ಗಣೇಶೋತ್ಸವದಲ್ಲಿ ಭಕ್ತರ ಮನ ಸೆಳೆಯುತ್ತಿರುವ “ಯಾತಾಳಿ ಚನ್ನಬಸಪ್ಪಜ್ಜ” ಪವಾಡಗಳ ದೃಶ್ಯಾವಳಿ.
ಬೆಟಗೇರಿ:ಸತ್ಯಮಿಥ್ಯ(ಸ-15).
ನಗರದ ಬೆಟಗೇರಿಯ ಸಾರ್ವಜನಿಕ ಶ್ರೀ ಗಜಾನನೋತ್ಸವ ಮಂಡಳಿಯ ಈ ವರ್ಷದ ಅತ್ಯದ್ಭುತ ದೃಶ್ಯಾವಳಿಗಳನ್ನು ಒಳಗೊಂಡಂತೆ ನೋಡುಗರ ಮನ ಸೆಳೆಯುವಂತೆ ದೃಶ್ಯಾವಳಿಗಳನ್ನು ಏರ್ಪಡಿಸಲಾಗಿದ್ದು ಅದರ ವೀಕ್ಷಣೆಗೆ ಸಾವಿರಾರು ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಕಳೆದ 49 ವರ್ಷಗಳಿಂದ ಸಾಮಾಜಿಕ, ಪೌರಾಣಿಕ,ಹಾಗೂ ಭಕ್ತಿ ಪ್ರಧಾನವವಾಗಿರವಂತಹ ಗೊಂಬೆಗಳ ದೃಶ್ಯಾವಳಿಗಳನ್ನು ಮಾಡುತ್ತಾ ಬಂದಿದ್ದು ಗಜಾನನ ಸಮಿತಿಗೆ ಶುಭಾಶಯಗಳೂಂದಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಬೆಟಗೇರಿ “ಯಾತಾಳಿ ಚನ್ನಬಸಪ್ಪಜ್ಜನ” ಪವಾಡಗಳ ಕುರಿತಂತೆ ದೃಶ್ಯಾವಳಿಗಳನ್ನು ಏರ್ಪಡಿಸಲಾಗಿದ್ದು ಅದರಲ್ಲಿ ಬರುವ ಯಾತಾಳಿ ಚೆನ್ನಬಸಪ್ಪಜ್ಜನ ಪವಾಡಗಳ ಕುರಿತಂತೆ ಅಳಿಯ ಹಾಗೂ ಮಗಳ ನಡುವಿನ ಸಂಭಾಷಣೆಯಲ್ಲಿ ಮಗಳು ತಂದೆಯ ಪವಾಡಗಳ ಬಗ್ಗೆ ಹೇಳುವಾಗ ಅಳಿಯನಿಗೆ ಕೋಪ ಬಂದು ನಿಮ್ಮ ಅಪ್ಪನ ಪವಾಡವನ್ನು ಎಷ್ಟು ಹೇಳತ್ತಿಯಾ ನಾನು ನಿಮ್ಮ ಅಪ್ಪನ ಪವಾಡವನ್ನು ನೋಡುತ್ತೇನೆ ಎಂದು ಹೇಳುತ್ತಾನೆ ಆಗ ಮಗಳು ಮೂರು ಕಲ್ಲನ್ನು ಎಸೆಯಲು ಹೇಳುತ್ತಾಳೆ ಒಂದನೇ ಕಲ್ಲನ್ನು ಎಸೆದಾಗ ಮಾಯವಾಗುತ್ತಾಳೆ ಎರಡನೇ ಕಲ್ಲುನ್ನು ಎಸೆದಾಗ ಹುಲಿಯ ವೇಷದಲ್ಲಿ ಬರುವ ಮಗಳು “ಹುಲಿಯ” ಆಗಮನದಿಂದ ನೋಡುಗ ಪ್ರೇಕ್ಷಕರಲ್ಲಿ ಹಾಸ್ಯದ ಹಾಗೂ ಆಶ್ಚರ್ಯಕರ ವಾತಾವರಣವನ್ನು ಸೃಷ್ಟಿಸುವ ಹಾಗೆ ದೃಶ್ಯಾವಳಿಗಳನ್ನು ಮಾಡಲಾಗಿದ್ದು ನಂತರ ಯಾತಾಳಿ ಚನ್ನಬಸಪ್ಪಜ್ಜ ಬಂದು ಹುಲಿಯ ವೇಷದಲ್ಲಿದ್ದ ಮಗಳನ್ನು ಪುನಹ ಮನುಷ್ಯರನ್ನಾಳಾಗಿ ಮಾಡುತ್ತಾನೆ ನಂತರ ಯಾತಾಳೆ ಚನ್ನಬಸಪ್ಪಜ್ಜನ ಪವಾಡವನ್ನು ನೋಡಲು ಇನ್ನೊಂದು ಪವಾಡವನ್ನು ಸೃಷ್ಟಿಸುತ್ತಾನೆ ರೈತನ ಕೈಯಲ್ಲಿದ್ದ ಹಗ್ಗವನ್ನು ಹಾವಾಗಿ ಪರಿವರ್ತಿಸಿ ಪುನಹ ಹಗ್ಗವನ್ನಾಗಿ ಮಾಡಿ ತೋರಿಸುವ ದೃಶ್ಯವು ಅಧ್ಭೂತವಾಗಿದೆ.
ದೃಶ್ಯಾವಳಿಗಳ ಗುರುಗಳಾದ ಈರಣ್ಣ ಗಂಜಿಯವರು ದೃಶ್ಯಾವಳಿಗಳ ಕಥೆಯನ್ನು ಮಾಡಿ ಪಾತ್ರಧಾರಿಗಳನ್ನು ಆಯ್ಕೆ ಮಾಡಿಕೊಂಡು ಗೊಂಬೆಗಳ ದೃಶ್ಯಾವಳಿಗಳಲ್ಲಿ ಗೊಂಬೆ ಆಡಿಸುವವರಿಗೆ ಪ್ರತಿ ವರ್ಷವು ಸಲಹೆ ಸೂಚನೆಗಳನ್ನು ನೀಡುವುದರೊಂದಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ.
ಗಣೇಶೋತ್ಸವದಲ್ಲಿ ದೀಪಾಲಂಕಾರಗಳು ಹಾಗೂ ದೃಶ್ಯಾವಳಿಗಳಲ್ಲಿ ಲೈಟಿಂಗ್ ವ್ಯವಸ್ಥೆಯನ್ನು ಉಮೇಶ,ರಾಜು, ಅವರು ಮಾಡುತ್ತಿದ್ದಾರೆ, ದೃಶ್ಯಾವಳಿಗಳಲ್ಲಿ ಬೊಂಬೆಯ ಚಾಲಕರಾಗಿ ಚಂದ್ರು ಮುತ್ತು ರಾಜು ಪ್ರವೀಣ ಕದಡಿ,ಪವಾರ್ ಪ್ರಕಾಶ್ ರಾಮು, ಪ್ರವೀಣ್, ಕಿರಣ್, ಶ್ರೀ ಸಾಯಿ, ಹನುಮಂತ, ಅಮೋಘ, ಅಮರ, ಪ್ರೀತಮ, ಅಕೋಲ, ಅಮೃತಾ, ವೀರೇಶ್, ಮಹದೇವ,ಮಾಲಿಂಗ, ಪ್ರವೀಣ್ ಶಿವಾನಂದ, ಈಶ್ವರ, ಸುದೀಪ, ಮಂಜುನಾಥ್, ವಾಸು, ಕೊಟ್ರೇಶ, ಪ್ರೀತಮ್ ವಿನಾಯಕ ದೊಡ್ಡಮನಿ, ಮಂಜು ಗಂಜಿ ವೀರೇಶ,ಪ್ರಕಾಶ ಸೇರಿದಂತೆ ಯುವಕರು ಭಾಗವಹಿಸಿ ದೃಶ್ಯಾವಳಿಯಲ್ಲಿ ಗೊಂಬೆಗಳಿಗೆ ಚಾಲನೆ ಮಾಡುತ್ತಿದ್ದಾರೆ.
ಶ್ರೀ ಸಾರ್ವಜನಿಕ ಗಜಾನನ ಮಂಡಳಿಯಿಂದ ಕಳೆದ 49 ವರ್ಷಗಳಿಂದ ಪೌರಾಣಿಕ ಹಾಗೂ ಸಾಮಾಜಿಕ ಸನ್ನಿವೇಶಗಳನ್ನು ಒಳಗೊಂಡಂತೆ ದೃಶ್ಯಾವಳಿಗಳನ್ನು ಏರ್ಪಡಿಸುತ್ತಾ ಜನರ ಮೆಚ್ಚುಗೆಗೆ ಹಾಗೂ ಈ ವರ್ಷದ ದೃಶ್ಯಾವಳಿಗೆ ಜನರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಈ ದೃಶ್ಯಾವಳಿಯನ್ನು ಜಿಲ್ಲೆಯ ವಿವಿಧ ಕಡೆಗಳಿಂದ ಜನರು ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವರದಿ : ಮುತ್ತು ಗೋಸಲ್