ತಾಲೂಕು

ಸಂಸಾರವೆನ್ನುವ ಸಾಗರದಲ್ಲಿ ದಂಪತಿಗಳಿಗೆ ಸಹನೆ, ತಾಳ್ಮೆ ಮುಖ್ಯ : ಪ್ರಭು ಸ್ವಾಮಿಗಳು

Share News

ಸಂಸಾರವೆನ್ನುವ ಸಾಗರದಲ್ಲಿ ದಂಪತಿಗಳಿಗೆ ಸಹನೆ, ತಾಳ್ಮೆ ಮುಖ್ಯ : ಪ್ರಭು ಸ್ವಾಮಿಗಳು 

ಕುಕನೂರ : ಸತ್ಯಮಿಥ್ಯ ( ಆಗಸ್ಟ್ -26).

ಸಂಸಾರವೆನ್ನುವ ಸಾಗರದಲ್ಲಿ ಸತಿ-ಪತಿಯರಲ್ಲಿ ಸಹನೆ, ತಾಳ್ಮೆ, ಸಂಯಮ ಇದ್ದಾಗ ಮಾತ್ರ ಸುಖ ಸಂಸಾರ ನಡೆಸಲು ಸಾಧ್ಯವಾಗುತ್ತದೆ ಎಂದು ಕಂಪ್ಲಿ ಅಭಿನವ ಪ್ರಭು ಮಹಾಸ್ವಾಮಿಗಳು ನೂತನ ದಂಪತಿಗಳಿಗೆ ಕಿವಿ ಮಾತನ್ನು ಹೇಳಿದರು.

ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಅನ್ನದಾನೀಶ್ವರ ಶಾಖಾಮಠದ ಮಹಾ ಶಿವಯೋಗಿ ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ನೇತೃತ್ವ ವಹಿಸಿ ವಧು, ವರರನ್ನುದ್ದೇಶಿಸಿ ಮಾತನಾಡಿ ದಂಪತಿಗಳು ಪರಸ್ಪರ ಸಾಮರಸ್ಯದಿಂದ ಜೀವನ ಸಾಗಿಸುವುದರ ಜೊತೆಗೆ ಹಿರಿಯರಲ್ಲಿ ಗೌರವ ಅಭಿಮಾನ ಹೊಂದಿ ನಡೆದುಕೊಂಡು ಮಾದರಿಯ ಜೀವನ ನಡೆಸಬೇಕು ಎಂದರು.

ನಂತರದಲ್ಲಿ ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು ಮಾತನಾಡಿ ಇಂದು ನೂತನ ದಾಂಪತ್ಯಕ್ಕೆ ಕಾಲಿಟ್ಟಿರುವ ನಿಮಗೆ ಸುರಗಿ ಕಾಯಿಯನ್ನು ನಿಮ್ಮ ಕರದಲ್ಲಿ ಇರಿಸಿದ್ದೇವೆ ಎಂದರೇ ನೀವು ನಿಮ್ಮ ಕಾಯವನ್ನು ಅಷ್ಟೇ ಪರಿಶುದ್ದವಾಗಿ ಕಾಯ್ದುಕೊಂಡು, ದುಶ್ಟಟಕ್ಕೆ ಬಲಿ ಬಿಳದೇ ಕಾಯಿಯಷ್ಟೇ ಪರಿಶುದ್ದ ಜೀವನ ನಡೆಸಿ ಸುಂದರ ಬದುಕು ಕಟ್ಟಿಕೊಳ್ಳಿ ಎಂದು ದಂಪತಿಗಳಿಗೆ ತಿಳಿಸಿದರು.

ಮಠ ಮಾನ್ಯಗಳು ಸಮಾಜದಲ್ಲಿ ಧರ್ಮ, ಸಂಸ್ಕಾರ, ಐಕ್ಯತೆ ಸಂದೇಶಗಳನ್ನು ನೀಡುತ್ತಾ ಜನರನ್ನು ಸದಾ ಜಾಗೃತಗೊಳಿಸುತ್ತಿವೆ ಅಂತಹ ಮಠಗಳ ಸಾಲಿನಲ್ಲಿ ಈ ಮಠದ ಮಹಾದೇವ ಸ್ವಾಮಿಗಳು ಕೂಡಾ ಸದಾ ಒಂದಲ್ಲೊಂದು ಧರ್ಮ ಕಾರ್ಯಗಳನ್ನು ಮಾಡುತ್ತಾ ಎಲ್ಲಾ ಸಮಾಜದ ಒಳಿತಿಗಾಗಿ ಶ್ರಮಿಸಿ, ಸಾವಿರಾರು ಭಕ್ತಾಧಿಗಳಿಂದ ಈ ಮಠವನ್ನು ಇಂದು ಬೃಹದ್ದಾಕಾರದಲ್ಲಿ ನಿರ್ಮಾಣ ಮಾಡಿರುವುದು ತುಂಬಾ ಶ್ಲಾಘನೀಯ ಎಂದು ಅವರು ಹೇಳಿದರು.

ಶಿಕ್ಷಣ, ದಾಸೋಹದ ಜೊತೆಗೆ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಸದಾ ಕ್ರೀಯಾಶೀಲರಾಗಿರುವ ಇಂತಹ ಸ್ವಾಮಿಗಳನ್ನು ಪಡೆದ ಈ ಪಟ್ಟಣವೇ ಧನ್ಯ ಎಂದರು.

ಈ ವೇಳೆ ಸೊರಟೂರ ಶಿವಯೋಗಿಶ್ವರ ಮಹಾಸ್ವಾಮಿಗಳ ಷಷ್ಠಾಬ್ದಿಯನ್ನು ನೆರವೇರಿಸಲಾಯಿತು. ನಂತರ ಬಣಜಿಗ ಸಮಾಜದ ಮಾಜಿ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ ಇವರಿಗೆ ನಾಡೋಜ ಅನ್ನದಾನೀಶ್ವರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವಿವಾಹ ಕಾರ್ಯಕ್ರಮದ ಪೌರೋಹಿತ್ಯವನ್ನು ಕುಕನೂರು ಪಟ್ಟಣದ ಹಿರೇಮಠದ ಸಿದ್ದಲಿಂಗಯ್ಯ ಸ್ವಾಮಿಗಳು ನಡೆಸಿಕೊಟ್ಟರು.

ನಂತರದಲ್ಲಿ ಕಾರ್ಯಕ್ಮದಲ್ಲಿ ಉಪಸ್ಥಿತರಿದ್ದ ವಿವಿಧ ಮಠಾದೀಶರ ಸಾನಿಧ್ಯದಲ್ಲಿ ಹಾಗೂ ನೂತನ ದಂಪತಿಗಳ ಸಮ್ಮುಖದಲ್ಲಿ, ನೆರೆದ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಜಯ ಘೋಶದೊಂದಿಗೆ ರಥೋತ್ಸವ ಜರುಗಿತು.

ಸಾನಿಧ್ಯವನ್ನು ಮಂಗಳೂರಿನ ಸಿದ್ದಲಿಂಗ ಸ್ವಾಮಿಗಳು, ಮಕ್ಕಳ್ಳಿ ಶಿವಾನಂದ ಸ್ವಾಮಿಗಳು, ಸೊರಟೂರ ಶಿವಯೋಗಿ ಸ್ವಾಮಿಗಳು ವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಮುಖರಾದ ಈರಪ್ಪ ಗುತ್ತಿ, ಕೊಟ್ರಪ್ಪ ತೋಟದ, ಶಿವಕುಮಾರ ನಾಗಲಾಪೂರಮಠ, ರಾಮಣ್ಣ ಮುಂದಲಮನಿ, ಯಲ್ಲಪ್ಪ ಕಲ್ಮನಿ, ಗಗನ ನೋಟಗಾರ, ವೀರಯ್ಯ ಉಳ್ಳಾಗಡ್ಡಿ, ವೀರಯ್ಯ ತೊಂಟದಾರ್ಯಮಠ, ಪ್ರಶಾಂತ ಆರುಬೆರಳಿನ ಇನ್ನಿತರರು ವೇದಿಕೆಯಲ್ಲಿದ್ದರು.

ವರದಿ : ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!