ಗದಗ : ಅಂತರಾಷ್ಟ್ರೀಯ ಮಾದಕ ದ್ರವ್ಯ ನಿರ್ಮೂಲನೆ ಅಂಗವಾಗಿ ಜಾಗೃತಿ ಅಭಿಯಾನ
ಜಿಲ್ಲಾ ಪೊಲೀಸ್ ಉಪವಿಭಾಗ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ನಿರ್ಮೂಲನೆ ಅಂಗವಾಗಿ ಜಾಗೃತಿ ಅಭಿಯಾನ

ಜಿಲ್ಲಾ ಪೊಲೀಸ್ ಉಪವಿಭಾಗ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ನಿರ್ಮೂಲನೆ ಅಂಗವಾಗಿ ಜಾಗೃತಿ ಅಭಿಯಾನ
ಗದಗ:ಸತ್ಯಮಿಥ್ಯ (ಜೂ-25).
ಮಾದಕ ದ್ರವ್ಯ ಸೇವನೆಯ ಪಿಡುಗನ್ನು ತೊಲಗಿಸಲು ಮತ್ತು ಕಳ್ಳಸಾಗಾಣಿಕೆಯನ್ನು ಸಂಪೂರ್ಣ ತೊಲಗಿಸುವ ಉದ್ದೇಶದಿಂದ ಗದಗದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ನಿರ್ಮೂಲನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗದಗ್ ಪೊಲೀಸ ಉಪವಿಭಾಗ ವತಿಯಿಂದ ಮುರ್ತುಜ್ ಖಾದ್ರಿ ಡಿ ಎಸ್ ಪಿ ಗದಗರವರ ನೇತೃತ್ವದಲ್ಲಿ ಸಿಪಿಐ ಶ್ರೀ ಧೀರಜ್ ಸಿಂದೆ. ಪಿ. ಐ. ಶ್ರೀ ಸಿದ್ದರಾಮೇಶ್ವರ ಗಡೆದ ಲಾಲಾಸಾಬ್ ಜೂಲಕಟ್ಟಿ ಹಾಗೂ ಪಿಎಸ್ಐ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಒಟ್ಟು 150 ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರು ರೋಡ್ ವಾಕ್ ಮೂಲಕ ಅಂತರಾಷ್ಟ್ರೀಯ ಮಾದಕ ದ್ರವ್ಯ ನಿರ್ಮೂಲನೆ ಅಂಗವಾಗಿ ಮುಳುಗುಂದ್ ನಾಕಾ ದಿಂದ ಜುಮ್ಮಾ ಮಸೀದಿ ಸರಾಪ್ ಬಜಾರ್. ಟಾಂಗೂಕೋಟ್. ಮಹೇಂದ್ರ ಕರ್ ಸರ್ಕಲ್ ಮಾರ್ಗವಾಗಿ ಗಾಂಧಿ ಸರ್ಕಲ್ ದಲ್ಲಿ ಮಾನವ ಸರಪಳಿ ನಿರ್ಮಿಸಿ. ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ವರದಿ : ಮುತ್ತು ಗೋಸಲ.