಿಎ ಪದವಿಧರನಾಗಿ ಕಂಪನಿ ಕೆಲಸಕ್ಕೆ ಹೋಗದೆ ಅಕ್ಟೋಬರ್ 2023ರಲ್ಲಿ ಬಿಎಸ್‌ಎಫ್‌ನ ಜಿಡಿ ಪರೀಕ್ಷೆಯ ಅರ್ಹತೆ ಪಡೆದು ತರಬೇತಿಗೆ ಹಾಜರಾಗಿದ್ದರು.
ಈ ವೇಳೆ ಮಾತನಾಡಿದ ರೈತ ಮುಖಂಡ ನಿಂಗನಗೌಡ ಲಕ್ಕನಗೌಡ್ರ, ಸಾಮಾನ್ಯ ಕುಟುಂಬದ ರೈತನ ಮಗನೊಬ್ಬ ಪಾಠ ಮಾಡಿದ ಗುರುಗಳ ಹಾಗೂ ಕುಟುಂಬಸ್ಥರ ಸಹಕಾರದಲ್ಲಿ ಸೈನಿಕನಾಗಿ ಆಯ್ಕೆಯಾಗಿ ದೇಶ ಸೇವೆಯ ತರಬೇತಿ ಪೂರೈಸಿ ಬಂದ ಕಾರಣ ಸಿಹಿ ಹಂಚಿ ಸ್ವಾಗತಿಸಲಾಯಿತು. ಇದರಿಂದ ಇನ್ನೂ ಹೆಚ್ಚಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ ದೈಹಿಕ ಹಾಗೂ ಮಾನಸಿಕ ಸದೃಡತೆಯನ್ನು ಕಾಪಾಡಿಕೊಂಡು ಸೈನಿಕರಾಗಲು ಮುಂದಾಗಬೇಕು ಎನ್ನುವ ಸದುದ್ದೇಶದಿಂದ ಬಸ್ ನಿಲ್ದಾಣದಲ್ಲಿಯೇ ಅದ್ದೂರಿಯಾಗಿ ಸ್ವಾಗತ ಮಾಡಿದೇವು ಎಂದರು.
ಸಿ. ಎ. ಅಂಗಡಿ, ಮುತ್ತಣ್ಣ ಹಡಪದ, ಶರಣಪ್ಪ ನೀರಲಗಿ, ಶಿಲಾರಸಾಬ್ ಬಂಕಾಪುರ, ಕುಮಾರ್ ಕರಮುಡಿ, ಉಮಾದೇವಿ, ಕಳಕಪ್ಪ, ಪ್ರವೀಣ ಅಣಗೌಡ್ರ, ಸುಮಂತ್ ಗ್ರಾಮಪುರೋಹಿತ್, ಈರಣ್ಣ ಮುಳಗುಂದ ಇದ್ದರು.
ವರದಿ :ವಿರೂಪಾಕ್ಷ.