ವಿದ್ಯಾರ್ಥಿಯ ಸಾರ್ಥಕ ಜೀವನದ ಹಿಂದೆ ಗುರುವಿನ ಶ್ರಮವಿದೆ.
ಹಳೇ ವಿದ್ಯಾರ್ಥಿಗಳ ಸಮಾವೇಶ, ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ.
ರೋಣ:ಸತ್ಯಮಿಥ್ಯ (ಡಿ -11)
ಗುರು-ಶಿಷ್ಯರ ಬಾಂಧವ್ಯ ತಾಯಿ-ಮಗುವಿನ ಸಂಬಂಧ ಇದ್ದಂತೆ ಪ್ರತಿ ವಿದ್ಯಾರ್ಥಿಯ ಬದುಕಿನ ಸಾರ್ಥಕತೆಯ ಜೀವನದ ಹಿಂದೆ ಗುರುವಿನ ಶ್ರಮವಿದೆ ಅಂಜುಮನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಲ್ಲಹಾಜ್ ಎ. ಐ. ಶೇಖ್ ಹೇಳಿದರು.
ರೋಣ ನಗರದ ಅಂಜುಮನ್ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ 1996-97ನೇ ಸಾಲಿನ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ 2000-01ನೇ ಸಾಲಿನ ಅಂಜುಮನ್ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಸಮಾವೇಶ, ಗುರುವಂದನ ಹಾಗೂ ಸ್ನೇಹ ಸಮ್ಮಿಲನದಲ್ಲಿ ಮಾತನಾಡಿದರು.
ವಿದ್ಯಾರ್ಥಿಯನ್ನು ಭವಿಷ್ಯದ ಬದುಕಿಗೆ ಸಿದ್ಧಗೊಳಿಸುವ ಶಕ್ತಿ ಗುರುವಿಗಿದೆ. ಗುರುವಿನ ಸೇವೆಯ ಪ್ರಾಮಾಣಿಕತೆಯಿಂದ, ಸ್ಮರಣೆಯಿಂದ ದೇಶಕ್ಕೆ ಒಳ್ಳೆಯದನ್ನು ನೀಡಲು ಸಾಧ್ಯವಿದೆ ಎಂದರು. ಕಲಿಕೆ ಮುಗಿದ ನಂತರದ ವರ್ಷವೇ ಶಿಕ್ಷಣ ಸಂಸ್ಥೆ, ಗುರುಗಳನ್ನು ಮರೆಯುವ ಇಂದಿನ ದಿನಗಳಲ್ಲಿ ಅನೇಕ ವರ್ಷಗಳ ನಂತರ ನೆನಪಿಸಿಕೊಂಡು ಮಾದರಿ ರೂಪದಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಇಂದಿನ ವಿದ್ಯಾರ್ಥಿಗಳಿಗೆ ಸ್ಪರ್ತಿಯಾಗಿದೆ. ಎಷ್ಟೇ ಎತ್ತರಕ್ಕೆ ಬೆಳೆದರು ವಿದ್ಯೆದಾನ ಮಾಡಿದ ಗುರುಗಳನ್ನು ಸ್ಮರಿಸದಿದ್ದರೆ ಅದಕ್ಕೆ ಅರ್ಥ ಇರುವುದಿಲ್ಲ. ಅದಕ್ಕಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಶ್ಲಾಘನೀಯ ಎಂದರು.
ಇಸ್ಲಾಂ ಕಮೀಟಿ ಅಧ್ಯಕ್ಷ ಭಾವಾಸಾಬ ಬೆಟಗೇರಿ, ಜನಾಬ ಎನ್. ಎ. ಮುಲ್ಲಾ, ಜನಾಬ ಎ. ಎಂ. ಇಂಡಿಕರ, ಎ. ಎಸ್. ಖತೀಬ, ಎಸ್. ಎಂ. ಮುಧೋಳ, ಎಸ್. ಎ. ಖತೀಬ, ಎಂ. ಎ. ಯಾದವಾಡ, ಭಾವಜಾನ್ ಗುಡುನಾಯ್ಕರ, ಶಾಹೀದಬಾನು ಮುಲ್ಲಾ, ಅಬ್ದುಲ್ ಮಜೀದ ಕೊಪ್ಪಳ, ಎಂ. ಎ. ಇಟಗಿ ಇದ್ದರು.
ವರದಿ : ಚನ್ನು. ಎಸ್.