ತಂತ್ರಜ್ಞಾನ ಯುಗದಲ್ಲಿ ಸಂಸ್ಕಾರ ಸಂಪ್ರದಾಯ ಕಣ್ಮರೆ : ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ
ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸತ್ಯ ಮಿಥ್ಯ ಸಂಪಾದಕ ಚನ್ನು ಸಮಗಂಡಿ ಅಭಿಮತ
**ತಂತ್ರಜ್ಞಾನ ಯುಗದಲ್ಲಿ ಸಂಸ್ಕಾರ ಸಂಪ್ರದಾಯ ಕಣ್ಮರೆ : ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ :
ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸತ್ಯ ಮಿಥ್ಯ ಸಂಪಾದಕ ಚನ್ನು ಸಮಗಂಡಿ ಅಭಿಮತ
ಗಜೇಂದ್ರಗಡ:ಸತ್ಯ ಮಿಥ್ಯ (ಜು -13).
ಗಜೇಂದ್ರಗಡ ನಗರದ ಸಮೀಪದ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರದಂದು ನರ್ಸರಿ, ಎಲ್.ಕೆ.ಜಿ. ಯು.ಕೆ.ಜಿ. ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಶ್ರೀ ವಿಷ್ಣುತೀರ್ಥ ಪುರೋಹಿತರು ಹಾಗೂ ಬದರಿನಾರಾಯಣಚಾರ್ಯ ಜೋಷಿ ನೆರವೆರಿಸಿದರು.
ಬಳಿಕ ವಿಘ್ನ ನಿವಾರಕ ವಿಘ್ನೇಶ್ವರ ಹಾಗೂ ವಿದ್ಯಾದೇವತೆ ಸರಸ್ವತಿ ಪೂಜೆಯೊಂದಿಗೆ ಅಕ್ಷರಾಭ್ಯಾಸದ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಪುಟ್ಟ ಮಕ್ಕಳೊಂದಿಗೆ ಕುಳಿತ ತಂದೆ-ತಾಯಂದಿರು ತಟ್ಟೆಯ ಮೇಲೆ ಹರಡಿದ ಅಕ್ಷತೆಯಲ್ಲಿ ಅರಿಶಿಣದ ಕೊಂಬಿನಿಂದ ತಮ್ಮ ಮಕ್ಕಳ ಕೈಹಿಡಿದು ಸ್ವಸ್ತಿಕ್ ಚಿಹ್ನೆ ಬರೆಸಿದರು.
ಆ ನಂತರ ಸ್ಲೇಟ್ (ಪಾಠಿ )ಮೇಲೆ ಬಳಪದಿಂದ ಓಂ ಮತ್ತು ಶ್ರೀಕಾರ ಬರೆಸಿದ ನಂತರ ಅಕ್ಷರಾಭ್ಯಾಸ ಮಾಡಿಸಿದರು.
ಬಳಿಕ ಸತ್ಯಮಿಥ್ಯ ಪತ್ರಿಕೆಯ ಸಂಪಾದಕರಾದ ಚನ್ನು ಸಮಗಂಡಿ ಮಾತನಾಡಿ ಅಕ್ಷಾ ಎಜ್ಯುಕೇಷನ್ ಚಾರಿಟೇಬಲ್ ಟ್ರಸ್ಟ್ನ ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುವುದು. ಆಧುನಿಕ ಯುಗದಲ್ಲಿನ ಸಮಾಜದಲ್ಲಿನ ಜನತೆಯು ತಂತ್ರಜ್ಞಾನದ ಜೊತೆ ಜೊತೆಗೆ ಸಂಸ್ಕಾರ, ಸಂಪ್ರದಾಯಗಳು ಮಾಯವಾಗುತ್ತಿರುವ ಹಿನ್ನಲೆಯಲ್ಲಿ ಈ ಶಾಲೆಯಲ್ಲಿ ಇಂತಹ ಪಾರಂಪರಿಕವಾಗಿ ಬಂದ ಆಚರಣೆಗಳನ್ನು ಪಾಲನೆ ಮಾಡುತ್ತಾ ಬಂದಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಬಳಿಕ ಸಂಸ್ಥೆಯ ಚೇರ್ಮನ್ ಸೀತಲ ಓಲೇಕಾರ ಮಾತನಾಡಿ ಚಿಕ್ಕಂದಿನಲ್ಲೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವ ಮೂಲಕ ಉತ್ತಮ ಮೌಲ್ಯಗಳನ್ನು ಬಿತ್ತಬೇಕು. ನಮ್ಮ ಶಾಲೆಯಲ್ಲಿ ಮಕ್ಕಳ ಬೌದ್ಧಿಕ ಮತ್ತು ದೈಹಿಕವಾಗಿ ಸದೃಢಗೊಳಿಸಲು ವಿಭಿನ್ನ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿ ಮಗುವಿನಲ್ಲೂ ಇರುವ ಪ್ರತಿಭೆಗೆ ಪ್ರೋತ್ಸಾಹಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿಸಮಾಜ ಸೇವಕರಾದ ಕೆ.ಶ್ರೀನಿವಾಸ ಇದ್ದರು. ಶಾಲೆಯ ಮುಖ್ಯ ಶಿಕ್ಷಕಿ ನಾಜೀಯಾ ಮುದಗಲ್, ಅನುಷಾ ತಳವಾರ,ರೂಪಾ ಗೊಂದಳೆ, ಆಸ್ಮಾ ನಧಾಪ್,ಸಾವಿತ್ರಿ ಹಾವೇರಿ, ಕಿರಣ ನಿಡಗುಂದಿ, ರವಿ ನಿಡಗುಂದಿ, ಮುಸ್ತಾಕ ಉಟಗೂರ, ಆಕಾಶ ತಾಳಿಕೋಟಿ, ಪೃಥ್ವಿ ಗೊಂದಳೆ, ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಹಾಗೂ ಪಾಲಕರು ಇದ್ದರು.
ವರದಿ : ಸುರೇಶ ಬಂಡಾರಿ.