ಬೀದಿಬದಿ ವ್ಯಾಪಾರ ಸ್ಥಳ ಬದಲಾವಣೆ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ.
ಗಜೇಂದ್ರಗಡ : ಸತ್ಯಮಿಥ್ಯ (ಆಗಸ್ಟ್ -18).
ನಗರದ ಡಬಲ್ ರೋಡ್ ಸೇರಿದಂತೆ ಕಾಲಕಾಲೇಶ್ವರ ವೃತ್ತದ ನಾಲ್ಕು ದಿಕ್ಕುಗಳಲ್ಲಿ ಬೀದಿಬದಿ ಇರುವಂತ ಹೂವಿನ ಅಂಗಡಿ, ಹಣ್ಣಿನ ಅಂಗಡಿ, ಬಟ್ಟೆ ಅಂಗಡಿ,ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರಸ್ಥರನ್ನು. ಗಜೇಂದ್ರಗಡ ಪುರಸಭೆಯವರು ರೋಣ ರಸ್ತೆಯ ಸರ್ಕಾರಿ ಆಸ್ಪತ್ರೆ ಮುಂಭಾಗದ ಬಯಲು ಜಾಗೆಗೆ ಸ್ಥಳಾಂತರ ಮಾಡಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಗಜೇಂದ್ರಗಡ ತಾಲೂಕಾ ಘಟಕ ಮತ್ತು ಪಟ್ಟಣ ವ್ಯಾಪಾರಸ್ಥರ ಸಮಿತಿ ಸದಸ್ಯರು ಶನಿವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೀದಿ ಬದಿ ವ್ಯಾಪಾರಿಗಳ ತಾಲೂಕಾ ಸಂಘಟನೆಯ ಅಧ್ಯಕ್ಷ ಭಾಷೆಸಾಬ್ ಕರ್ನಾಚಿ .ಗಜೇಂದ್ರಗಡ ನಗರವು ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ಕೇಂದ್ರವಾಗಿದೆ.ಇಲ್ಲಿನ ನೂರಾರು ಕುಟುಂಬಗಳು ಬೀದಿ ಬದಿ ವ್ಯಾಪಾರವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇದನ್ನು ಪರಿಗಣಿಸದ ಪುರಸಭೆ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದಿಂದ ಏಕಾಏಕಿ ಆಗಸ್ಟ್ 12 ರ ಸೋಮವಾರ ಕಾರ್ಯಾಚರಣೆ ನಡೆಸಿ ನಮ್ಮೆಲ್ಲರ ವ್ಯಾಪಾರದ ಅಂಗಡಿಗಳನ್ನು ಸೇರಿದಂತೆ ನಮ್ಮ ಸಾಮಾನು ಸರಂಜಾಮೂಗಳನ್ನು ತೆಗೆದುಕೊಂಡು ರೋಣ ರಸ್ತೆ ಸರ್ಕಾರಿ ಆಸ್ಪತ್ರೆ ಮುಂದಿರುವ ಜಾಗೆಗೆ ತೆಗೆದುಕೊಂಡು ಹೋಗಿ ಮತ್ತು ಅಲ್ಲಿಯೇ ವ್ಯಾಪಾರ ವಹಿವಾಟು ಮಾಡಲು ತಾಕೀತು ಮಾಡಿರುತ್ತಾರೆ. ಈ ರೀತಿಯ ಕ್ರಮ ಕೈಗೊಳ್ಳುವ ಮುನ್ನ ಗಜೇಂದ್ರಗಡ ಪಟ್ಟಣ ವ್ಯಾಪಾರ ಸಮಿತಿ ( ಟಿ ವಿ ಸಿ )ಯಲ್ಲಿ ಯಾವುದೇ ರೀತಿಯ ಚರ್ಚೆ, ಠರಾವು, ನೋಟೀಸ್ ಇಲ್ಲದೆ ತೆರವು ಕಾರ್ಯಾಚರಣೆ ಮಾಡಿದ್ದು ಖಂಡನೀಯ ಎಂದರು. ಈಗ ಸ್ಥಳಾಂತರ ಮಾಡಿರುವ ಬಯಲು ಜಾಗೆಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯಲು ನೀರು, ಶೌಚಾಲಯ, ಮಳಿಗೆಗಳ ಕೊರತೆ ಇದ್ದು ಮಳೆ ಗಾಳಿ ಬಿಸಿಲಿಗೆ ಬಹಳಷ್ಟು ತೊಂದರೆಯಾಗುತ್ತದೆ. ಇವೆಲ್ಲವನ್ನೂ ಗಮನಿಸಿಬೇಕಾದ ಪುರಸಭೆ ಅಧಿಕಾರಿಗಳು ಏಕಾಏಕಿ ಈ ರೀತಿಯ ಅವೈಜ್ಞಾನಿಕ ನಿರ್ಧಾರದಿಂದ. ವಾರದ ಗುಂಪು, ಫೈನಾನ್ಸ್, ಮತ್ತು ಬ್ಯಾಂಕ್ ಗಳಲ್ಲಿ ಸಾಲ ಮಾಡಿ ವ್ಯಾಪಾರ ಮಾಡುತ್ತಿರುವ ನಮ್ಮೆಲ್ಲರಿಗೂ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಮೊದಲಿದ್ದ ವ್ಯಾಪಾರ ವ್ಯವಸ್ಥೆಯನ್ನೇ ಜಾರಿಗೆ ತರಬೇಕು. ಅಲ್ಲದೇ ಬೀದಿ ಬದಿ ವ್ಯಾಪಾರಸ್ಥರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ ಎಂಬ ಅಪವಾದವಿದೆ ಅದಕ್ಕೆ ತೊಂದರೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ಕೆಲವರು ಮಾಡುವ ಅಪರಾಧಕ್ಕೆ ಎಲ್ಲರಿಗೂ ಶಿಕ್ಷೆ ಯಾವ ನ್ಯಾಯ ಎಂದರು.
ಈ ಸಂದರ್ಭದಲ್ಲಿ ಅನ್ವರ ಹಿರೇಕೊಪ್ಪ, ನಾಗರಾಜ ಗಾರಗಿ, ಮಹಾಂತೇಶ ಹೂಗಾರ, ಭಾಸೆಸಾಬ್ ಮಕಾನದಾರ, ಲಕ್ಷ್ಮಣ ಪಮ್ಮಾರ, ಶ್ರೀನಿವಾಸ ಮಿಠಗಲ, ಹನಮಂತ ಹೂಗಾರ, ಶಂಕ್ರಪ್ಪ ಪಮ್ಮಾರ, ಮಹಬೂಬ ಮಾಲ್ದಾರ ಇತರರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.