ಆಹಾರ ನಿರೀಕ್ಷಕರಿಲ್ಲದೆ ತಾಲೂಕಿನ ಜನತೆ ಪರದಾಟ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಂತಾಬಾಯಿ ಚವಡಿ ಸರಿಯಾಗಿ ನಿರ್ವಹಿಸುತ್ತಿಲ್ಲ.
ಆಹಾರ ನಿರೀಕ್ಷಕರಿಲ್ಲದೆ ತಾಲೂಕಿನ ಜನತೆ ಪರದಾಟ.
ಗಜೇಂದ್ರಗಡ : ಸತ್ಯ ಮಿಥ್ಯ ( ಜು – 14).
ಕಳೆದ ಕೆಲವು ದಿನಗಳ ಹಿಂದೆ ಗಜೇಂದ್ರಗಡ ತಾಲೂಕಾ ಆಹಾರ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ತಳ್ಳಿಹಾಳ ಅಕಾಲಿಕ ನಿಧನದ ನಂತರ ಖಾಲಿ ಇರುವ ಹುದ್ದೆಯಲ್ಲಿ ಖಾಯಂ ಅಧಿಕಾರಿಗಳು ಕಾರ್ಯರಂಭ ಮಾಡದ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ಬಹಳಷ್ಟು ತೊಂದರೆಯಾಗುತ್ತಿದೆ ಅದನ್ನು ಸರಿಪಡಿಸಲು ಗಜೇಂದ್ರಗಡ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಾಹಿಸುತ್ತಿರುವ ಶಾಂತಾಬಾಯಿ ಚವಡಿಯವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ತಹಸೀಲ್ದಾರ್ ಕಚೇರಿಗೆ ನಿತ್ಯ ಅಲೆಯುವಂತಾಗಿದೆ ಆದ್ದರಿಂದ ಶೀಘ್ರವೆ ಕಾಯಂ ಆಹಾರ ನಿರೀಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗಜೇಂದ್ರಗಡ ತಾಲೂಕು ಅಧ್ಯಕ್ಷರು ಶ್ರೀ ಯಮನೂರಪ್ಪ ಹರಿಜನ. ತಾಲೂಕು ಸಂಘಟನೆಯ ಪ್ರಧಾನಕಾರ್ಯದರ್ಶಿ.ಯಮನೂರಅಬ್ಬಿಗೇರಿ.ಗಜೇಂದ್ರಗಡ ನಗರ ಘಟಕದ ಅಧ್ಯಕ್ಷರು ಶರಣು ಅರಳಿಗಿಡದ. ರಮೇಶ್ ಗುಡಿಮನಿ ಚಂದ್ರು ಮಾದರ್ ಮುತ್ತು ಗೋಗೇರಿ ಶರಣಪ್ಪ ರಾಜೂರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.