ಬೆಂಗಳೂರು ಕೆಂಪೇಗೌಡರ ದೂರದೃಷ್ಟಿಗೆ ಹಿಡಿದ ಕೈಗನ್ನಡ -ಅಪ್ಪಯ್ಯ ಗುದ್ಲಿ
ಮೂಡಲಗಿ ನಾಡಪ್ರಭು ಕೆಂಪೇಗೌಡ ಜಯಂತಿ

ಮೂಡಲಗಿ ನಾಡಪ್ರಭು ಕೆಂಪೇಗೌಡ ಜಯಂತಿ
ಮೂಡಲಗಿ ;ಸತ್ಯಮಿಥ್ಯ ( ಜೂ -28)
ವಿಜಯ ನಗರ ಸಾಮ್ರಾಜದಲ್ಲಿ ಅವಿವಾಹಿತ ಮಹಿಳೆಯರು ತಮ್ಮ ಕಿರು ಬೆರಳನ್ನು ಕತ್ತರಿಸುತ್ತಿದ್ದ ಪದ್ದತ್ತಿಯನ್ನು ರದ್ದು ಮಾಡಿದ್ದು ಕೆಂಪೇಗೌಡರು, ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರ ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ಈಗ ರಾಜ್ಯದ ರಾಜಧಾನಿಯಾಗಿದೆ ಎಂದು ನಾಗನೂರ ಸರ್ಕಾರಿ ಪಿ ಯು ಕಾಲೇಜಿನ ಉಪನ್ಯಾಸಕ ಅಪ್ಪಯ್ಯ ಗುದ್ಲಿ ಹೇಳಿದರು
ಗುರುವಾರ ಶ್ರೀ ಪಾದಬೋಧಕ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ತಾಲೂಕಾಡಳಿತ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕೆಂಪೇಗೌಡರು ಮಲ್ಲಯುದ್ದದಲ್ಲಿ ಭಾಗಿಯಾಗಿ ಗೆಲವು ಸಾಧಿಸುತ್ತಾರೆ ಇದು ಇವರ ಧೈರ್ಯದ ಒಂದು ಭಾಗಿದೆ. ನೀರಿನ ಸಮಸ್ಯ ಬಾರದಂತೆ ಕೆಂಪೇಗೌಡರು ಬೆಂಗಳೂರಿನಲ್ಲಿ ಇಂದಿಗೂ ನಿರ್ಮಿಸಿದ ಕೆರೆಗಳನ್ನು ಕಾಣಬಹುದಾಗಿದೆ.ವೃತ್ತಿಯಾದಾರಿತ ಮಾರುಕಟ್ಟೆ ನಿರ್ಮಾಣ.ಗವಿ ಗಂಗಾಧರ ಹಾಗೂ ಹಲವು ದೇವಾಲಯ ನಿರ್ಮಾಣ ಜೀರ್ಣೋದ್ಧಾರ. ಅನಾಥರಿಗೆ ವಸತಿ.ಮಕ್ಕಳಿಗೆ ಶಿಕ್ಷಣ ವವ್ಯಸ್ಥೆ ಹಿಂದಿನ ಕಾಲದಲ್ಲಿಯೇ ಮಾಡಿದ್ದಾರೆ ಎಂದರು,
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ. ಯಲಕಂಹದ ದೂರೆ. ವಿಜಯನಗರದ ಸಾಮ್ರಾಜದ ಸಾಮಂತ ರಾಜ್ಯ ಕೆಂಪೇಗೌಡ ದೂರದೃಷ್ಟಿಯ ಪರಿಣಾಮವಾಗಿ ಇಂದು ಬೆಂಗಳೂರ ಅತ್ಯಂತ ಬೃಹದಾಕಾರವಾಗಿ ಬೆಳೆದು ನಿತ್ತಿದೆ ಎಂದರೆ ಅದು ಅವರ ಕನಸಾಗಿತ್ತು ಎಂದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಮಹಾದೇವ ಸನಮೂರಿ ಮಾತನಾಡಿ, ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರಿಗೆ ತಮ್ಮ ನಾಡಿನಲ್ಲೂ ಈ ಎಲ್ಲಾ ವೈಭವಗಳನ್ನು ನೋಡಬೇಕು ಎಂಬ ಬಯಕೆಯಿಂದ ಹಂಪಿಗೆ ಭೇಟಿ ಕೊಟ್ಟು ನಗರಗಳನ್ನು ಸ್ಥಾಪಿಸಿದ ಕಿರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು
ವೇದಿಕೆಯಲ್ಲಿ ತಾ.ಪಂ ಸಿ ಇ ಒ ಎಫ್ ಜಿ ಚಿನ್ನನವರ.ಮಹಾವಿದ್ಯಾಲಯದ ಪ್ರಾಚಾರ್ಯ ಮಹೇಶ ಕಂಬಾರ ಉಪಸ್ಥಿತರಿದ್ದರು,
ಮುಂಜಾನೆ ನಗರದ ಪ್ರಮುಖ ರಸ್ತೆಯಲ್ಲಿ ಕೆಂಪೇಗೌಡ ಭಾವಚಿತ್ರ ಮೆರವಣಿಗೆ ಶಾಲಾ.ಕಾಲೇಜಿನ ವಿದ್ಯಾರ್ಥಿಗಳು ಅಧಿಕಾರಿಗಳು ಉಪಸ್ಥಿತಿಯಲ್ಲಿ ಜರುಗಿತು. ಟಿ ಬಸವರಾಜ ನಿರೋಪಿಸಿದರು, ಶೀರಸ್ಥೆದಾರ ಪರಶುರಾಮ ನಾಯ್ಕ ವಂದಿಸಿದರು,
ವರದಿ : ಶಿವಾನಂದ ಮುಧೋಳ್.